Search
  • Follow NativePlanet
Share

ಹಂಪಿ: ಅವಶೇಷಗಳ ನಡುವೆ ಒಂದು ಪಯಣ

84

ಹಂಪಿ ಎಂದಾಕ್ಷಣ ನೀಮಗೆ ಅತ್ಯಂತ ಸುಂದರವಾದ ವಾಸ್ತುಶಿಲ್ಪವುಳ್ಳ, ವಿಜಯ ನಗರದ ಮನಮೋಹಕವಾದ,ಆದರೆ ಇಂದು ಅವಶೇಷಗಳ ಮಧ್ಯ ಸಿಲುಕಿರುವ ನಗರ ಎನಿಸುವದು ಸಹಜ ಹಾಗು ಅಷ್ಟೇ ಸತ್ಯ. ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದು,ಹೊಯ್ಸಳರ ಸಾಂಪ್ರದಾಯಿಕ ಶೈಲಿಯ ವಾಸ್ತುಶೀಲ್ಪವನ್ನು ವೈಭವತೆಯಿಂದ ಪ್ರದರ್ಶಿಸಿದ ವಿಜಯನಗರ ಅಥವಾ ಹಂಪಿಯು ಇಂದು ಕೇವಲ ಕಲ್ಲಿನಲ್ಲಿ ಮುಚ್ಚಿಹೊದ ಒಂದು ಅದ್ಭುತ.

 

ಹಂಪಿಯ ಕೆಲವು ತ್ವರಿತ ಸತ್ಯಗಳು

ಹಂಪಿಯು ಪ್ರಾಚೀನ ಪ್ರದೇಶವಾಗಿದ್ದು, ರಾಮಾಯಣದಲ್ಲೂ ಕೂಡ ಇದರ ಬಗ್ಗೆ ಉಲ್ಲೇಖವಿದ್ದು, ಇತೀಹಾಸಕಾರರು ಇದನ್ನು ಕಿಷ್ಕೀಂದಾ ಎಂದು ಗುರುತಿಸಿದ್ದಾರೆ. ಆದರೆ ನೀಜವಾಗಿಯೂ, ಹಂಪಿಯು 13 ರಿಂದ 16 ನೇ ಶತಮಾನಗಳ ಮಧ್ಯೆ ವಿಜಯನಗರ ಸಾಮ್ರಾಟರ ಅಡಿಯಲ್ಲಿ ರಾಜಧಾನಿಯಾಗಿ ಉನ್ನತವಾದ ಪ್ರಗತಿಯನ್ನು ಹೊಂದಿತು. ಹಂಪಿಯು ಕರ್ನಾಟಕದ ಉತ್ತರ ಭಾಗದಲ್ಲಿದ್ದು, ಬೆಂಗಳೂರಿನಿಂದ 350 ಕಿ. ಮೀ ದೂರದಲ್ಲಿದೆ. ಬೆಂಗಳೂರಿನಿಂದ, ಹಂಪಿಯನ್ನು ಕೆಲವೇ ಘಂಟೆಗಳಲ್ಲಿ ಸರಳವಾಗಿ ಹೆದ್ದಾರಿಯ ಮೂಲಕ ಮುಟ್ಟಬಹುದಾಗಿದೆ. ಹಂಪಿಯು ಯುನೆಸ್ಕೊದಿಂದ ವರ್ಲ್ದ್ ಹೆರಿಟೆಜ್ ಸೈಟ್ ಎಂಬ ಮನ್ನಣೆಯನ್ನು ಪಡೆದಿದ್ದು, ಪ್ರತಿ ವರ್ಷವೂ ಲಕ್ಷಾಂತರ ಪ್ರವಾಸಿಗರನ್ನು ಸೆಳೆಯುತ್ತದೆ. ಹಂಪಿಯ ವೈಭವವನ್ನು ಪೂರ್ತಿಯಾಗಿ ಸವಿಯಲು ಇಚ್ಛೆಯಾದಲ್ಲಿ, ಬೇರೆ ಪ್ರವಾಸಿಗರ ಹಾಗೆ, ನೀವು ಕೂಡ ಒಂದು ಸೈಕಲ್ ನ್ನು ಬಾಡಿಗೆಗೆ ಪಡೆದುಕೊಂಡು ಮನಸಾರೆ ಸುತ್ತಬಹುದು.

 

ಏಕೆ ಹಂಪಿಯು ಪ್ರವಾಸಿಗರ ನೆಚ್ಚಿನ ತಾಣ?

ಹಂಪಿಯು ಕೇವಲ ವಾಸ್ತುಶಿಲ್ಪದ ದೄಷ್ಟಿಯಿಂದ ಮಾತ್ರವೆ ಅಲ್ಲದೆ, ಧಾರ್ಮಿಕ ಪರಂಪರೆಗೂ ಕೂಡ ಅಷ್ಟೆ ಮಹತ್ತರವಾದ ಸ್ಥಾನವನ್ನು ಪಡೆದಿದೆ. ಹಲವು ಪ್ರಸಿದ್ಧವಾದ ದೇವಾಲಯಗಳು ಇಲ್ಲಿ ಇದ್ದು, ಅವುಗಳಲ್ಲಿ ವಿರೂಪಾಕ್ಷ ದೇವಸ್ಥಾನ, ವಿಟ್ಠಲ ದೇವಸ್ಥಾನ ಹಾಗು ಆಂಜನೇಯಾದ್ರಿ ದೇವಸ್ಥಾನಗಳು ಸೇರಿವೆ. ಕರ್ನಾಟಕದ ಮಹಾ ನದಿಗಳಲ್ಲಿ ಒಂದಾದ ತುಂಗಭದ್ರಾ ನದಿಯು, ಇ ಪಟ್ಟಣದಲ್ಲಿ ಹರಿದಿದ್ದು, ನೋಡುಗರಿಗೆ ಸೄಷ್ಟಿಸೌಂದರ್ಯತೆಯ ಪುಳಕವನ್ನು ಉಂಟುಮಾಡುತ್ತದೆ. ವಿಜಯನಗರವನ್ನು ಸುತ್ತುವರೆದ ಬೆಟ್ಟಗುಡ್ಡಗಳಲ್ಲಿರುವ ಕಲ್ಲುಗಳನ್ನೆ ಉಪಯೋಗಿಸಿಕೊಂಡು ಉತ್ಕೄಷ್ಟವಾದ ಕಲ್ಲಿನ ಸ್ಥಂಬಗಳನ್ನು ಆಗಿನ ರಾಜರ ಕಾಲದಲ್ಲಿ ರಚಿಸಲಾಗಿದೆ.

ದೇವಾಲಯ ಹಾಗು ಪ್ರಕೄತಿ ಸೌಂದರ್ಯವನ್ನು ಹೊರತುಪಡಿಸಿ, ಇಲ್ಲಿ ಅನೇಕ ನೀರು ಶೇಖರಣೆಯ ತೊಟ್ಟಿಗಳು ಹಾಗು ಸಾರ್ವಜನಿಕ ಕಟ್ಟಡಗಳು ಸುಂದರವಾಗಿ ರಚಿಸಲ್ಪಟ್ಟಿದ್ದು, ವಿಜಯನಗರದ ರಾಜರುಗಳ ಟವ್ನ ಪ್ಲ್ಯಾನಿಂಗ್ ನ ಕುಶಲತೆಯನ್ನು ಅನಾವರಣಗೊಳಿಸುತ್ತದೆ. ಕಾಲುವೆ ಹಾಗು ಉಪಕಾಲುವೆಗಳಿದ್ದು, ಸುಮಾರು 13 ರಿಂದ 15ನೇ ಶತಮಾನದಲ್ಲೇ ಈ ರೀತಿಯಾದ ವ್ಯವಸ್ಥಿತವಾದ ನೀರಿನ ಬಳಕೆಯಿತ್ತೆಂದು ತಿಳಿದು ಬರುತ್ತದೆ.ಇಲ್ಲಿ ನೋಡಲು 500ಕ್ಕಿಂತ ಹೆಚ್ಚಿನ ಸ್ಥಳಗಳಿದ್ದು, ಅದರಲ್ಲಿ ಸುಮರು 100ಕ್ಕಿಂತ ಹೆಚ್ಚು ಸ್ಥಳಗಳು ಪ್ರತಿ ವರ್ಷವು ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತವೆ. ವಿಟ್ಠಲ ದೇವಾಲಯದಲ್ಲಿರುವ, ಕಲ್ಲಿನ ರಥವು ವಿಜಯನಗರ ಸಮ್ರಾಜ್ಯದ ಸಾಂಪ್ರದಾಯಿಕ ಶೈಲಿಯ ಕಲ್ಲಿನ ಕೆತ್ತನೆಯಲ್ಲಿ ವಿಶೀಷ್ಟವಾದ ಕೊಡುಗೆಯಾಗಿದೆ. ಇದನ್ನು ರಾಜ್ಯದ ಪ್ರವಾಸೋದ್ಯಮ ಇಲಾಖೆಯು ತನ್ನ ಒಂದು ಚಿಹ್ನೆಯನ್ನಾಗಿ ಘೋಷಿಸಿದೆ. ಹಂಪಿಯಲ್ಲಿ ಇಂದಿಗೂ ಕೂಡ ಭೂಮಿಯನ್ನು ಅಗೆಯಲಾಗುತ್ತಿದ್ದು ಪ್ರತಿದಿನವೂ ವಸ್ತುಗಳು ದೊರೆಯುತ್ತಿವೆ. ಇಲ್ಲಿನ ಪ್ರಾಚ್ಯವಸ್ತು ಸಂಗ್ರಹಾಲಯವು ಕೂಡ ಒಂದು ನೋಡಲೆ ಬೇಕಾದ ಸ್ಥಳವಾಗಿದೆ. ಹಂಪಿ ಅಥವಾ ವಿಜಯನಗರವು ತನ್ನ ಮುರು ಭಾಗದಲ್ಲಿ ಬೆಟ್ಟಗುಡ್ಡಗಳಿಂದ ಸುತ್ತುವರಿದಿದ್ದು, ಒಂದು ಭಾಗದಲ್ಲಿ ತುಂಗಭದ್ರಾ ನದಿಯು ಹರಿದಿರುವದರಿಂದ, ಆಗಿನ ರಾಜರುಗಳು ಇದನ್ನೇ ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು. ಇದರಿಂದ ಶತ್ರುಗಳಿಗೆ ಹಂಪಿಯನ್ನು ಆಕ್ರಮಣ ಮಾಡಲು ತುಂಬ ಕಷ್ಟವಾಗುತ್ತಿತ್ತು. ಇಂದು ಈ ದೄಶ್ಯವು ನೋಡುಗರಿಗೆ ಮರೆಯಲಾಗದಂತಹ ಆ ಪ್ರಾಚೀನ ವೈಭವವನ್ನು ಉಣಬಡಿಸುತ್ತದೆ. ಉತ್ಕೄಷ್ಟಮಟ್ಟದ ಹೊಯ್ಸಳ ವಾಸ್ತುಶಿಲ್ಪವನ್ನು ಹೊಂದಿದ ಈ ಪ್ರದೇಶವನ್ನು, ದಕ್ಷಿಣ ಭಾರತಕ್ಕೆ ಬರುವ ಯಾವುದೇ ಪ್ರವಾಸಿಗರು ನೋಡಲೆಬೇಕಾಗಿದೆ.

ಹಂಪಿ ಪ್ರಸಿದ್ಧವಾಗಿದೆ

ಹಂಪಿ ಹವಾಮಾನ

ಉತ್ತಮ ಸಮಯ ಹಂಪಿ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಹಂಪಿ

  • ರಸ್ತೆಯ ಮೂಲಕ
    ಹಂಪಿಯು ಮಿತವ್ಯಯ ಮತ್ತು ಅರಾಮದಾಯಕವಾದ ಹಲವು ಕೆ.ಎಸ್.ಆರ್.ಟಿ.ಸಿ(ಕರ್ನಾಟಕ ಸ್ಟೆಟ್ ರೋಡ್ ಟ್ರಾನ್ಸ್ಪೊರ್ಟ ಕಾರ್ಪೊರೆಷನ್) ಹಾಗು ಸ್ಥಳೀಯ ಬಸ್ಸುಗಳ ಮೂಲಕ ಅನೇಕ ನಗರಗಳ ಜೊತೆ ನೇರ ಸಂಪರ್ಕ ಹೊಂದಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಹೊಸ್ಪೆಟ ನಲ್ಲಿ ರೈಲು ನಿಲ್ದಾಣವಿದ್ದು, ಇದು ಹಂಪಿಯಿಂದ ಕೇವಲ 13 ಕೀ.ಮಿ ದೂರದಲ್ಲಿದೆ. ಈ ನಿಲ್ದಾಣವು ಬೆಂಗಳೂರು, ಹೈದರಾಬಾದ ಮುಂತಾದ ಹಲವು ರಜ್ಯಗಳ ನಗರಗಳ ಜೊತೆ ಸಂಪರ್ಕ ಹೊಂದಿದೆ.ಇಲ್ಲಿಂದ ಪ್ರವಾಸಿಗರು ಹಂಪಿಯನ್ನು ತಲುಪಲು ಟ್ಯಾಕ್ಸಿ ಅಥವಾ ಕ್ಯಾಬಗಳನ್ನು ಬಾಡಿಗೆಗೆ ತೆಗೆದುಕೋಳ್ಳಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಬಳ್ಳಾರಿಯು ಹಂಪಿಯ ಹತ್ತಿರದ ವಿಮಾನ ನಿಲ್ದಾಣವಾಗಿದ್ದು ಹಂಪಿಯಿಂದ 60 ಕೀ.ಮಿ ದೂರದಲ್ಲಿದೆ. ಬೆಂಗಳೂರು ಅಂತರರಾಷ್ಟ್ರಿಯ ವಿಮಾನ ನಿಲ್ದಾಣವು ಹಂಪಿಯಿಂದ 350 ಕೀ.ಮಿ ದೂರದಲ್ಲಿದೆ. ಈ ನಿಲ್ದಾಣವು ಅನೇಕ ರಾಷ್ಟ್ರೀಯ ಹಾಗು ಅಂತರರಾಷ್ಟ್ರೀಯ ಸ್ಥಳಗಳಿಗೆ ಪ್ರತಿದಿನ ಸಂಪರ್ಕ ಹೊಂದಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat