ಉತ್ತರ ಪ್ರದೇಶ ರಾಜ್ಯದ ರಾಜಧಾನಿ ಲಖ್ನೋ ನಗರದಿಂದ ಪೂರ್ವಕ್ಕೆ ಸುಮಾರು ಇನ್ನೂರೈವತ್ತು ಕಿ.ಮೀ. ದೂರವಿರುವ ಗೋರಖ್ಪುರ ಒಂದು ಸುಂದರ ನಗರ. ಇತಿಹಾಸವನ್ನು ಕೆದಕಿದರೆ ಮೌರ್ಯರು, ಶುಂಗ, ಕುಶಾನಾ ಮತ್ತು ಗುಪ್ತ ರಾಜವಂಶಗಳು ಗೋರಖ್ಪುರವನ್ನು ಆಡಳಿತ ಕೇಂದ್ರವಾಗಿಸಿರುವುದನ್ನು ಗಮನಿಸಬಹುದು. ಸಂತ ಗೋರಕ್ಷನಾಥರಿಂದ ಗೋರಖಪುರ ಅಥವಾ ಗೋರಖ್ಪುರ ಎಂಬ ಹೆಸರು ಬಂದಿದೆ. ಪೂರ್ವ ಉತ್ತರಪ್ರದೇಶದ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಗೋರಖ್ಪುರದಲ್ಲಿ ಭಾರತದ ಈಶಾನ್ಯ ರೈಲ್ವೇ ಯ ಪ್ರಧಾನ ಕಾರ್ಯಾಲಯವೂ ಇದೆ. ಅಲ್ಲದೇ ಖುಷಿನಗರ, ಕಪಿಲವಾಸ್ತು ಮತ್ತು ನೇಪಾಳಕ್ಕೆ ಪಯಣಿಸಬೇಕಾದರೆ ಗೋರಖ್ಪುರದಿಂದಲೇ ಹೊರಡುವುದು ವಾಡಿಕೆಯಾಗಿದೆ. ಹಿಂದೂಗಳಿಗೆ ಪವಿತ್ರವಾದ ಭಗವದ್ಗೀತೆಯನ್ನು ಅತಿ ಹೆಚ್ಚಿ ಹೆಚ್ಚಿನ ಸಂಖ್ಯೆಯಲ್ಲಿ ಮುದ್ರಿಸುವ ಗೋರಖ್ಪುರ್ ಪ್ರೆಸ್ ಸಹಾ ಇಲ್ಲಿದೆ.
ಗೋರಖ್ಪುರದ ಪ್ರಮುಖ ಆಕರ್ಷಣೀಯ ತಾಣಗಳು
ನಗರದಲ್ಲಿರುವ ಹಲವಾರು ದೇಗುಲಗಳಲ್ಲಿ ಗೋರಖ್ಪುರ ಮಂದಿರ ಅತ್ಯಂತ ಸುಂದರವಾದ, ಪ್ರಮುಖ ಮತ್ತು ಧಾರ್ಮಿಕ ಕೇಂದ್ರವಾಗಿದೆ. ಹದಿನೇಳನೇ ಶತಮಾನದಲ್ಲಿ ಬದುಕಿದ್ದ ಸೂಫಿ ಸಂತರ ಸಮಾಧಿಯಾಗಿರುವ ಇಮಾಂಬಾರಾ ಎಂಬ ಮುಸ್ಲಿಂ ಧಾರ್ಮಿಕ ಸ್ಥಳವೂ ಇಲ್ಲಿದೆ. ಅಲ್ಲದೇ ನೈಸರ್ಗಿಕ ವಿಧಾನಗಳಿಂದ ಆರೋಗ್ಯಕ್ಕೆ ಸಂಬಂಧಿಸಿದ ಹಲವಾರು ಸೇವೆಗಳನ್ನು ಒದಗಿಸುವ ಆರೋಗ್ಯ ಮಂದಿರವೂ ಇಲ್ಲಿದೆ. ಅಲ್ಲದೇ ಹಲವಾರು ನೈಸರ್ಗಿಕ ಆಕರ್ಷಣೆಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ಅವುಗಳಲ್ಲಿ ಪ್ರಮುಖವಾದುದು ರಾಮ್ ಘಡ್ ತಾಲ್ . ಇದು ಸುಮಾರು ಏಳುನೂರು ಹೆಕ್ಟೇರ್ ಗೂ ಹೆಚ್ಚು ಪ್ರದೇಶವನ್ನು ವ್ಯಾಪಿಸಿರುವ ಮಹಾಸರೋವರವಾಗಿದೆ. ನೂರಾರು ವರ್ಷ ಬಾಳುವ ಸಲ್ ಮಾತ್ತು ಸಿಕ್ವೋಯಾ ( Sal and Sequoia) ಮರಗಳು ಹೇರಳವಾಗಿರುವ ಕುಶ್ಮಿ ಅರಣ್ಯವಲಯವೂ ಅನತಿ ದೂರದಲ್ಲಿದೆ. ಅಲ್ಲದೇ ವೀರ್ ಬಹಾದುರ್ ತಾರಾಲಯ ಮಕ್ಕಳ ಸಹಿತ ಹಿರಿಯರಿಗೂ ಖಗೋಳದ ವಿಸ್ಮಯಗಳನ್ನು ಪರಿಚಯಿಸುತ್ತದೆ.
ಗೋರಖ್ಪುರ್ ನಗರದ ಸಂದರ್ಶನಕ್ಕೆ ಅತ್ಯಂತ ಸೂಕ್ತ ಸಮಯ
ನವೆಂಬರ್ ನಿಂದ ಮಾರ್ಚ್ ತಿಂಗಳವರೆಗೆ ನಗರದ ಹವಾಮಾನ ಅಪ್ಯಾಯಮಾನವಾಗಿದ್ದು ಭೇಟಿಗೆ ಸಕಾಲವಾಗಿದೆ.