Search
  • Follow NativePlanet
Share
ಮುಖಪುಟ » ಸ್ಥಳಗಳು » ಎಲ್ಲೋರಾ » ಹವಾಮಾನ

ಎಲ್ಲೋರಾ ಹವಾಮಾನ

ಇಡೀ ವರ್ಷದಲ್ಲಿ ಯಾವುದೇ ಸಮಯದಲ್ಲೂ ಕೂಡಾ ಎಲ್ಲೋರಾಗೆ ಭೇಟಿ ನಿಡಬಹುದು. ಬಹುತೇಕ ಎಲ್ಲಾ ಸಮಯಗಳಲ್ಲೂ ಇಲ್ಲಿನ ವಾತಾವರಣವು ಪ್ರಯಾಣಿಕರಿಗೆ ಸೂಕ್ತವಾಗಿರುತ್ತದೆ.

ಬೇಸಿಗೆಗಾಲ

ಪ್ರಯಾಣವನ್ನು ದೃಷ್ಟಿಯಲ್ಲಿಟ್ಟುಕೊಂಡು ನೋಡಿದರೆ ಬೇಸಿಗೆಗಾಲವು ಸ್ವಲ್ಪ ಕಷ್ಟಕರವಾದದ್ದು. ವಿಶೇಷವಾಗಿ ವಿದೇಶಿ ಪ್ರವಾಸಿಗರು ಇಲ್ಲಿ ಬಿಸಿಲು ತುಂಬಾ ಇರುವುದರಿಂದ ಹೆಚ್ಚಿನ ಉಷ್ಣಾಂಶ ಅನುಭವಿಸಬೇಕಾಗುತ್ತದೆ.

ಮಳೆಗಾಲ

ಮಳೆಯನ್ನು ಇಷ್ಟಪಡುವವರಾದರೆ ಮಳೆಗಾಲವು ಉತ್ತಮ ವಾತಾವರಣ. ಈ ಅವಧಿಯಲ್ಲಿ ಸುತ್ತಲಿನ ವಾತಾವರಣವು ತುಂಬಾ ಆಕರ್ಷಕವಾಗಿರುತ್ತದೆ.

ಚಳಿಗಾಲ

ಮಧ್ಯ ಅಕ್ಟೋಬರಿನಿಂದ ಮಾರ್ಚಿನ ಅವಧಿಯು ಈ ಗುಹೆಗಳನ್ನು ಭೇಟಿ ಮಾಡುವುದಕ್ಕೆ ಸೂಕ್ತ ಕಾಲ. ಈ ಅವಧಿಯಲ್ಲಿ ವಾತಾವರಣವು ತಂಪಾಗಿರುತ್ತದೆ ಮತ್ತು ಪ್ರಯಾಣಕ್ಕೆ ಸೂಕ್ತವಾಗಿರುತ್ತದೆ.