Search
  • Follow NativePlanet
Share
ಮುಖಪುಟ » ಸ್ಥಳಗಳು » ಹೋಶಂಗಾಬಾದ್ » ಹವಾಮಾನ

ಹೋಶಂಗಾಬಾದ್ ಹವಾಮಾನ

ಹೋಶಂಗಾಬಾದ್ ಗೆ ಭೇಟಿ ನೀಡಲು ಅಕ್ಟೋಬರ್ ನಿಂದ ಜೂನ್ ವರೆಗಿನ ತಿಂಗಳುಗಳು ಸೂಕ್ತ. ಈ ಸಮಯದಲ್ಲಿ ತಾಪಮಾನ ತಂಪು ಹಾಗೂ ಹಿತವಾಗಿರುತ್ತದೆ. ಈ ಸಮಯದಲ್ಲಿ ಮಳೆ ಕೂಡಾ ಕಡಿಮೆಯಾಗಿರುತ್ತದೆ. 

ಬೇಸಿಗೆಗಾಲ

ಹೋಶಂಗಾಬಾದ್ ನಲ್ಲಿ ಬೇಸಗೆ ಕಾಲದಲ್ಲಿ ತಾಪಮಾನವು 32 ಡಿಗ್ರಿಗಳಷ್ಟಿರುತ್ತದೆ. ಇಲ್ಲಿನ ಹವಾಮಾನವು ವರ್ಷ ಪೂರ್ತಿ ಹಿತವಾಗಿರುವುದರಿಂದ ಯಾತ್ರಿಗಳು ನೆಮ್ಮದಿಯಿಂದ ನಗರ ಪರ್ಯಟನೆ ಮಾಡಬಹುದು. ಈ ಸಮಯದಲ್ಲಿ ಯಾತ್ರಿಗಳು ಕಾಟನ್ ಬಟ್ಟೆ ಹಾಗೂ ಛತ್ರಿ ಕೊಂಡೊಯ್ಯುವುದು ಉಚಿತ.

ಮಳೆಗಾಲ

ಮಳೆಗಾಲದಲ್ಲಿ ಹೋಶಂಗಾಬಾದ್ ನ್ನು ನೋಡಲು ತುಂಬಾ ಸುಂದರವಾಗಿರುತ್ತದೆ. ಇಲ್ಲಿ ಜೂನ್ ನಿಂದ ಸೆಪ್ಟೆಂಬರ್ ವರೆಗೆ ಮಳೆ ಸುರಿಯುತ್ತದೆ.  ಹೋಶಂಗಾಬಾದ್ ನಲ್ಲಿ ಸುಮಾರು 1343.6 ಮಿ. ಮೀ ಮಳೆ ಸುರಿಯುತ್ತದೆ. ಕೆಲವೊಮ್ಮೆ ಇಲ್ಲಿ ಭಾರಿ ಮಳೆಯಾಗುವುದರಿಂದ, ಮಳೆಗಾಲದಲ್ಲಿ ಹೋಶಂಗಾಬಾದ್ ಗೆ ಭೇಟಿ ನೀಡುವುದು ಒಳ್ಳೆಯದಲ್ಲ.

ಚಳಿಗಾಲ

ಚಳಿಗಾಲವು ನವೆಂಬರ್ ನಿಂದ ಫೆಬ್ರವರಿ ತನಕ  ಇರುತ್ತದೆ. ಚಳಿಗಾಲದಲ್ಲಿ ಇಲ್ಲಿನ ತಾಪಮಾನ 19.42 ಡಿಗ್ರಿಗಳಿಗಿಂತ ಕಡಿಮೆ ಇರುವುದಿಲ್ಲ. ಆದುದರಿಂದ ಈ ಸಮಯದಲ್ಲಿ ಹವಾಮಾನ ತಂಪು ಮತ್ತು ಹಿತವಾಗಿರುತ್ತದೆ. ಚಳಿಗಾಲದಲ್ಲಿ ಪ್ರವಾಸಿಗರು ಹೋಶಂಗಾಬಾದ್ ಗೆ ಭೇಟಿ ನೀಡಲು ಸೂಕ್ತವಾಗಿರುತ್ತದೆ.