ಗುಶೈನಿಯನ್ನು ಭೇಟಿ ಮಾಡಲು ಪ್ರಶಸ್ತವಾದ ಕಾಲವೆಂದರೆ ಫೇಬ್ರವರಿಯಿಂದ ಜೂನ್ ಮತ್ತು ಸೆಪ್ಟೆಂಬರ್ ನಿಂದ ನವೆಂಬರ್. ಈ ಕಾಲದಲ್ಲಿ ಗುಶೈನಿಯಲ್ಲಿ ಉತ್ತಮ ವಾತಾವರಣವಿರುತ್ತದೆ.
(ಜೂನ್-ಆಗಸ್ಟ್): ಈ ಸಮಯದಲ್ಲಿ ಬೇಸಿಗೆಯ ಜೊತೆ ಜೊತೆಗೆ ಮಳೆಯೂ ಇರುತ್ತದೆ. ಅತಿಯಾದ ಮಳೆಯೂ ಇರುವ ಕಾರಣ ಪ್ರವಾಸಿಗರು ಇಲ್ಲಿನ ಇಳಿಜಾರು ಕಡಿದಾದ ಪ್ರದೇಶದಲ್ಲಿ ಸಂಚರಿಸುವುದು ಒಳ್ಳೆಯದಲ್ಲ.
(ನವೆಂಬರ್-ಮಾರ್ಚ್): ಗುಶೈನಿಯಲ್ಲಿ ನವೆಂಬರ್ ನಿಂದ ಮಾರ್ಚ್ ವರೆಗೆ ಚಳಿಗಾಲವಿದ್ದು ಹಿಮಪಾತವಾಗಿ ಉಷ್ಣಾಂಶ 5 ಡಿಗ್ರಿಗೆ ಕುಸಿಯುತ್ತದೆ. ಹಿಮ ಮಳೆಯನ್ನು ಆಸ್ವಾದಿಸುವವರು ಈ ಕಾಲದಲ್ಲಿ ಇಲ್ಲಿಗೆ ಭೇಟಿ ನೀಡಬಹುದು.