Search
  • Follow NativePlanet
Share
ಮುಖಪುಟ » ಸ್ಥಳಗಳು» ಫರಿದ್ಕೋಟ್

ಫರೀದ್ಕೋಟ್ - ರಾಜ ವೈಭೋಗದ ಮಹಾಕಾವ್ಯ

13

ಫರೀದ್ಕೋಟ್ ಎಂಬುದು ಪಂಜಾಬಿನ ನೈಋತ್ಯ ಭಾಗದಲ್ಲಿರುವ ಒಂದು ಸಣ್ಣ ನಗರ. ಇದನ್ನು 1972ರಲ್ಲಿ ಬಟಿಂಡಾ ಮತ್ತು ಫಿರೋಜ್‍ಪುರ್ ಜಿಲ್ಲೆಗಳಿಂದ ವಿಭಜಿಸಿ, ನೂತನವಾಗಿ ಸ್ಥಾಪಿಸಲಾಯಿತು. ಈ ನಗರಕ್ಕೆ ಸೂಫಿ ಸಂತ ಬಾಬಾ ಶೇಖ್ ಫರಿದುದ್ದೀನ್ ಗಂಜ್‍ಶಕರ್ ಅವರ ಹೆಸರನ್ನು ಇಡಲಾಗಿದೆ. ಸಿಖ್ಖರು ಮತ್ತು ಅವರ ಸುಂದರ ಗುರುದ್ವಾರಗಳು ಹಾಗು ಕೋಟೆಗಳಿಂದ ಕೂಡಿದ ಫರೀದ್ಕೋಟ್ ನೋಡುಗರಿಗೆ ರಾಜ ವೈಭವವದ ಸಿರಿಯನ್ನು ಉಣಿಸುತ್ತದೆ.

ಫರೀದ್ಕೋಟ್ ಸುತ್ತ- ಮುತ್ತ ಇರುವ ಆಕರ್ಷಣೆಗಳು

ಫರೀದ್ಕೋಟ್ ಪ್ರವಾಸಿಗರ ವಲಯದಲ್ಲಿ ದೇಶದಲ್ಲಿಯೇ ಉತ್ತಮ ಹೆಸರು ಗಳಿಸಿದೆ. ಫರೀದ್ಕೋಟ್‍ನ ಮುಖ್ಯ ಆಕರ್ಷಣೆಗಳು ಗುರುದ್ವಾರದಿಂದ ಹಿಡಿದು ಕೋಟೆಗಳವರೆಗು ಇದೆ. ಗುರುದ್ವಾರಗಳು ಈ ಊರಿನ ಖ್ಯಾತಿಗೆ ಮತ್ತಷ್ಟು ಮೆರಗು ನೀಡಿವೆ. ರಾಜ್ ಮಹಲ್, ಫೈರಿ ಕಾಟೇಜ್, ಕಿಲಾ ಮುಬಾರಕ್ ಮತ್ತು ಗುರುದ್ವಾರ ಟಿಲ್ಲ ಬಾಬಾ ಫರಿದ್‍ಗಳು ಇಲ್ಲಿನ ಪ್ರಸಿದ್ಧ ಪ್ರವಾಸಿ ತಾಣಗಳಾಗಿವೆ. ಇತಿಹಾಸ ಪ್ರಿಯರು ಇಲ್ಲಿನ ಶ್ರೀಮಂತ ಪರಂಪರೆಯನ್ನು ತಿಳಿದುಕೊಳ್ಳಲು ಇಲ್ಲಿಗೆ ಆಗಮಿಸಬಹುದು. ಫರೀದ್ಕೋಟ್ ಜಿಲ್ಲಾ ಸಾಂಸ್ಕೃತಿಕ ಸಂಘವು ಇಲ್ಲಿ ಪ್ರತಿ ವರ್ಷ 15ನೇ ಸೆಪ್ಟೆಂಬರ್ ನಿಂದ 23 ಸೆಪ್ಟೆಂಬರ್ ವರೆಗೆ ಫರಿದ್ ಮೇಲ ಎಂಬ ವಾರ್ಷಿಕ ಉತ್ಸವವನ್ನು ನಡೆಸುತ್ತದೆ. ಈ ಉತ್ಸವವು ದೇಶದ ನಾನಾ ಮೂಲೆಗಳಿಂದ ಜನರನ್ನು ತನ್ನತ್ತ ಆಕರ್ಷಿಸುತ್ತದೆ.

ಫರೀದ್ಕೋಟ್‍ಗೆ ತಲುಪುವುದು ಹೇಗೆ

ಅಮೃತ್‍ಸರ್ ವಿಮಾನ ನಿಲ್ದಾಣವು ಫರೀದ್ಕೋಟ‌ದಿಂದ 128 ಕಿ.ಮೀ ದೂರದಲ್ಲಿದೆ. ರೈಲುಗಳ ಮತ್ತು ಬಸ್ಸುಗಳ ಮೂಲಕ ಫರೀದ್ಕೋಟ್‍ಗೆ ತಲುಪಬಹುದು.

ಫರೀದ್ಕೋಟ್‍ಗೆ ಭೇಟಿ ನೀಡಲು ಅತ್ಯುತ್ತಮ ಅವಧಿ

ಫರೀದ್ಕೋಟ್‍ನಲ್ಲಿ ಬೇಸಿಗೆ,ಮಳೆಗಾಲ ಮತ್ತು ಚಳಿಗಾಲಗಳು ಕಂಡು ಬರುತ್ತವೆ. ಆದರೆ ಫರೀದ್ಕೋಟ್‍ಗೆ ಭೇಟಿ ನೀಡಲು ಅಕ್ಟೋಬರ್ ನಿಂದ ಡಿಸೆಂಬರ್ ನಡುವಿನ ಕಾಲವು ಹೇಳಿ ಮಾಡಿಸಿದ ಸಮಯವಾಗಿರುತ್ತದೆ.

ಫರಿದ್ಕೋಟ್ ಪ್ರಸಿದ್ಧವಾಗಿದೆ

ಫರಿದ್ಕೋಟ್ ಹವಾಮಾನ

ಉತ್ತಮ ಸಮಯ ಫರಿದ್ಕೋಟ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಫರಿದ್ಕೋಟ್

  • ರಸ್ತೆಯ ಮೂಲಕ
    ಫರೀದ್ಕೋಟ್‍ ಉತ್ತಮ ರಸ್ತೆ ಸಂಪರ್ಕಗಳನ್ನು ಹೊಂದಿದೆ. ಇದರ ಜೊತೆಗೆ ಉತ್ತಮ ಸಾರಿಗೆ ವ್ಯವಸ್ಥೆಯು ಇಲ್ಲಿದೆ. ಪಂಜಾಬಿನ ಪ್ರಮುಖ ನಗರಗಳಿಂದ ಸರ್ಕಾರಿ ಮತ್ತು ಖಾಸಗಿ ಸಾರಿಗೆ ಬಸ್ಸುಗಳು ಇಲ್ಲಿಗೆ ಬಂದು ಹೋಗುತ್ತಿರುತ್ತವೆ. ಅನುಕೂಲವಿರುವ ಪ್ರವಾಸಿಗರು ಫರೀದ್ಕೋಟ್‍ಗೆ ಟ್ಯಾಕ್ಸಿ ಅಥವಾ ಕ್ಯಾಬ್‍ನ ಮೂಲಕ ಸಹ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಫರೀದ್ಕೋಟ್‍ಗೆ ಬರಲು ಇಚ್ಛಿಸುವ ಪ್ರವಾಸಿಗರು ದೆಹಲಿ, ಅಮೃತ್‍ಸರ್, ಚಂಡೀಘಢ್ ಮತ್ತು ಲೂಧಿಯಾನದಂತಹ ನಗರಗಳಿಂದ ರೈಲಿನಲ್ಲಿ ಬೇಕಾದರು ಬರಬಹುದು. ಫರೀದ್ಕೋಟ್‍ದಿಂದ ಪ್ರಮುಖ ನಗರಗಳಿಗೆ ಉತ್ತಮ ರೈಲು ಸಂಪರ್ಕವಿದೆ. ಇಲ್ಲಿಂದ 9.5 ಕಿ.ಮೀ ದೂರದಲ್ಲಿ ಸಾಂಧ್ವಾನ್ ರೈಲು ನಿಲ್ದಾಣ ಸಹ ನೆಲೆಗೊಂಡಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಫರೀದ್ಕೋಟ್‍ಗೆ ಚಂಡೀಘಢ್ ಮತ್ತು ದೆಹಲಿಗಳಂತಹ ಪ್ರಮುಖ ನಗರಗಳಿಂದ ವಿಮಾನಗಳ ಸಂಪರ್ಕವಿದೆ. ವಿದೇಶದಿಂದ ಬರುವ ಪ್ರವಾಸಿಗರು ಅಮೃತಸರದಲ್ಲಿರುವ ಶ್ರೀ ಗುರು ರಾಮ್ ದಾಸ್ ಜೀ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಫರೀದ್ಕೋಟ್‍ಗೆ ತಲುಪಬಹುದು. ಈ ವಿಮಾನ ನಿಲ್ದಾಣವು ಅಮೃತ್‍ಸರದಿಂದ 11 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಫರೀದ್ಕೋಟ್‍ದಿಂದ ಈ ವಿಮಾನ ನಿಲ್ದಾಣಕ್ಕೆ ಸುಮಾರು 134 ಕಿ.ಮೀ ದೂರವಾಗುತ್ತದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri