ಧಮತರಿಯಲ್ಲಿ ಉಷ್ಣವಲಯದ ವಾತಾವರಣವಿದ್ದು, ಬೇಸಿಗೆ ಕಾಲ, ಮಳೆಗಾಲ ಮತ್ತು ಚಳಿಗಾಲ ಇಲ್ಲಿನ ಮುಖ್ಯ ಋತುಗಳಾಗಿವೆ. ಧಮತರಿಗೆ ಭೇಟಿ ನೀಡಲು ಸೂಕ್ತ ಸಮಯ ಚಳಿಗಾಲವಾಗಿದೆ.
ಧಮತರಿ ನಗರದಲ್ಲಿ ಬೇಸಿಗೆ ಕಾಲವು ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳುಗಳಲ್ಲಿ ಇರುತ್ತದೆ. ಈ ಮೂರು ತಿಂಗಳುಗಳಲ್ಲಿ ಗರಿಷ್ಠ ತಾಪಮಾನವು ಸುಮಾರು ನಲುವತ್ತು ಡಿಗ್ರಿ ಹಾಗೂ ಕನಿಷ್ಠ ತಾಪಮಾನವು ಸುಮಾರು ಇಪ್ಪತ್ತೆಂಟು ಡಿಗ್ರಿ ಗಳ ಆಸುಪಾಸಿನಲ್ಲಿರುತ್ತದೆ. ಈ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡುವುದು ಒಳ್ಳೆಯದಲ್ಲ.
ಧಮತರಿಯಲ್ಲಿ ಮಳೆಗಾಲ ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳುಗಳಲ್ಲಿರುತ್ತದೆ. ಈ ತಿಂಗಳುಗಳಲ್ಲಿ ಮಿತವಾಗಿ ಮಳೆಯಾಗುತ್ತಿದ್ದು, ತಾಪಮಾನ ಕ್ರಮೇಣ ಕಡಿಮೆಯಾಗುತ್ತದೆ. ಈ ಸಮಯದಲ್ಲಿ ಕೂಡಾ ಧಮತರಿಗೆ ಭೇಟಿ ನೀಡಬಹುದು.
ಧಮತರಿ ನಗರದಲ್ಲಿ ಚಳಿಗಾಲವು ಸೆಪ್ಟೆಂಬರ್ ತಿಂಗಳಲ್ಲಿ ಶುರುವಾಗಿ ಫೆಬ್ರವರಿ ತನಕ ಮುಂದುವರೆಯುತ್ತದೆ. ಚಳಿಗಾಲದಲ್ಲಿ ಗರಿಷ್ಟ ತಾಪಮಾನ ಸುಮಾರು ಇಪ್ಪತ್ತೇಳು ಡಿಗ್ರಿ ಹಾಗೂ ಕನಿಷ್ಠ ತಾಪಮಾನ ಸುಮಾರು ಹದಿಮೂರು ಡಿಗ್ರಿ ಗಳಷ್ಟು ಇರುತ್ತದೆ.