Search
  • Follow NativePlanet
Share
ಮುಖಪುಟ » ಸ್ಥಳಗಳು» ಫತೇಪುರ್ ಸಿಕ್ರಿ

ಫತೇಪುರ್ ಸಿಕ್ರಿ :  ಮೊಘಲರ ಅದ್ಭುತ ವಾಸ್ತುಶಿಲ್ಪ

30

16 ನೇ ಶತಮಾನದಲ್ಲಿ ಅಂದರೆ 1571 ಮತ್ತು 1583 ನಡುವಿನಲ್ಲಿ  ಮುಘಲ್ ಚಕ್ರವರ್ತಿ ಅಕ್ಬರ್ ಮೂಲಕ ಫತೇಪುರ್ ಸಿಕ್ರಿಯನ್ನು ನಿರ್ಮಿಸಲಾಗಿದೆ, ಯುನೆಸ್ಕೊ(UNESCO) ವಿಶ್ವ ಪರಂಪರೆಯ ತಾಣವಾದ ಫತೇಪುರ್ ಸಿಕ್ರಿ  ಉತ್ತರ ಪ್ರದೇಶದ ಆಗ್ರಾ ಸಮೀಪದಲ್ಲಿದೆ. ಮುಘಲ್ ಸಂಸ್ಕೃತಿ ಮತ್ತು ನಾಗರಿಕತೆಯ ಸಾಕ್ಷಿಯಾಗಿದೆ ನಿಂತಿದೆ ಈ ಸ್ಮಾರಕ ಪಟ್ಟಣ. ಸಂತ ಶೇಖ್ ಸಲೀಂ ಚಿಸ್ತಿಯು ಅಕ್ಬರ್  ನಿಗೆ ಮಗ ಹುಟ್ಟುತ್ತಾನೆ ಎಂದು ಭವಿಷ್ಯ ನುಡಿದಿದ್ದು ಇಲ್ಲಿಯೇ ಎನ್ನಲಾಗಿದೆ. ಇಲ್ಲಿನ ಯೋಜನೆ ಮತ್ತು ಪರಿಕಲ್ಪನೆಗಳು ಪಟ್ಟಣದ ಯೋಜನೆಯನ್ನು ಹೋಲುತ್ತದೆ ಮತ್ತು ಬಹುಷಃ ಹೆಚ್ಚಿನ ಮಾಹಿತಿಯನ್ನು ಹಳೆ ದಿಲ್ಲಿಯಲ್ಲಿರುವ ಷಹಜಹಾನಬಾದ್ ನಿಂದ ಪಡೆದರು ಎನ್ನಲಾಗಿದೆ.

ಐತಿಹಾಸಿಕ ಹಿನ್ನೆಲೆ

1585 ರಲ್ಲಿ ಅಕ್ಬರ್ ಆಫ್ಘಾನ್ ಬುಡಕಟ್ಟು ಜನರ ವಿರುದ್ಧ ಹೋರಾಡುವಾಗ ಫತೇಪುರ್ ಸಿಕ್ರಿಯು ಮುಘಲ್ ಆಡಳಿತದ ಕಾರ್ಯಾಲಯವಾಗಿ ಒಮ್ಮೆ ಕಾರ್ಯನಿರ್ವಹಿಸಿತ್ತು. ಅದಾದ ತರುವಾಯ 1619 ರ ಸಮಯದಲ್ಲಿ ಆಗ್ರಾಗೆ ಪ್ಲೇಗ್ ಮಹಾರೋಗವು ಆಕ್ರಮಣ ಮಾಡಿದಾಗ ಜಹಂಗೀರನು ಇಲ್ಲಿ 3 ತಿಂಗಳ ಕಾಲ ಆಶ್ರಯವನ್ನು ಪಡೆದಿದ್ದನು. ಇದಾದನಂತರ ಮೂಲೆಗುಂಪಾಗಿದ್ದ ಈ ತಾಣವು ಮತ್ತೆ 1892 ರಲ್ಲಿ ಮರುಶೋಧಿಸಲ್ಪಟ್ಟಿತು. ಆದಾಗ್ಯೂ ತನ್ನ ಅಸ್ತಿತ್ವದ 14 ವರ್ಷಗಳಲ್ಲಿ ಗಮನಾರ್ಹ ಆಳ್ವಿಕೆ ನಡೆಸಿ ಸಾಕಷ್ಟು ಅರಮನೆಗಳು, ಸಾರ್ವಜನಿಕ ಕಟ್ಟಡಗಳು, ಮಸೀದಿಗಳನ್ನು ಕಟ್ಟಿದರು ಎನ್ನಲಾಗಿದೆ. ಇದು ರಾಜರ ಸೇವಕರು ಮತ್ತು ಸೇನೆಯ ಜೀವನ ಪ್ರದೇಶವಾಗಿ ಕಾರ್ಯ ನಿರ್ವಹಿಸಿತು ಮತ್ತು ಜನಸಂಖ್ಯೆ ಕಡಿಮೆ ಇದ್ದ ಪ್ರದೇಶವಾಗಿತ್ತು.

ಈ ನಗರದ ಕೇವಲ ಒಂದು ಸಣ್ಣ ಭಾಗದಲ್ಲಿ ಮಾತ್ರ ಉತ್ಖನನ ಮಾಡಲಾಗಿದೆ. ಹೀಗೆ ಉತ್ಖನನ ಮಾಡಿ ಶೋಧಿಸಲಾದ ಹಲವು ಕಟ್ಟಡಗಳು ತುಲನಾತ್ಮಕವಾಗಿ ಗಟ್ಟಿಮುಟ್ಟಾಗಿರುವ ಸ್ಥಿತಿಯಲ್ಲಿ ಇವೆ. ವಿಶೇಷ ಸಂದರ್ಭಗಳಿಗಾಗಿ ನಿರ್ಮಿತವಾದ ಕೃತಕ ಸರೋವರದ ಹತ್ತಿರ ಕಲ್ಲಿನ ಪ್ರಸ್ಥಭೂಮಿ ಕಾಣಬಹುದು. 3 ಬದಿಗಳಲ್ಲಿ 6 ಕಿ.ಮೀ ಉದ್ದದ ಗೋಡೆಗಳನ್ನು ಹೊಂದಿರುವ ನಗರ ಸಾಕಷ್ಟು ಬೃಹತ್ ಕಟ್ಟಡಗಳು ಮತ್ತು 7 ಬಾಗಿಲುಗಳಿಂದ ಸಂರಕ್ಷಿಸಲ್ಪಟ್ಟಿದೆ. ಅದರಲ್ಲಿ ಮುಖ್ಯವಾದುದು ಆಗ್ರಾ ಬಾಗಿಲಾಗಿದೆ.

ಫತೇಪುರ್ ಸಿಕ್ರಿಯ ಮತ್ತು ಹತ್ತಿರದ ಪ್ರವಾಸಿ ಕೇಂದ್ರಗಳು

ಇಲ್ಲಿ ಕಂಡುಬರುವ ಅನೇಕ ಸ್ಮಾರಕಗಳನ್ನು ಕೆಂಪು ಸ್ಯಾಂಡ್ ಸ್ಟೋನ್‍ಗಳಿಂದ ನಿರ್ಮಿಸಲಾಗಿದ್ದು, ಹಿಂದೂ, ಇಂಡೊ-ಮುಸ್ಲಿಮ್ ಮತ್ತು ಪರ್ಷಿಯನ್ ಶೈಲಿಯ ವಾಸ್ತುಶಿಲ್ಪವನ್ನು ಬಿಂಬಿಸುತ್ತವೆ. ಈ ಗಮನಾರ್ಹ ಕಟ್ಟಡಗಳಲ್ಲಿ ದಿವಾನ್-ಇ -ಆಮ್, ಸಾರ್ವಜನಿಕ ಪ್ರೇಕ್ಷಕರ ಸಭಾಂಗಣ ಪೋರ್ಟಿಕೊ ಒಳಗೊಂಡ ಅಕ್ಬರ್ ನ್ಯಾಯ ನೀಡಲು ಬಳಸುತ್ತಿದ್ದ ಜಾಗ ಕೂಡ ಇದರಲ್ಲಿ ಸೇರಿವೆ. ದಿವಾನ್-ಇ -ಆಮ್ ನಿಂದ ದೌಲತ್ ಖಾನ ಅಥವಾ ಚಕ್ರಾಧಿಪತ್ಯದ ಅರಮನೆಯನ್ನು ಕಾಣಬಹುದು. ನಂತರ ಬೌದ್ಧ ದೇವಾಲಯಗಳನ್ನು ಹೋಲುವ ರಾಂಚ್ ಮಹಲ್, ಜೋಧಾ ಬಾಯಿ ಅರಮನೆ, ಅನುಪ್ ತಾಲಾವ್ ಅಥವಾ ಟರ್ಕಿ ಸುಲ್ತಾನಾ ಪೆವಿಲಿಯನ್, ಬೀರಬಲ್ ಅರಮನೆಯನ್ನು ಕೂಡ ಕಾಣಬಹುದು.

ಫತೇಪುರ್ ಸಿಕ್ರಿ ಹಲವಾರು ಧಾರ್ಮಿಕ ಸ್ಮಾರಕಗಳನ್ನೂ ಒಳಗೊಂಡಿದೆ. ಶಾಸನದ ಮೂಲಕ ಮೆಕ್ಕಾದಷ್ಟೆ ಪವಿತ್ರವೆಂದು ತಿಳಿಯಪಡಿಸುವ ಜಾಮಾ ಮಸೀದಿ ಮತ್ತು ಮಹತ್ ಮಸೀದಿಗಳನ್ನು ಇಲ್ಲಿ ಕಾಣಬಹುದಾಗಿದೆ. ಈ ಮಸೀದಿಯು ಶೇಖ್ ಸಲೀಮನ ಸಮಾಧಿಯಾಗಿದ್ದು ನಂತರದಲ್ಲಿ ಜಹಾಂಗೀರ್ ಇದನ್ನು ಅಲಂಕರಿಸಿದನು.1572 ರಲ್ಲಿ ಗುಜರಾತ್ ವಶಪಡಿಸಿಕೊಂಡ ನೆನಪಿಗಾಗಿ ಕಟ್ಟಿದ ಬುಲಂದ್ ದರ್ವಾಜಾ ಕೂಡ ನೋಡಬಹುದಾದ ಸ್ಥಳ. ಇದರ ಜೊತೆಗೆ ಇತರ ಸ್ಮಾರಕಗಳೆಂದರೆ ಇಬಾದತ್ ಖಾನ್, ಅನುಪ್ ತಾಲಾವ್, ಹುಜ್ರಾ ಇ ಅನುಪ್ ತಾಲಾವ್ ಮತ್ತು ಮಾರಿಮ್ ಉಜ್ ಜಮಾನಿ ಅರಮನೆಗಳು.

ಇಂದು ಫತೇಪುರ್ ಸಿಕ್ರಿ ಒಂದು ಪ್ರೇತ ಅಥವಾ ಭೂತಗಳ ನಗರ ಎಂಬ ನಾಮಧೇಯ ಪಡೆದಿದೆಯಾದರೂ ಇಲ್ಲಿರುವ ಸ್ಮಾರಕಗಳು ಮಾತ್ರ ಸಂರಕ್ಷಿಸಲ್ಪಟ್ಟು ಉತ್ತಮ ಸ್ಥಿತಿಯಲ್ಲಿವೆ. ನಗರದಲ್ಲಿನ ಒಂದು ಪ್ರವಾಸ ಆ ಯುಗದ ಸಂಪೂರ್ಣ ಮಾಹಿತಿ ಒದಗಿಸುವುದು ಖಂಡಿತ.

ಫತೇಪುರ್ ಸಿಕ್ರಿಯನ್ನು ತಲುಪುವ ಮಾರ್ಗ

ಫತೇಪುರ್ ಸಿಕ್ರಿಯು ರಸ್ತೆ ಮತ್ತು ವಾಯು ಮಾರ್ಗದ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ. ಹತ್ತಿರದ ವಿಮಾನ ನಿಲ್ದಾಣವೆಂದರೆ ಆಗ್ರಾ.

ಫತೇಪುರ್ ಸಿಕ್ರಿ ಭೇಟಿ ನೀಡಲು ಉತ್ತಮ ಕಾಲ

ನವೆಂಬರ್ ನಿಂದ ಏಪ್ರಿಲ್ ಕಾಲಾವಧಿಯು ಫತೇಪುರ್ ಸಿಕ್ರಿಯನ್ನು ಭೇಟಿ ನೀಡಲು ಉತ್ತಮ ಕಾಲವಾಗಿದೆ.

ಫತೇಪುರ್ ಸಿಕ್ರಿ ಪ್ರಸಿದ್ಧವಾಗಿದೆ

ಫತೇಪುರ್ ಸಿಕ್ರಿ ಹವಾಮಾನ

ಉತ್ತಮ ಸಮಯ ಫತೇಪುರ್ ಸಿಕ್ರಿ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಫತೇಪುರ್ ಸಿಕ್ರಿ

  • ರಸ್ತೆಯ ಮೂಲಕ
    ಫತೇಪುರ್ ಸಿಕ್ರಿಗೆ ಆಗ್ರಾ, ದೆಹಲಿ ಸೇರಿದಂತೆ ಇತರ ಮುಖ್ಯ ನಗರಗಳಿಂದ ರಾಜ್ಯ ಸಾರಿಗೆ ನಿಗಮದ ಬಸ್ಸುಗಳು ಓಡಾಡುತ್ತವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಹತ್ತಿರದ ರೈಲು ನಿಲ್ದಾಣ ಆಗ್ರಾ ಇಲ್ಲಿಗೆ ಭಾರತದ ಇತರೆ ನಗರಗಳಿಂದ ಉತ್ತಮ ರೈಲು ಸಂಪರ್ಕವಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    40 ಕಿ.ಮೀ ಅಂತರದಲ್ಲಿರುವ ಅಗ್ರಾದ ಖೇರಿಯ ವಿಮಾನ ನಿಲ್ದಾಣ ಹತ್ತಿರದ ವಿಮಾನ ನಿಲ್ದಾಣ. ಅಲ್ಲಿಂದ ನೀವು ಫತೇಪುರ್ ಸಿಕ್ರಿಗೆ ಟ್ಯಾಕ್ಸಿ ಮೂಲಕ ತಲುಪಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat