ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳ ನಡುವಿನ ದಿನಗಳು ಧಾರ್ ಪ್ರಯಾಣಕ್ಕೆ ಉತ್ತಮ ಸಮಯವೆಂದು ಪರಿಗಣಿಸಲಾಗಿದೆ. ಈ ತಿಂಗಳುಗಳಲ್ಲಿ ಹವಾಮಾನವು ಅತ್ಯಂತ ತಂಪಾಗಿರುವದಲ್ಲದೇ ಸಾಕಷ್ಟು ಆಹ್ಲಾದಕರವಾಗಿರುತ್ತದೆ. ಇನ್ನು ಚಳಿಗಾಲದಲ್ಲಿ ಧಾರ್ ಗೆ ಭೇಟಿ ನೀಡುವವರು ಪ್ರಯಾಣದ ವೇಳೆ ಬೆಚ್ಚಗಿನ ಬಟ್ಟೆಗಳನ್ನು ಕೊಂಡೊಯ್ಯುವುದು ಅವಶ್ಯಕ.
ಮಾರ್ಚ ತಿಂಗಳಿನಿಂದ ಆರಂಭವಾಗುವ ಬೇಸಿಗೆಯಲ್ಲಿ ದಿನಗಳು ಬಿಸಿ ಇರುತ್ತಿದ್ದು ರಾತ್ರಿಗಳು ಸ್ವಲ್ಪ ತಂಪಾಗಿರುತ್ತವೆ. ದಿನದ ತಾಪಮಾನ ಗರಿಷ್ಠ 34 ° C ಇರುತ್ತಿದ್ದು, ರಾತ್ರಿಯಲ್ಲಿ ಕನಿಷ್ಠ 16 ° C ಗೆ ಇಳಿಯುತ್ತದೆ. ಬೇಸಿಗೆಯಲ್ಲಿ ಒಟ್ಟಾರೆ ತಾಪಮಾನ 40°C ಗೂ ಹೆಚ್ಚಿರುತ್ತಿದ್ದು, ಆರ್ದ್ರವಾದ ಶುಷ್ಕ ವಾಯುಗಣವನ್ನು ಹೊಂದಿರುತ್ತದೆ.
ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಗರಿಷ್ಠ ಮಳೆಯಾಗುವ ಧಾರ್ ನಗರಿಯಲ್ಲಿ ಮಳೆಗಾಲವು ಜೂನ್ ನಲ್ಲಿಯೇ ಪಾದಾರ್ಪಣೆ ಮಾಡಿರುತ್ತದೆ. ಪ್ರತಿವರ್ಷ ಸರಾಸರಿ 1000 ಮಿ ಮಿ ನಷ್ಟು ಮಳೆಯಾಗುತ್ತಿದ್ದು, ಈ ಕಾಲದಲ್ಲಿ ಕೊಂಚ ತೇವ ಮತ್ತು ಆರ್ದ್ರ ಮಿಶ್ರಿತ ವಾತಾವರಣವಿರುತ್ತದೆ.
ಚಳಿಗಾಲದಲ್ಲಿ ಧಾರ್ ನಲ್ಲಿ ತಂಪಾದ ಆದರೆ ಆಹ್ಲಾದಕರ ಹವಾಗುಣವಿರುತ್ತದೆ. ಅಕ್ಟೋಬರ್ ನಿಂದ ಫೆಬ್ರುವರಿಯವರೆಗಿನ ಕಾಲ ಇಲ್ಲಿಗೆ ಭೇಟಿ ನೀಡಲು ಒಳ್ಳೆಯ ಸಮಯವಾಗಿದೆ. ಚಳಿಗಾಲದಲ್ಲಿ ಧಾರ್ ನ ಕನಿಷ್ಠ ತಾಪಮಾನ 5 ಡಿಗ್ರಿವರೆಗೆ ಇಳಿಮುಖವಾಗುತ್ತದೆ. ಈ ಕಾಲದಲ್ಲಿ ಕೈಗಾರಿಕಾ ಚಟುವಟಿಕೆಗಳಿಗಾಗಿ ದೇಶ-ವಿದೇಶಗಳಿಂದ ಸಾಕಷ್ಟು ಜನರು ಇಲ್ಲಿಗೆ ಭೇಟಿ ನೀಡುತ್ತಾರೆ.