Search
  • Follow NativePlanet
Share
ಮುಖಪುಟ » ಸ್ಥಳಗಳು» ಈಸ್ಟ್ ಗರೊ ಹಿಲ್ಸ್

ಮಾನವ ಜಾತಿಯ ಸ್ವಾರ್ಥ ಸಾಧನೆಯ ಬಾಯಿಗೆ ತುತ್ತಾಗದ - ಈಸ್ಟ್ ಗರೊ ಹಿಲ್ಸ್

4

ಮೇಘಾಲಯದ 11 ಜಿಲ್ಲೆಗಳಲ್ಲಿ ಈಸ್ಟ್ ಗರೊ ಹಿಲ್ಸ್ ಕೂಡ ಒಂದು. ಮೇಘಾಲಯವನ್ನು ಒಂದು ರಾಜ್ಯವನ್ನಾಗಿ ಮಾಡಿದಾಗ, ಪೂರ್ಣ ಪ್ರಮಾಣದಲ್ಲಿ ಇದು ಜಿಲ್ಲೆಯಾಗಿ ಮಾರ್ಪಟ್ಟಿತು. ವಿಲಿಯಂನಗರದ ಜಿಲ್ಲಾಡಳಿತ ಮಂಡಳಿಯ ಕೇಂದ್ರ ಕಚೇರಿಯಿಂದ ಈಸ್ಟ್ ಗರೊ ಹಿಲ್ಸ್ ಕೆಲಸ ಮಾಡುತ್ತದೆ. ಪೂರ್ವನಿಯೋಜಿತ ಯೋಜನೆಯ ಪ್ರಕಾರ ಕಟ್ಟಿದ ಈ ಪಟ್ಟಣವನ್ನು ಮೇಘಾಲಯದ ಪ್ರಥಮ ಮುಖ್ಯಮಂತ್ರಿ ಕ್ಯಾಪ್ಟನ್ ವಿಲಿಯಂಸನ್ ಸಂಗ್ಮಾ ಅವರ ನಂತರ ಹೆಸರಿಸಲಾಗಿದೆ. ಈ ಪಟ್ಟಣವನ್ನು ಪ್ಲಾನ್ ಮಾಡಿ ಕಟ್ಟಿರುವುದರಿಂದ ಎಲ್ಲ ತರಹದ ಸೌಲಭ್ಯಗಳೂ ಲಭ್ಯವಿದ್ದು, ರಾಜ್ಯದ ಬೆಳೆಯುತ್ತಿರುವ ಪಟ್ಟಿಗಳಲ್ಲಿ ಇದೂ ಒಂದು.

ಈಸ್ಟ್ ಗರೊ ಹಿಲ್ಸ್ ಸುಮಾರು 2603 ಚದರ ಕಿ.ಮೀ. ವಿಸ್ತೀರ್ಣವನ್ನು ಹೊಂದಿದೆ. ಅದರ ದಕ್ಷಿಣ ಭಾಗಕ್ಕೆ ಸೌತ್ ಸೌತ್ ಗರೊ ಹಿಲ್ಸ್, ಪೂರ್ವ ಭಾಗಕ್ಕೆ ಈಸ್ಟ್ ಖಾನಿ ಹಿಲ್ಸ್, ಪಶ್ಚಿಮಕ್ಕೆ ವೆಸ್ಟೋ ಗರೊ ಹಿಲ್ಸ್ ಮತ್ತು ಉತ್ತರಕ್ಕೆ ಅಸ್ಸಾಂನ ಕೆಲ ಭಾಗಗಳು ಆವರಿತವಾಗಿವೆ. ಈಸ್ಟ್ ಗರೊ ಹಿಲ್ಸ್ ನಲ್ಲಿ ಹೆಚ್ಚಾಗಿ ಗರೊ ಎಂಬ ಬುಡಕಟ್ಟು ಜನಾಂಗದವರು ವಾಸವಾಗಿದ್ದಾರೆ. ಮೇಘಾಲಯದಲ್ಲಿ ಖಾಸೀಸ್ ಬುಡಕಟ್ಟು ಜನಾಂಗದ ನಂತರ ಗರೊ ಬುಡಕಟ್ಟು ಜನಾಂಗದವರು ಎರಡನೇ ಸ್ಥಾನದಲ್ಲಿದ್ದಾರೆ. ದೊಡ್ಡ ಸಂಖ್ಯೆಯಲ್ಲಿ ಹಜೋಂಗ್ಸ್, ರಭಾಸ್, ಬನೈಸ್, ಡಾಲುಸ್ ಮತ್ತು ಬೊರೋಸ್ ಬುಡಕಟ್ಟು ಜನಾಂಗದವರು ಇಲ್ಲಿ ವಾಸವಿದ್ದಾರೆ.

ಈಸ್ಟ್ ಗರೊ ಹಿಲ್ಸ್ ಪ್ರಾಣಿ ಸಂಪತ್ತು ಹಾಗು ವನ್ಯ ಸಂಪತ್ತಿನಿಂದ ಸಮೃದ್ಧವಾಗಿದೆ. ಈಸ್ಟ್ ಗರೊ ಹಿಲ್ಸ್ ನ ಪ್ರವಾಸೋದ್ಯಮ ಪೂರ್ಣವಾಗಿ ಅನ್ವೇಷಣೆಗೆ ಒಳಪಟ್ಟಿಲ್ಲ. ಆದರೆ, ಸರಿಯಾದ ರೀತಿಯಲ್ಲಿ ಇಲ್ಲಿಯ ಪ್ರದೇಶವನ್ನು ಕೂಲಂಕಷವಾಗಿ ಶೋಧಿಸಿ, ಅದರ ಪ್ರಕಾರವೇ ಅಭಿವೃದ್ಧಿ ಪಡಿಸಿದರೆ, ರಾಜ್ಯದ ಬೊಕ್ಕಸಕ್ಕೆ ಉತ್ತಮ ವರಮಾನವನ್ನು ತಂದುಕೊಡುತ್ತದೆ. ಈಸ್ಟ್ ಗರೊ ಹಿಲ್ಸ್ ಕೇವಲ ಪ್ರಾಕೃತಿಕ ಸೌಂದರ್ಯಕ್ಕೆ ಅಷ್ಟೇ ಸೀಮಿತವಾಗಿಲ್ಲ. ಇತಿಹಾಸ ಮತ್ತು ಸಂಸ್ಕೃತಿ ಕೂಡ ಈಸ್ಟ್ ಗರೊ ಹಿಲ್ಸ್ ಪ್ರವಾಸೋದ್ಯಮದ ಅವಿಭಾಜ್ಯ ಅಂಗವಾಗಿದೆ.

ಈಸ್ಟ್ ಗರೊ ಹಿಲ್ಸ್ ತಲುಪುವ ಬಗೆ

ಗರೊ ಹಿಲ್ಸ್ ನಲ್ಲಿ ತುರ ಎಂಬ ದೊಡ್ಡ ಪಟ್ಟಣದಿಂದ ವಿಲಿಯಂನಗರ ಸುಮಾರ್ 75 ಕಿ.ಮೀ. ದೂರದಲ್ಲಿದೆ. ವಿಲಿಯಂನಗರದಿಂದ ತುರ ಪಟ್ಟಣಕ್ಕೆ ತಲುಪಲು ಸುಮಾರು 1 ಗಂಟೆ 30 ನಿಮಿಷಗಳ ಕಾಲಾವಧಿಬೇಕು. ಪ್ರವಾಸಿಗರು ರಾಜ್ಯ ರಸ್ತೆ ಸಾರಿಗೆ ಬಸ್ ಗಳನ್ನು ಅಥವಾ ಕ್ಯಾಬ್ ಗಳನ್ನು ಪ್ರಯಾಣಕ್ಕೆ ಉಪಯೋಗಿಸಬಹುದು.

ಈಸ್ಟ್ ಗರೊ ಹಿಲ್ಸ್ ಹವಾಮಾನ

ಈಸ್ಟ್ ಗರೊ ಹಿಲ್ಸ್ ನಲ್ಲಿ ಬೇಸಿಗೆ ಕಾಲವು ಬೆಚ್ಚಗಿದ್ದು, ಚಳಿಗಾಲದಲ್ಲಿ ಚುಮುಚುಮು ಚಳಿ ಇರುತ್ತದೆ. ಮುಂಗಾರಿನಲ್ಲಿ ಭಾರೀ ಮಳೆಯಾಗುತ್ತದೆ. ವಿಶೇಷವಾಗಿ ಚಳಿಗಾಲದಲ್ಲಿ ಅಥವಾ ಬೇಸಿಗೆ ಆರಂಭದ ಋತುವಿನಲ್ಲಿ ಇಲ್ಲಿಗೆ ಭೇಟಿ ಕೊಡುವುದು ಸೂಕ್ತ. ಏಕೆಂದರೆ, ಈ ಸಮಯದಲ್ಲಿ ಪ್ರದೇಶದ ವಾತಾವರಣ ಹಿತಕರವಾಗಿರುತ್ತದೆ.

ಈಸ್ಟ್ ಗರೊ ಹಿಲ್ಸ್ ಪ್ರಸಿದ್ಧವಾಗಿದೆ

ಈಸ್ಟ್ ಗರೊ ಹಿಲ್ಸ್ ಹವಾಮಾನ

ಉತ್ತಮ ಸಮಯ ಈಸ್ಟ್ ಗರೊ ಹಿಲ್ಸ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಈಸ್ಟ್ ಗರೊ ಹಿಲ್ಸ್

  • ರಸ್ತೆಯ ಮೂಲಕ
    ರಾಷ್ಟ್ರೀಯ ಹೆದ್ದಾರಿ 51 ಮತ್ತು ರಾಷ್ಟ್ರೀಯ ಹೆದ್ದಾರಿ 62 ಈಸ್ಟ್ ಗರೊ ಹಿಲ್ಸ್ ಜಿಲ್ಲೆಯ ಮುಂದೆ ಹಾಯ್ದು ಹೋಗುತ್ತವೆ ಮತ್ತು ಅನೇಕ ಪಟ್ಟಣಗಳಿಗೆ ಹಾಗು ಹಳ್ಳಿಗಳಿಗೆ ತಲುಪಲು ಇದು ಬಹಳ ಮುಖ್ಯವಾಗಿದೆ. ರಾಷ್ಟ್ರೀಯ ಹೆದ್ದಾರಿಗಳನ್ನು ಹೊರತುಪಡಿಸಿದರೆ, ರಾಜ್ಯ ಹೆದ್ದಾರಿಗಳು ಕೂಡ ಬಹುತೇಕ ಪ್ರದೇಶಗಳಿಗೆ ಸಂಪರ್ಕವನ್ನು ಒದಗಿಸುತ್ತವೆ. ಪ್ರವಾಸಿಗರಿಗೆ ಗುವಾಹಾಟಿಯಿಂದ ಮತ್ತು ಶಿಲ್ಲಾಂಗ್ ನಿಂದ ವಿಲಿಯಂನಗರಕ್ಕೆ ಉತ್ತಮವಾದ ಸಾರಿಗೆ ವ್ಯವಸ್ಥೆ ಲಭ್ಯವಿರುತ್ತದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಗುವಾಹಾಟಿಯ ರೈಲು ನಿಲ್ದಾಣವೇ ಮೇಘಾಲಯಕ್ಕೆ ಮುಖ್ಯ ಸಂಚಾರ ವ್ಯವಸ್ಥೆಯಾಗಿ ಕಾರ್ಯ ನಿರ್ವಹಿಸುತ್ತದೆ. ದೇಶದ ಯಾವುದೇ ಭಾಗದಿಂದ ಗುವಾಹಾಟಿಗೆ ತಲುಪಿ ಆನಂತರ ಅಲ್ಲಿಂದ 9 ಕಿ.ಮೀ. ದೂರದಲ್ಲಿರುವ ಅಂತಾರಾಜ್ಯ ಬಸ್ ನಿಲ್ದಾಣದಿಂದ ಬಸ್ ಮೂಲಕ ಈಸ್ಟ್ ಗರೊ ಹಿಲ್ಸ್ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಮೇಘಾಲಯದ ರಾಜಧಾನಿಯಾಗಿರುವ ಶಿಲ್ಲಾಂಗ್ ನಿಂದ 25 ಕಿ.ಮೀ. ದೂರದಲ್ಲಿರುವ ಉಮರಾಯ್ ನಲ್ಲಿ ರಾಜ್ಯದ ಏಕೈಕ ವಿಮಾನ ನಿಲ್ದಾಣವಿದೆ. ಆದರೆ, ಗುವಾಹಾಟಿಯಲ್ಲಿರುವ ಲೋಕಪ್ರಿಯ ಗೋಪಿನಾಥ ಬೊರ್ ಡೊಲಾಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಷ್ಟ್ರೀಯ ಹೆದ್ದಾರಿ 51 ತಲುಪಿ ಅಲ್ಲಿಂದ ಗರೊ ಹಿಲ್ಸ್ ಗೆ ಪ್ರಯಾಣಿಸುವುದು ಹೆಚ್ಚು ಸೂಕ್ತ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri