Search
  • Follow NativePlanet
Share
ಮುಖಪುಟ » ಸ್ಥಳಗಳು » ಹಸ್ತಿನಾಪುರ » ಹವಾಮಾನ

ಹಸ್ತಿನಾಪುರ ಹವಾಮಾನ

ಅಕ್ಟೋಬರ್ ನಿಂದ ಮಾರ್ಚನವರೆಗೂ ಹಸ್ತಿನಾಪುರಕ್ಕೆ ಭೇಟಿ ಕೊಡಲು ಯೋಗ್ಯವಾದ ಸಮಯವಾಗಿದೆ. ಈ ತಿಂಗಳುಗಳನ್ನು ಬಿಟ್ಟು ಉಳಿದ ತಿಂಗಳುಗಳು ಉಷ್ಣತೆ ಮತ್ತು ಶುಷ್ಕತೆಯಿಂದ ಕೂಡಿರುತ್ತದೆ. ಏನೇ ಇರಲಿ, ಹಸ್ತಿನಾಪುರವು ಒಂದು ಮಹತ್ವದಯಾತ್ರಾ ಸ್ಥಳವಾದ್ದರಿಂದ ಇದು ವರ್ಷಪೂರ್ತಿ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಬೇಸಿಗೆಗಾಲ

ಹಸ್ತಿನಾಪುರದಲ್ಲಿ ಮಾರ್ಚ್ ನಿಂದ ಮೇ ವರೆಗೂ ಬೇಸಿಗೆ ಕಾಲವಿರುತ್ತದೆ. ಈ ತಿಂಗಳುಗಳಲ್ಲಿ ಇಲ್ಲಿನ ತಾಪಮಾನವು ಕನಿಷ್ಟ 32 ಡಿಗ್ರಿ ಸೆಲ್ಶಿಯಸ್ ನಿಂದ ಗರಿಷ್ಟ 40 ಡಿಗ್ರಿ ಸೆಲ್ಶಿಯಸ್ ನವರೆಗೂ ಏರಿಕೆಯನ್ನು ಕಾಣುತ್ತದೆ. ಬಹುಮಟ್ಟಿಗೆ ಇಲ್ಲಿ ಸುಮಾರು 36 ಡಿಗ್ರಿ ಸೆಲ್ಶಿಯಸ್ ನವರೆಗೆ ತಾಪಮಾನವಿರುತ್ತದೆ.

ಮಳೆಗಾಲ

ಉತ್ತರ ಭಾರತದ ಅನೇಕ ನಗರಗಳಂತೆ, ಹಸ್ತಿನಾಪುರದಲ್ಲಿಯೂ ಸಹ ನೀವು ಜುಲೈನಿಂದ ಸೆಪ್ಟಂಬರ್ ನವರೆಗೆ ಮಳೆಗಾಲದ ಅನುಭವವನ್ನು ಪಡೆಯಬಹುದು. ಈ ಸಮಯದಲ್ಲಿ ಇಲ್ಲಿನ ಹವಾಮಾನವು ತೇವಾಂಶ ಭರಿತ ಮತ್ತು ಆರ್ದ್ರವಾಗಿರುತ್ತದೆ. ಸಾಮಾನ್ಯವಾಗಿ ತಾಪಮಾನವು ಕಡಿಮೆಯಾಗಿರುತ್ತದೆ.

ಚಳಿಗಾಲ

ಡಿಸಂಬರ್ ನಿಂದ ಫೆಬ್ರುವರಿಯವರೆಗೂ ಇಲ್ಲಿ ಚಳಿಗಾಲ ಇರುತ್ತದೆ. ಈ ಅವಧಿಯಲ್ಲಿ ತಾಪಮಾನವು ಕನಿಷ್ಟ 4 ಡಿಗ್ರಿ ಸೆಲ್ಶಿಯಸ ನಿಂದ ಗರಿಷ್ಟ 12 ಡಿಗ್ರಿ ಸೆಲ್ಶಿಯಸ್ ನವರೆಗೆ ಇರುತ್ತದೆ.