Search
  • Follow NativePlanet
Share
ಮುಖಪುಟ » ಸ್ಥಳಗಳು » ಗ್ವಾಲಿಯರ್ » ಹವಾಮಾನ

ಗ್ವಾಲಿಯರ್ ಹವಾಮಾನ

ಗ್ವಾಲಿಯರ್ ತೀವ್ರತರವಾದ ಹವಾಮಾನವನ್ನು  ಹೊಂದಿದೆ. ಇಲ್ಲಿ ಬೇಸಿಗೆ ಕಾಲದಲ್ಲಿ ಅತಿ ಹೆಚ್ಚು ಉಷ್ಣತೆ ಇದ್ದರೆ, ಚಳಿಗಾಲದ ತಿಂಗಳುಗಳಲ್ಲಿ ಅತಿ ಹೆಚ್ಚು ಶೀತವನ್ನು ಹೊಂದಿರುತ್ತದೆ. ಚಳಿಗಾಲವು ಗ್ವಾಲಿಯರ್ ನಗರಕ್ಕೆ ಭೇಟಿ ಕೊಡಲು ಖಂಡಿತವಾಗಿಯು ಸೂಕ್ತ ಸಮಯವಾಗಿದೆ. ಆದರೆ ಚಳಿಗಾಲದಲ್ಲಿ ಇಲ್ಲಿಗೆ ಭೇಟಿ ಕೊಡಲು ಬಯಸುವ ಪ್ರವಾಸಿಗರು ತಮ್ಮೊಂದಿಗೆ ಬೆಚ್ಚನೆಯ ಉಣ್ಣೆಯ ಬಟ್ಟೆಗಳನ್ನು ಕೊಂಡೊಯ್ಯುವುದನ್ನು ಮರೆಯಬಾರದು.

ಬೇಸಿಗೆಗಾಲ

ಗ್ವಾಲಿಯರ್ ನಲ್ಲಿ ಮಾರ್ಚನಿಂದ ಬೇಸಿಗೆ ಕಾಲವು ಆರಂಭವಾದರೆ, ಜೂನನ ಕೊನೆಯವರೆಗೂ ಮುಂದುವರಿಯುತ್ತದೆ. ಬೇಸಿಗೆಕಾಲದಲ್ಲಿ ಗ್ವಾಲಿಯರ್ ನಗರವು ಹೆಚ್ಚು ಉಷ್ಣತೆ ಮತ್ತು ಶುಷ್ಕತೆಯಿಂದ ಕೂಡಿರುತ್ತದೆ. ಈ ಸಮಯದಲ್ಲಿ ಇಲ್ಲಿನ ತಾಪಮಾನವು 47 ಡಿಗ್ರಿ ಸೆಲ್ಸಿಯಸನವರೆಗೆ ಹೆಚ್ಚಾಗಬಹುದು. ಈ ಸಮಯವು ಗ್ವಾಲಿಯರ್ ನಗರಕ್ಕೆ ಭೇಟಿ ಕೊಡಲು ಖಂಡಿತವಾಗಿಯು ಯೋಗ್ಯ ಸಮಯವಲ್ಲ. ಪ್ರವಾಸಿಗರು ಈ ಸಮಯದಲ್ಲಿ ಇಲ್ಲಿಗೆ ಭೇಟಿಯನ್ನು ನೀಡದಿದ್ದರೆ ಒಳ್ಳೆಯದು.

ಮಳೆಗಾಲ

ಗ್ವಾಲಿಯರ್ ನಲ್ಲಿ ಮಳೆಗಾಲವು ಜುಲೈನಿಂದ ಆರಂಭವಾಗುತ್ತದೆ. ಈ ಮೂಲಕ ಬೇಸಿಗೆಯ ಬೇಗೆ ಕಡಿಮೆಯಾಗಿ ನಗರದಲ್ಲಿ ಹೊಸ ಚೈತನ್ಯ ಮೂಡುತ್ತದೆ. ಅಕ್ಟೋಬರನ ಕೊನೆಯವರೆಗೂ ಮಳೆಯು ಸುರಿಯುತ್ತಲೇ ಇರುತ್ತದೆ. ಈ ಸಮಯದಲ್ಲಿ ಆಗಿಂದಾಗ ಮಳೆ ಬೀಳುತ್ತಲೆ ಇರುತ್ತದೆ. ಈ ಸಮಯದಲ್ಲಿ ಹಗಲಿನಲ್ಲಿ ತಾಪಮಾನವು 25 ಡಿಗ್ರಿ ಸೆಲ್ಸಿಯಸ್ ನಿಂದ 32 ಡಿಗ್ರಿ ಸೆಲ್ಸಿಯಸನವರೆಗೆ ತೂಗಾಡುತ್ತಿರುತ್ತದೆ. ಈ ಸಮಯವು ಸಹ ಗ್ವಾಲಿಯರ್ ನಗರಕ್ಕೆ ಭೇಟಿ ಕೊಡಲು ಖಂಡಿತವಾಗಿಯು ಯೋಗ್ಯ ಸಮಯವಲ್ಲ.

ಚಳಿಗಾಲ

ಗ್ವಾಲಿಯರ್ನಲ್ಲಿ ಬಹು ತಂಪಾಗಿರುವ ಚಳಿಗಾಲ ಇರುತ್ತದೆ. ನವಂಬರ ತಿಂಗಳಿನಿಂದ ಫೆಬ್ರುವರಿ ತಿಂಗಳಿನವರೆಗೂ ಇಲ್ಲಿ ಚಳಿಗಾಲ ಇರುತ್ತದೆ. ಈ ಸಮಯದಲ್ಲಿ ರಾತ್ರಿ  ಇಲ್ಲಿನ ತಾಪಮಾನವು ಶೂನ್ಯ ಅಥವಾ ಮೈನಸ್ ಡಿಗ್ರಿಯವರೆಗೂ ಹೋಗಬಹುದು. ಆದರೆ ಹಗಲಿನಲ್ಲಿ ಸಾಮಾನ್ಯವಾಗಿ ಇಲ್ಲಿನ ತಾಪಮಾನವು  ಸುಮಾರು 27 ಡಿಗ್ರಿ ಸೆಲ್ಸಿಯಸ ನವರೆಗೆ  ಇರುತ್ತದೆ. ಈ ಸಮಯವು ಗ್ವಾಲಿಯರ್ ನಗರಕ್ಕೆ ಭೇಟಿ ಕೊಡಲು ಖಂಡಿತವಾಗಿಯು ಯೋಗ್ಯ ಸಮಯವಾಗಿದೆ.