Search
  • Follow NativePlanet
Share
ಮುಖಪುಟ » ಸ್ಥಳಗಳು » ಗುಲ್ಮಾರ್ಗ್ » ಹವಾಮಾನ

ಗುಲ್ಮಾರ್ಗ್ ಹವಾಮಾನ

ಈ ಪ್ರದೇಶಕ್ಕೆ ಭೇಟಿ ನೀಡಲು ಮಾರ್ಚ್ ನಿಂದ ಅಕ್ಟೋಬರ್‌ ನಡುವಿನ ಸಮಯ ಸೂಕ್ತ ಎಂದು ಹೇಳಲಾಗುತ್ತದೆ. ಈ ಸಂದರ್ಭದಲ್ಲಿ ಬರುವ ಪ್ರವಾಸಿಗರು ಸ್ಥಳ ವೀಕ್ಷಣೆಯ ಮುದವನ್ನು ಪಡೆಯುವುದು ಮಾತ್ರವಲ್ಲ, ಸಾಕಷ್ಟು ಚಳಿಗಾಲದ ಕ್ರೀಡೆಯಲ್ಲೂ ತೊಡಗಬಹುದು. ವಾರ್ಷಿಕ ಹಿಮಪಾತದ ನಂತರದ ದಿನಗಳಲ್ಲಿ ಇದು ನಡೆಯುತ್ತದೆ.

ಬೇಸಿಗೆಗಾಲ

(ಮಾರ್ಚ್ ನಿಂದ ಮೇ): ಬೇಸಿಗೆ ಗುಲ್‌ಮಾರ್ಗ್ ನಲ್ಲಿ ಆಹ್ಲಾದಮಯವಾಗಿರುತ್ತದೆ. ಮಾರ್ಚ್ ತಿಂಗಳಲ್ಲಿ ಆರಂಭವಾಗುವ ಬೇಸಿಗೆ ಮೇವರೆಗೂ ಮುಂದುವರಿಯುತ್ತದೆ. ಈ ಸಂದರ್ಭದಲ್ಲಿ ಸರಾಸರಿ ಉಷ್ಣಾಂಶ ಗರಿಷ್ಠ 29 ಡಿಗ್ರಿ ಸೆಲ್ಶಿಯಸ್‌ ಆದರೆ ಕನಿಷ್ಠ 13 ಡಿಗ್ರಿ ಸೆಲ್ಶಿಯಸ್‌ ಆಗಿರುತ್ತದೆ. ಭೇಟಿಗೆ ಇದು ಸಕಾಲ.

ಮಳೆಗಾಲ

(ಜುಲೈನಿಂದ ಅಕ್ಟೋಬರ್‌): ಜುಲೈ ತಿಂಗಳಲ್ಲಿ ಆರಂಭವಾಗುವ ಮಳೆಗಾಲ ಇಲ್ಲಿ ಅಕ್ಟೋಬರ್‌ವರೆಗೂ ಮುಂದುವರಿಯುತ್ತದೆ. ಸಾಮಾನ್ಯ ಮಳೆ ಸುರಿಯುತ್ತದೆ. ಈ ಸಂದರ್ಭದಲ್ಲಿ ಭೇಟಿ ನೀಡುವ ಪ್ರವಾಸಿಗರು ಮಳೆಯ ಅರಿವು ಇಟ್ಟುಕೊಳ್ಳುವುದು ಉತ್ತಮ.

ಚಳಿಗಾಲ

(ನವೆಂಬರ್‌ನಿಂದ ಫೆಬ್ರವರಿ): ನವೆಂಬರ್‌ ತಿಂಗಳಲ್ಲಿ ಆರಂಭವಾಗುವ ಚಳಿಗಾಲ ಫೆಬ್ರವರಿಬರೆಗೂ ಇರುತ್ತದೆ. ಈ ಸಮಯದಲ್ಲಿ ಸರಾಸರಿ ತಾಪಮಾನ 2 ಡಿಗ್ರಿ ಸೆಲ್ಶಿಯಸ್‌ನಿಂದ 9 ಡಿಗ್ರಿ ಸೆಲ್ಶಿಯಸ್‌ವರೆಗೂ ಇರುತ್ತದೆ. ಭಾರಿ ಪ್ರಮಾಣದಲ್ಲಿ ಹಿಮಪಾತ ಇಲ್ಲಾಗುತ್ತದೆ. ಈ ಸಂದರ್ಭದಲ್ಲಿ  ಹಿಮವು ಇಲ್ಲಿ 12 ಮೀಟರ್‌ವರೆಗೂ ದಪ್ಪವಾಗಿ ಶೇಖರಣೆ ಆಗುತ್ತದೆ. ಈ ಕಾಲ ಸಾಮಾನ್ಯವಾಗಿ ಕ್ರೀಡಾ ಚಟುವಟಿಕೆಗಳಿಗೆ ಸೂಕ್ತ ಎಂದು ಹೇಳಲಾಗುತ್ತದೆ. ಪ್ರವಾಸಿಗರು ದೀರ್ಘಾವಧಿ ಸ್ಕೀಯಿಂಗ್‌, ಸ್ನೋ ಬೋರ್ಡಿಂಗ್‌ ಇತ್ಯಾದಿ ಚಟುವಟಿಕೆಯಲ್ಲಿ ತೊಡಗಬಹುದು.