Search
 • Follow NativePlanet
Share
ಮುಖಪುಟ » ಸ್ಥಳಗಳು» ಹಾವ್ ಲಾಕ್ ದ್ವೀಪ

ಹಾವ್ ಲಾಕ್ ದ್ವೀಪ : ಅಂಡಮಾನಿನ ಜೀವನಾಡಿ

12

ಬ್ರಿಟೀಷ್ ವಸಾಹತು ಕಾಲದಲ್ಲಿ ಜನರಲ್ ಆಗಿದ್ದ ಹೆನ್ರಿ ಹಾವ್ ಲಾಕ್ ಹೆಸರನ್ನು ಈ ದ್ವೀಪಕ್ಕಿಡಲಾಗಿದೆ. ಇದು ಅಂಡಮಾನಿನ ಅತ್ಯಂತ ಆಕರ್ಷಣೀಯ ತಾಣವಾಗಿದ್ದು ಪ್ರತಿ ವರ್ಷ ಸಾವಿರಾರು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಇಲ್ಲಿನ ಐದು ಊರುಗಳಾದ ಗೋವಿಂದ ನಗರ, ರಾಧಾ ನಗರ, ಬಿಜೋಯ್ ನಗರ, ಶ್ಯಾಮ್ ನಗರ, ಕೃಷ್ಣ ನಗರ ತಮ್ಮದೆ ಊರಿನ ಹೆಸರಿನ ಕಡಲ ತಡಿಗಳನ್ನು ಹೊಂದಿವೆ. ರಾಧಾನಗರ ಕಡಲ ಕಿನಾರೆ ಇವುಗಳಲ್ಲಿ ಅತ್ಯಂತ ಉತ್ತಮವಾದ ಕಡಲ ಕಿನಾರೆಯಾಗಿದ್ದು ಇದಕ್ಕೆ ಟೈಮ್ ಮ್ಯಾಗಜೀನ್ 2004 ರಲ್ಲಿಯೇ ಏಷ್ಯಾದ ಅತ್ಯಂತ ಆಕರ್ಷಣೀಯ ಕಡಲ ಕಿನಾರೆ ಎಂಬ ಬಿರುದು ಕೊಟ್ಟಿದೆ.

ಹಾವ್ ಲಾಕ್ ದ್ವೀಪವು ರಾಜಧಾನಿ ನಗರ ಪೋರ್ಟ್ ಬ್ಲೇರ್ ನಿಂದ 55 ಕಿ.ಮೀ ದೂರ ಈಶಾನ್ಯಕ್ಕಿದೆ ಹಾಗೂ ಇಲ್ಲಿಗೆ ಪ್ರತಿದಿನ ಎರಡು ಮೂರು ಹಡಗು ಸಂಚಾರವಿರುತ್ತದೆ. ಇಲ್ಲಿನ ಹಡಗುಗಳ ದರಗಳು ಕೈಗೆಟುಕುವಂತಿದ್ದು 5 -6 ಅಮೇರಿಕನ್ ಡಾಲರ್ ಗಳಾಗಿವೆ. ದಿಮ್ಮಿ ತೆಪ್ಪದ ದೋಣಿಗಳು ಸ್ವಲ್ಪ ದುಬಾರಿಯಾಗಿವೆ ಹಾಗೂ ನಿಮಗೆ ಸಮಯ ಅತಿ ಮುಖ್ಯ ವಾಗಿದ್ದರೆ ಪವನ್ ಹಂಸ್ ಹೆಲಿಕಾಪ್ಟರ್ ಗಳನ್ನು ಬಳಸಿ ತಲುಪುವುದು ಸೂಕ್ತ.

ಒಮ್ಮೆ ನೀವು ಹಾವ್ ಲಾಕ್ ದ್ವೀಪವನ್ನು ತಲುಪಿದರೆ, ಬಳಿಕ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯಲು ನಡೆದುಕೊಂಡು ಸಾಗುವುದೆ ಸೂಕ್ತ.  ಇಲ್ಲಿ ನಡೆಯುತ್ತಾ ನೀವು ಹಲವು ಕಡಲ ಕಿನಾರೆಗಳು ಹಾಗೂ ಮಾರುಕಟ್ಟೆಗಳನ್ನು ಕಾಣಬಹುದು. ರಾಧಾ ನಗರ ಕಡಲ ಕಿನಾರೆ ಶುದ್ಧ ಬಿಳಿ ಬಣ್ಣದ ಮರಳು ಮತ್ತು ಪಚ್ಚೆ ಬಣ್ಣದ ಬಂಡೆಗಳನ್ನು ಹೊಂದಿದ್ದು ಸಂಜೆಯ ವೇಳೆಯನ್ನು ಕಳೆಯಲು ಅತ್ಯಂತ ಸೂಕ್ತವಾದ ಸ್ಥಳವಾಗಿದೆ. ಎಲಿಫೆಂಟ್ ಬೀಚ್ ರಾಧಾನಗರ ಬೀಚ್ ನಿಂದ ನಡೆದುಕೊಂಡು ಹೋಗಬಹುದಾದಷ್ಟು ದೂರದಲ್ಲಿದೆ ಹಾಗೂ ಈ ಪ್ರಯಾಣವನ್ನು ನೀವು ಎಂದೂ ಮರೆಯಲಾರಿರಿ. ನಡೆದುಕೊಂಡು ಹೋಗುವುದು ಇಷ್ಟವಿಲ್ಲದಿದ್ದರೆ ಆಟೋ ಸೌಲಭ್ಯವೂ ಇಲ್ಲಿ ಲಭ್ಯವಿದ್ದು 2 ಅಮೇರಿಕನ್ ಡಾಲರ್ ಅಥವಾ ಭಾರತೀಯ ರೂಪಾಯಿಗಳಲ್ಲಿ 100 ರೂಪಾಯಿಗಳಾಗುತ್ತದೆ. ಅಥವಾ ಒಂದು ಕ್ಯಾಬ್ ಬಾಡಿಗೆ ಪಡೆಯಬಹುದು ಅಥವಾ ಒಂದು ದ್ವಿಚಕ್ರ ವಾಹನವನ್ನು ಒಂದು ದಿನಕ್ಕೆ ಬಾಡಿಗೆಗೆ ಪಡೆಯುವ ಅವಕಾಶವೂ ಇಲ್ಲಿದ್ದು ಇದು 4 ಅಮೇರಿಕನ್ ಡಾಲರ್ ಅಥವಾ 200 ರೂಪಾಯಿಗಳಿಗಿಂತ ಹೆಚ್ಚಾಗುವುದಿಲ್ಲ.

ಸ್ಕೂಬಾ ಡೈವಿಂಗ್ ಇಲ್ಲಿನ ಅತ್ಯಂತ ಆಕರ್ಷಕ ಚಟುವಟಿಕೆಯಾಗಿದ್ದು ಅಂಡಮಾನ್ ದ್ವೀಪಗಳಲ್ಲಿ ಸ್ಪೀಡ್ ಬೋಟ್ ಮತ್ತು ರಿಕಂಪ್ರೇಶನ್ ಚೆಂಬರ್ ಅಷ್ಟೊಂದು ಉತ್ತಮ ಸೌಲಭ್ಯವನ್ನು ಹೊಂದಿಲ್ಲ. ಎಲ್ಲಾ ವರ್ಗದವರಿಗೂ ಎಲ್ಲಾ ರೀತಿಯ ಆಸಕ್ತಿಗಳಿಗೂ ಇಲ್ಲಿ ಸ್ಕೂಬಾ ಡೈವಿಂಗ್ ಅವಕಾಶಗಳಿವೆ. ಹಾಗೂ ಇವುಗಳು ದುಬಾರಿಯಾಗಿಲ್ಲ. ಸಾಗರದ ಸಸ್ಯ ಮತ್ತು ಪ್ರಾಣಿ ಜೀವಗಳನ್ನು ಅನ್ವೇಷಿಸಲು ಇದು ಅತ್ಯಂತ ಉತ್ತಮವಾದ ಸ್ಥಳವಾಗಿದೆ.

ಸ್ಕೂಬಾ ಡೈವಿಂಗ್ ಹೊರತು ಪಡಿಸಿ ಚಾರಣ ಇಲ್ಲಿನ ಇನ್ನೊಂದು ಪ್ರಮುಖ ಆಕರ್ಷಣೆಯಾಗಿದೆ. ಅಲ್ಲದೆ, ಹಲವಾರು ಪರಿಣಿತ ಚಾರಣಿಗರು ಇಲ್ಲಿ ನಿಮ್ಮ ಸಹಾಯಕ್ಕಾಗಿ ಸಿಗುತ್ತಾರೆ. ಬೇರೆ ದ್ವೀಪಗಳಲ್ಲಿ ಇಲ್ಲದ ಇಲ್ಲಿನ ಇನ್ನೊಂದು ಮುಖ್ಯ ಆಕರ್ಷಣೆ ಎಂದರೆ ವಸತಿ ಸೌಕರ್ಯ. ಅಂಡಮಾನ್ ನಿಕೋಬಾರ್ ದ್ವೀಪಗಳ ಬಹುತೇಕ ಎಲ್ಲೆಡೆ ಎಲ್ಲಾ ರೀತಿಯ ದರಗಳಲ್ಲಿ ಉತ್ತಮ ಎನ್ನಬಹುದಾದ ವಸತಿ ವ್ಯವಸ್ಥೆ ಇಲ್ಲಿದೆ. ಕೆಫೆ ಡೆಲ್ ಮಾರ್ ಮತ್ತು ವೈಲ್ಡ್ ಆರ್ಕಿಡ್ ಸೂಚಿಸಬಹುದಾದಂತಹ ಎರಡು ಸ್ಥಳಗಳಾಗಿವೆ. ಈ ಕಡಲ ತೀರದಲ್ಲಿ ಸಾಕಷ್ಟು ಸಮಯ ಕಳೆದಾದ ಮೇಲೆ ಮುಂದಿನ ಹಳ್ಳಿ, ಹಳ್ಳಿ ಸಂಖ್ಯೆ 3 ಕ್ಕೆ ಭೇಟಿ ನೀಡಬಹುದು. ಇದು ಮಾರುಕಟ್ಟೆಗೆ ಹೆಸರು ವಾಸಿಯಾಗಿದ್ದು ಇಲ್ಲಿ ಹಲವಾರು ಹಸ್ತಕೃತಿಗಳು ಮತ್ತು ಭಾಗಗಳು ದೊರೆಯುತ್ತವೆ.

ಮತ್ತೊಂದು ವಿಷಯವೆಂದರೆ ಇಲ್ಲಿ ದೊರಕುವ ಶುದ್ಧವಾದ ಎಳೆನೀರನ್ನು ಕುಡಿಯಲು ಮರೆಯದಿರಿ. ಸಾಮಾನ್ಯವಾಗಿ ಎಲ್ಲಾ ರೆಸ್ಟಾರೆಂಟುಗಳಲ್ಲಿ ಬೀರು ಮತ್ತು ಮದ್ಯಪಾನ ಲಭ್ಯವಿದೆ. ಇದು ಕೇಂದ್ರಾಡಳಿತ ಪ್ರದೇಶವಾಗಿರುವ ಕಾರಣ ಅತಿ ಕಡಿಮೆ ಬೆಲೆಗೆ ಇವು ಲಭ್ಯವಾಗಿವೆ.

ಹಾವ್ ಲಾಕ್ ದ್ವೀಪ ಪ್ರಸಿದ್ಧವಾಗಿದೆ

ಹಾವ್ ಲಾಕ್ ದ್ವೀಪ ಹವಾಮಾನ

ಹಾವ್ ಲಾಕ್ ದ್ವೀಪ
32oC / 89oF
 • Partly cloudy
 • Wind: WNW 17 km/h

ಉತ್ತಮ ಸಮಯ ಹಾವ್ ಲಾಕ್ ದ್ವೀಪ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಹಾವ್ ಲಾಕ್ ದ್ವೀಪ

 • ರಸ್ತೆಯ ಮೂಲಕ
  ಅಂಡಮಾನ್ ಮತ್ತು ನಿಕೋಬಾರ್ ಅನ್ನು ತಲುಪಲು ಯಾವುದೆ ರಸ್ತೆ ಮಾರ್ಗಗಳಿಲ್ಲ. ಆದರೆ, ಇದನ್ನು ತಲುಪಿದಾಗ ಸುತ್ತಮುತ್ತಲಿನ ಪ್ರದೇಶಗಳಿಗೆ ವಿಹರಿಸಲು ಉತ್ತಮ ಸೌಲಭ್ಯಗಳಿವೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  There is no railway station available in ಹಾವ್ ಲಾಕ್ ದ್ವೀಪ
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಭಾರತದ ಎಲ್ಲಾ ಪ್ರಮುಖ ವಿಮಾನಯಾನ ಕಂಪನಿಗಳು ಪೋರ್ಟ್ ಬ್ಲೇರ್ ನ ವೀರ್ ಸಾವರ್ಕರ್ ವಿಮಾನ ನಿಲ್ದಾಣಕ್ಕೆ ಭಾರತದ ಕೊಲ್ಕತ್ತಾ, ಭುವನೇಶ್ವರ ಮತ್ತು ಚೆನ್ನೈ ನಿಂದ ನಿಯಮಿತವಾದ ವಿಮಾನ ಸೌಲಭ್ಯವನ್ನು ಹೊಂದಿವೆ. ಮುಂಬಯಿಯಿಂದ ನೇರವಾಗಿ ವಿಮಾನ ಸಂಪರ್ಕ ಸಾಧಿಸುವ ಪ್ರಸ್ತಾಪವಿದ್ದು ಸದ್ಯದಲ್ಲೇ ಪೂರ್ತಿಗೊಳ್ಳಲಿದೆ. ಚೆನ್ನೈನಿಂದ ಪೋರ್ಟ್ ಬ್ಲೇರ್ ಸುಮಾರು ಎರಡುವರೆ ಗಂಟೆಯ ಪ್ರಯಾಣವಾಗಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
19 Apr,Fri
Return On
20 Apr,Sat
 • Today
  Havelock Island
  32 OC
  89 OF
  UV Index: 7
  Partly cloudy
 • Tomorrow
  Havelock Island
  28 OC
  83 OF
  UV Index: 7
  Partly cloudy
 • Day After
  Havelock Island
  28 OC
  83 OF
  UV Index: 7
  Partly cloudy