Search
  • Follow NativePlanet
Share
ಮುಖಪುಟ » ಸ್ಥಳಗಳು » ಈಸ್ಟ್ ಗರೊ ಹಿಲ್ಸ್ » ಹವಾಮಾನ

ಈಸ್ಟ್ ಗರೊ ಹಿಲ್ಸ್ ಹವಾಮಾನ

ಮಾನವನ ವಿಪರೀತ ಹಸ್ತಕ್ಷೇಪವಿಲ್ಲದೆ ನಿಷ್ಕಳಂಕವಾಗಿರುವ ಈ ಪ್ರದೇಶವಾದ ಈಸ್ಟ್ ಗರೊ ಹಿಲ್ಸ್ ಭೇಟಿ ನೀಡಲು ಚಳಿಗಾಲವೇ ಸೂಕ್ತ ಸಮಯ. ಅತಿಯಾದ ಚಳಿ ಇಲ್ಲದಿರುವುದರಿಂದ ಸುಂದರವಾದ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಅನುಕೂಲಕರವಾಗಿರುತ್ತದೆ. ಸಾಹಸಿಗಳಿಗೆ ಮತ್ತು ಚಾರಣಿಗರಿಗೆ ಈ ಪ್ರದೇಶವನ್ನು ಅನ್ವೇಷಿಸಲು ಚಳಿಗಾಲ ಸರಿಯಾದ ಸಮಯ. ಇಲ್ಲಿಗೆ ಪ್ರಯಾಣ ಬೆಳೆಸಬೇಕಾದರೆ ವುಲನ್ ಬಟ್ಟೆಗಳನ್ನು ತೆಗೆದುಕೊಂಡು ಹೋಗಲು ಮಾತ್ರ ಮರೆಯಬಾರದು.

ಬೇಸಿಗೆಗಾಲ

ಮೇಘಾಲಯದ ಇತರ ಪ್ರದೇಶಗಳಿಗೆ ಹೋಲಿಸಿದರೆ ಈಸ್ಟ್ ಗರೊ ಹಿಲ್ಸ್ ಉಷ್ಣಾಂಶ ಹೆಚ್ಚಾಗಿರುತ್ತದೆ. 37 ಡಿಗ್ರಿ ಸೆಲ್ಶಿಯಸ್ ನಷ್ಟು ಗರಿಷ್ಠ ಉಷ್ಣಾಂಶವನ್ನು ಇಲ್ಲಿ ನಿರೀಕ್ಷಿಸಬಹುದು. ಗರೊ ಹಿಲ್ಸ್ ಸಮತಟ್ಟಾದ ಪ್ರದೇಶದಲ್ಲಿ ಇರುವುದರಿಂದ ಉಷ್ಣಾಂಶ ಪ್ರದೇಶವನ್ನು ಬೆಚ್ಚಗೆ ಮಾಡುತ್ತದೆ ಮತ್ತು ಪ್ರದೇಶ ಆರ್ದ್ರ ವಾತಾವರಣದಿಂದ ಕೂಡಿರುತ್ತದೆ.

ಮಳೆಗಾಲ

ಮುಂಗಾರು ಜುಲೈನಿಂದ ಶುರುವಾಗಿ ಸೆಪ್ಟೆಂಬರ್ ವರೆಗೆ ಇರುತ್ತದೆ. ಈ ತಿಂಗಳಲ್ಲಿ ಇಲ್ಲಿ ಭಾರೀ ಮಳೆ ಸುರಿಯುತ್ತಿರುತ್ತದೆ. ಇಡೀ ಜಿಲ್ಲೆಯಲ್ಲಿ ಅನೇಕ ಪ್ರದೇಶಗಳು ಸಂಪರ್ಕ ಕಳೆದುಕೊಂಡಿರುತ್ತವೆ. ಆದ್ದರಿಂದ ರಸ್ತೆ ಸಂಚಾರ ಕೂಡ ಸ್ಥಗಿತಗೊಂಡಿರುತ್ತದೆ. ಆಗಾಗ್ಗೆ ಆಗುವ ನೆರೆಯಿಂದಾಗಿ ಮಳೆಗಾಲದಲ್ಲಿ ಈ ಪ್ರದೇಶಕ್ಕೆ ಪ್ರವಾಸ ಕೈಗೊಳ್ಳುವುದು ಶ್ರೇಯಸ್ಕರವಲ್ಲ.

ಚಳಿಗಾಲ

ಚಳಿಗಾಲದಲ್ಲಿ ಹವಾಮಾನ ತುಂಬಾ ಹಿತಕರವಾಗಿರುತ್ತದೆ. ಗರಿಷ್ಠ ಉಷ್ಣಾಂಶ 25 ಡಿಗ್ರಿ ಮತ್ತು ಕನಿಷ್ಠ 7 ಡಿಗ್ರಿ ಸೆಂಟಿಗ್ರೇಡ್ ಇರುತ್ತದೆ. ಅಕ್ಟೋಬರ್ ಶುರುವಿನಲ್ಲಿಯೇ ಚಳಿಗಾಲ ಆರಂಭವಾಗಿ ಫೆಬ್ರವರಿ ಕೊನೆಯವರೆಗೆ ಚಳಿಯಿರುತ್ತದೆ.