Search
  • Follow NativePlanet
Share
ಮುಖಪುಟ » ಸ್ಥಳಗಳು » ಹೊರನಾಡು » ಹವಾಮಾನ

ಹೊರನಾಡು ಹವಾಮಾನ

ಹೊರನಾಡು ಪ್ರದೇಶಕ್ಕೆ ಭೇಟಿ ನೀಡಲು ಸೂಕ್ತ ಸಮಯವೆಂದರೆ ಅಕ್ಟೋಬರ್  ನಿಂದ  ಮಾರ್ಚ್ ವರೆಗೆ ಎನ್ನಬಹುದು.

ಬೇಸಿಗೆಗಾಲ

(ಏಪ್ರಿಲ್ ನಿಂದ ಜುಲೈ): ಹೊರನಾಡಿನ ವಾತಾವರಣವು ಬೇಸಿಗೆ ಕಾಲದಲ್ಲಿ ಅತಿ ಹೆಚ್ಚು ಬಿಸಿಲು, ಒಣ ಹವೆ ಮತ್ತು ಸೆಖೆಯ ಅನುಭವ ನೀಡುತ್ತದೆ. ದಿನದದಲ್ಲಿ ಉಷ್ಣಾಂಶದ ಗರಿಷ್ಠ ಮಟ್ಟ 35 ಡಿಗ್ರಿ ಇದ್ದು ರಾತ್ರಿ ಸಮಯದಲ್ಲಿ  30 ಡಿಗ್ರಿಗೆ ಇಳಿಕೆಯಾಗಿರುತ್ತದೆ. ಪ್ರವಾಸಿಗರು ಹೆಚ್ಚು ಬಿಸಿಲು ಮತ್ತು ಸೆಖೆಯ ವಾತಾವರಣದ ಕಾರಣ ಬೇಸಿಗೆಗಾಲದಲ್ಲಿ ಹೊರನಾಡಿಗೆ ಭೇಟಿಕೊಡಲು ಹಿಂಜರಿಯುತ್ತಾರೆ.

ಮಳೆಗಾಲ

(ಆಗಸ್ಟ್ ನಿಂದ ಅಕ್ಟೋಬರ್): ಬೇಸಿಗೆಯು ಮುಗಿಯುತ್ತಿದ್ದಂತೆಯೇ ಆರಂಭಗೊಳ್ಳುವ ಮಳೆಗಾಲದಲ್ಲಿ ಈ ದೇವಾಲಯದ ನಗರ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುತ್ತದೆ.

ಚಳಿಗಾಲ

(ನವೆಂಬರ್ ನಿಂದ ಮಾರ್ಚ್): ಹೊರನಾಡು ಹಿತಕರವೆನಿಸುವ ವಾತಾವರಣದೊಂದಿಗೆ ತಂಪಾದ ಚಳಿಗಾಲದಲ್ಲಿ ಉಷ್ಣಾಂಶದ ಕನಿಷ್ಠ ಮಟ್ಟ 17ಡಿಗ್ರಿ  ಮತ್ತು ಗರಿಷ್ಠ ಮಟ್ಟ 20 ಡಿಗ್ರಿವರೆಗೂ ಏರಿಕೆಯಾಗುತ್ತದೆ. ಚಳಿಗಾಲದಲ್ಲಿ ಇಲ್ಲಿನ ಸುಂದರ ವಾತಾವರಣದ ಕಾರಣ ಈ ಸಮಯದಲ್ಲಿ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ.