Search
  • Follow NativePlanet
Share

ಹಾಸನ – ಹೊಯ್ಸಳರ ಪಾರಂಪರಿಕ ನಗರ

11

11ನೇ ಶತಮಾನದಲ್ಲಿದ್ದ ಪಾಳೆಗಾರ ಚನ್ನ ಕೃಷ್ಣಪ್ಪ ನಾಯಕರಿಂದ ನಿರ್ಮಾಣವಾದ ಹಾಸನ ನಗರವು ಕರ್ನಾಟಕದ ಪ್ರಮುಖ ಜಿಲ್ಲೆ ಹಾಗು ಜಿಲ್ಲಾ ಕೇಂದ್ರವಾಗಿದೆ.  ಈ ಊರಿಗೆ ಹಾಸನ ಎನ್ನುವ ಹೆಸರು ಇಲ್ಲಿನ ನಗರ ದೇವತೆಯಾದ ಹಾಸನಾಂಬ ದೇವಿಯಿಂದ ಬಂದಿತು. ಈ ಜಿಲ್ಲೆಯು ಕರ್ನಾಟಕದ ವಾಸ್ತುಶಿಲ್ಪದ ರಾಜಧಾನಿಯಾಗಿದೆ. ಹೊಯ್ಸಳರ ಶ್ರೀಮಂತ ಸಂಸ್ಕೃತಿಯನ್ನು ಇಡೀ ಜಿಲ್ಲೆಯಾದ್ಯಂತ ನಾವು ಕಾಣಬಹುದು.

 

11 ರಿಂದ  14ನೇ ಶತಮಾನದವರೆಗೆ ಹೊಯ್ಸಳರು ಈ ಜಿಲ್ಲೆಯಲ್ಲಿನ ದ್ವಾರ ಸಮುದ್ರವನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡು ಆಳಿದರು. ಈ ಕಾಲದ ಸ್ಮಾರಕಗಳನ್ನು ಹಾಗು ಅವಶೇಷಗಳನ್ನು ಹಾಸನ ಜಿಲ್ಲೆಯಲ್ಲಿನ ಹಳೇಬೀಡಿನ ಸುತ್ತ ನಾವು ಇಂದಿಗು ಕಾಣಬಹುದು. ಇಲ್ಲಿನ ದೊರೆಗಳಾದ ಹೊಯ್ಸಳರು ಜೈನ ಮತಾವಲಂಬಿಗಳಾಗಿದ್ದರು ಸಹಾ, ಈ ಪ್ರಾಂತ್ಯದಲ್ಲಿ ನಾವು ಶಿವನ ದೇವಾಲಯಗಳು ಹರಡಿರುವುದನ್ನು ನಾವು ಕಾಣಬಹುದು.

ಹಾಸನವು ಐತಿಹಾಸಿಕವಾಗಿ ಮಹತ್ವ ಪಡೆದಿರುವ ನಗರವಾದರು, ಈಗ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ನಗರವಾಗಿ ಗುರುತಿಸಿಕೊಂಡಿದೆ.

ಈ ನಗರವು 26.5ಚ,ಕಿ,ಮೀ ವಿಸ್ತೀರ್ಣ ಹೊಂದಿದ್ದು,   ಇಲ್ಲಿ 157000 ಜನರು ವಾಸಿಸುತ್ತಿದ್ದಾರೆ.

 

ಹಾಸನದ ಕುರಿತು ಕೆಲವು ಅಂಶಗಳು

ಹಾಸನವು ಮಲೆನಾಡು ಮತ್ತು ಬಯಲು ಸೀಮೆಯ ನಡುವೆ ನೆಲೆಸಿರುವುದರಿಂದ ಇಡೀ ಜಿಲ್ಲೆಯ ವಾಯುಗುಣ ಅತ್ಯಂತ ಆಹ್ಲಾದಕರತೆಯಿಂದ ಕೂಡಿರುತ್ತದೆ.ಹಾಸನ ನಗರವು ಬೆಚ್ಚನೆಯ ಮುಂಜಾನೆಗಳ, ತಂಪಾದ ಮತ್ತು ಕೊರೆಯುವ ಸಂಜೆಗಳ ಅನುಭವವನ್ನು ನೀಡುತ್ತದೆ.

ಈ ನಗರವು ರಾಜಧಾನಿಯಿಂದ 187 ಕಿ.ಮೀ ದೂರದಲ್ಲಿದೆ. ಅಲ್ಲದೆ 79% ಸಾಕ್ಷರತೆ ಹೊಂದಿದ್ದು,ರಾಜ್ಯದಲ್ಲಿಯೇ ಶ್ರೇಷ್ಠವಾದ ಶಾಲೆ ಕಾಲೇಜುಗಳನ್ನು ಹೊಂದಿದೆ. ಮಲ್ನಾಡ್ ಇಂಜಿನಿಯರಿಂಗ್ ಕಾಲೇಜು, ಶ್ರೀ ಧರ್ಮಸ್ಥಳ ಮಂಜುನಾಥ ಅಯುರ್ವೇದ ಕಾಲೇಜು ಹಾಗು ಇತರ ಕಾಲೇಜುಗಳನ್ನು ಈ ನಿಟ್ಟಿನಲ್ಲಿ ಹೆಸರಿಸಬಹುದು. ಇಲ್ಲಿನ ಆಡಳಿತ ಭಾಷೆ ಕನ್ನಡವಾದರು,ಇಲ್ಲಿ ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ವ್ಯವಹರಿಸಲು ಅಡ್ಡಿಯೇನಿಲ್ಲ.

ಕೃಷಿ ಇಲ್ಲಿನ ಜನರ ಪ್ರಮುಖ ಉದ್ಯೋಗವಾಗಿದ್ದು, ಇಲ್ಲಿನ ಆರ್ಥಿಕತೆಯ ಪ್ರಮುಖ ಭಾಗವಾಗಿದೆ, ಇದರ ಜೊತೆಗೆ ಮೈಸೂರು ಮಿನರಲ್ಸ್ ರವರು ನಡೆಸುವ ಕ್ರೋಮೈಟ್ ಗಣಿಗಾರಿಕೆಯು ಆರ್ಥಿಕತೆಗೆ ಪ್ರಮುಖ ಕೊಡುಗೆಯನ್ನು ನೀಡುತ್ತದೆ. ಹಾಸನವು ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ ( ISRO)ದ ಪ್ರಮುಖ ನಿಯಂತ್ರಣ ಕೇಂದ್ರವು ಸಹಾ ಹಾಸನದಲ್ಲಿ ನೆಲೆಗೊಂಡಿದೆ.

ಹಾಸನಕ್ಕೆ ರಸ್ತೆಯ ಮೂಲಕ ಮತ್ತು ರೈಲಿನ ಮೂಲಕ ಸುಲಭವಾಗಿ ತಲುಪಬಹುದು. ಈ ನಗರವು ಕರ್ನಾಟಕದ ಇತರ ಭಾಗಗಳಿಂದ ಉತ್ತಮ ಸಾರಿಗೆ ಸಂಪರ್ಕವನ್ನು ಹೊಂದಿದೆ. ಮಂಗಳೂರು ವಿಮಾನ ನಿಲ್ದಾಣ (115) ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವಾಗಿದೆ. ಬೆಂಗಳೂರು ವಿಮಾನ ನಿಲ್ದಾಣ ಇಲ್ಲಿಂದ 187 ಕಿ.ಮೀ ದೂರದಲ್ಲಿರುವುದರಿಂದ ಹಾಸನಕ್ಕೆ ತಲುಪುವುದು ತುಂಬಾ ಸುಲಭವಾಗಿದೆ.

ಹಾಸನ ಸುತ್ತ ಇರುವ ಪ್ರೇಕ್ಷಣೀಯ ಸ್ಥಳಗಳು.

ಹಾಸನಾಂಬ ದೇವಾಲಯವು ಇಲ್ಲಿನ ಪ್ರಾದೇಶಿಕ ಸಂಸ್ಕೃತಿಯನ್ನು ಶ್ರೀಮಂತವಾಗಿ ಪ್ರತಿನಿಧಿಸುವುದರಿಂದಾಗಿ ಇಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ.

ಬೇಲೂರು, ಹಳೇಬೀಡು, ಶ್ರವಣ ಬೆಳಗೊಳ ಮತ್ತು ಗೊರೂರು ಜಲಾಶಯಗಳು ಪ್ರಮುಖ ಪ್ರವಾಸಿ ತಾಣಗಳಾಗಿವೆ. ಹಾಸನದಲ್ಲಿ ತಂಗಲು ಯೋಚಿಸುವ ಅಗತ್ಯವೇನಿಲ್ಲ. ಇಲ್ಲಿನ ಪ್ರವಾಸಿಗರ ಅಗತ್ಯವನ್ನು ಪೂರೈಸುವಷ್ಟು ಹೋಟೆಲ್ ಮತ್ತು ಲಾಡ್ಜ್ ಗಳು ಇಲ್ಲಿವೆ. ತ್ರಿ ತಾರೆಯಿಂದ ಹಿಡಿದು ಪಂಚತಾರ ಹೋಟೆಲ್ ಗಳು ಸಹಾ ಹಾಸನದಲ್ಲಿದ್ದು ಅವರವರ ಅಗತ್ಯಕ್ಕೆ ತಕ್ಕಂತೆ ಸೇವೆಗಳನ್ನು ಒದಗಿಸುತ್ತವೆ. ಇದಕ್ಕಾಗಿ ನೀವು ಹಾಸನಕ್ಕೆ ಧನ್ಯವಾದಗಳನ್ನು ಹೇಳಬೇಕು. ಕರ್ನಾಟಕ ರಾಜ್ಯದ ಹಿಂದಿನ ಇತಿಹಾಸ ಮತ್ತು ಸಂಸ್ಕೃತಿಯನ್ನು ನೀವು ತಿಳಿಯಲು ಇಚ್ಛಿಸಿದಲ್ಲಿ, ಹಾಸನದ ಕಡೆಗೆ ನೀವು ಖಂಡಿತ ಪ್ರಯಾಣ ಮಾಡಬೇಕಾಗುತ್ತದೆ.

ಹಾಸನ ಪ್ರಸಿದ್ಧವಾಗಿದೆ

ಹಾಸನ ಹವಾಮಾನ

ಉತ್ತಮ ಸಮಯ ಹಾಸನ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಹಾಸನ

  • ರಸ್ತೆಯ ಮೂಲಕ
    ಹಾಸನವು ಬೆಂಗಳೂರು, ಮಂಗಳೂರು, ಮೈಸೂರು, ಮಡಿಕೇರಿ ಮತ್ತು ಚಿಕ್ಕ ಮಗಳೂರಿನಂತಹ ಊರು ಮತ್ತು ನಗರಗಳಿಂದ ಕೆ ಎಸ್ ಆರ್ ಟಿ ಸಿ ( ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ) ಬಸ್ಸುಗಳ ಸೇವೆಯನ್ನು ಹೊಂದಿದೆ.ಇಲ್ಲಿನ ಸಮೀಪದ ಊರು ಮತ್ತು ನಗರಗಳಿಗೆ ಖಾಸಗಿ ಬಸ್ಸುಗಳ ಸೇವೆಯು ಸಹ ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಹಾಸನವು ತನ್ನದೆ ಆದ ರೈಲು ನಿಲ್ದಾಣವನ್ನು ಹೊಂದಿದೆ. ಇದು ನಗರದ ಕೇಂದ್ರ ಭಾಗದಿಂದ 2 ಕಿ.ಮೀನಷ್ಟು ದೂರದಲ್ಲಿದೆ. ಹಾಸನ ರೈಲು ನಿಲ್ದಾಣವ್ವು ಬೆಂಗಳೂರು,ಮೈಸೂರು ಮತ್ತು ಮಂಗಳೂರಿನಂತಹ ಪ್ರಮುಖ ನಗರಗಳೊಂದಿಗೆ ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ. ಇಲ್ಲಿನ ಸಮೀಪದ ಪ್ರದೇಶಗಳಿಗೆ ತಲುಪಲು ಪ್ರವಾಸಿಗರು ಇಲ್ಲಿಂದ ಟ್ಯಾಕ್ಸಿ ಅಥವಾ ಬಾಡಿಗೆ ವಾಹನಗಳಲ್ಲಿ ತೆರಳಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಹಾಸನವು ಸ್ವಂತ ವಿಮಾನ ನಿಲ್ದಾಣವನ್ನು ಹೊಂದಿಲ್ಲ. ಆದರೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಹಾಸನಕ್ಕೆ ಸಮೀಪದ ವಿಮಾನ ನಿಲ್ದಾಣವಾಗಿದ್ದು, ಇಲ್ಲಿಂದ 117 ಕಿ.ಮೀ ದೂರದಲ್ಲಿದೆ. ಇದು ದೇಶೀಯ ಮತ್ತು ವಿದೇಶಿ ಪ್ರವಾಸಿಗರಿಗೆ ಸೇವೆಯನ್ನು ಒದಗಿಸುತ್ತಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat