ಬೇಸಿಗೆ ಕಾಲವು ತೀವ್ರ ಶೆಖೆ ಹಾಗೂ ಆರ್ದ್ರತೆಯಿಂದ ಕೂಡಿದ್ದು, ಗರಿಷ್ಟ ತಾಪಮಾನವು ಸುಮಾರು 37 ಡಿಗ್ರಿ ಗಳಷ್ಟಾಗಬಹುದು. ಏಪ್ರಿಲ್ ಹಾಗೂ ಮೇ ತಿಂಗಳುಗಳಲ್ಲಿ ಹೌರಾದಲ್ಲಿ ತೀವ್ರ ಬಿಸಿ ಗಾಳಿ ಬೀಸುತ್ತದೆ.
ಕರಾವಳಿ ನಗರವಾದ ಇಲ್ಲಿ ಮಳೆಗಾಲ ಜೋರಾಗಿದ್ದು, ಈ ಸಮಯದಲ್ಲಿ ಜೋರು ಗಾಳಿಯೊನ್ದಿಗೆ ಮಳೆ ಬೀಳುತ್ತದೆ. ಜುಲೈ ಹಾಗೂ ಆಗಸ್ಟ್ ತಿಂಗಳುಗಳಲ್ಲಿ ಜೋರು ಮಳೆ ಸುರಿಯುತ್ತದೆ.
ಚಳಿಗಾಲದ ಸಮಯ ತುಂಬಾ ಆನಂದದಾಯಕವಾಗಿದ್ದು, ತಾಪಮಾನ 10 ಡಿಗ್ರಿ ಗಳಿಗೆ ಕುಸಿಯುತ್ತದೆ. ಇಲ್ಲಿ ಚಳಿಗಾಲ ಅಕ್ಟೋಬರ್ ನಲ್ಲಿ ಶುರುವಾಗಿ ಫೆಬ್ರವರಿ ಯಲ್ಲಿ ಕೊನೆಯಾಗುತ್ತದೆ.