Search
  • Follow NativePlanet
Share
ಮುಖಪುಟ » ಸ್ಥಳಗಳು » ದೇವಿಕುಲಂ » ಹವಾಮಾನ

ದೇವಿಕುಲಂ ಹವಾಮಾನ

ದೇವಿಕುಲಂ ನಲ್ಲಿ ಪ್ರಶಾಂತ ವಾತಾವರಣ ಯಾಕಿರುತ್ತದೆಯೆಂದರೆ ಇದು ಸಮುದ್ರ ಮಟ್ಟದಿಂದ ಸುಮಾರು 1800 ಮೀ. ಎತ್ತರದಲ್ಲಿದೆ. ಈ ಪರ್ವತ ಪ್ರದೇಶಕ್ಕೆ ಭೇಟಿ ನೀಡಲು ಸೂಕ್ತ ಕಾಲವೆಂದರೆ ಬೇಸಿಗೆಕಾಲ. ಇಲ್ಲಿನ ತಂಪಾದ ವಾತಾವರಣವು ನಗರದ ಗಿಜಿಗುಟ್ಟುವಿಕೆಯಿಂದ ಹೊಸತನ ಬಯಸಿದವರಿಗೆ ಸೂಕ್ತವಾದದ್ದು.

ಬೇಸಿಗೆಗಾಲ

ದೇವಿಕುಲಂ ಗೆ ಭೇಟಿ ಮಾಡಲು ಸೂಕ್ತ ಸಮಯವೆಂದರೆ ಬೇಸಿಗೆಕಾಲ. ಮಾರ್ಚ್ನಿಂದ ಆರಂಭವಾಗುವ ಬೇಸಿಗೆಕಾಲವು ಮೇ ತನಕ ಇರುತ್ತದೆ. ಎತ್ತರ ಪ್ರದೇಶವಾಗಿರುವುದರಿಂದಾಗಿ ವಾತಾವರಣವು ಪ್ರಶಾಂತವಾಗಿರುತ್ತದೆ. ಗರಿಷ್ಟ 16 ಡಿಗ್ರಿ ಸೆಲ್ಷಿಯಸ್ ಇದ್ದರೆ ಕನಿಷ್ಟ ತಾಪಮಾನವು 8 ಡಿಗ್ರಿ ಇರುತ್ತದೆ.

ಮಳೆಗಾಲ

ಮಳೆಗಾಲದಲ್ಲಿ ಅತಿಯಾದ ಮಳೆಯಾಗುತ್ತದೆ. ಮಳೆಗಾಲದಲ್ಲಿ ಇಡೀ ಪರ್ವತದ ನೆನೆದುಹೋಗುತ್ತದೆ. ಮಳೆಯ ರಭಸಕ್ಕೆ ಮೂಡುವ ಹಸಿರು ಅದ್ಭುತ ಆನಂದವನ್ನು ನೀಡುತ್ತದೆ. ದೇವಿಕುಲಂ ನಲ್ಲಿ ಜೂನ್ನಿಂದ ಸಪ್ಟೆಂಬರಿನವರೆಗೆ ಯಥೇಚ್ಛವಾಗಿ ಮಳೆ ಬೀಳುತ್ತದೆ. ಮಳೆಗಾಲದಲ್ಲಿ ಇಲ್ಲಿನ ವಾತಾವರಣ ಹಿತಕರ. ಈ ಅವಧಿಯಲ್ಲಿ ದೇವಿಕುಲಂ ಗೆ ಭೇಟಿ ನೀಡುವುದು ಅತ್ಯಂತ ಮಧುರ, ಆದರೆ ಚಾರಣ ಸೂಕ್ತವಲ್ಲ.

ಚಳಿಗಾಲ

ಡಿಸೆಂಬರಿನಿಂದ ಫೆಬ್ರುವರಿಯ ತನಕ ದೇವಿಕುಲಂ ನಲ್ಲಿ ಚಳಿಗಾಲವಿರುತ್ತದೆ. ಜನವರಿಯು ವರ್ಷದ ಅತ್ಯಂತ ಶೀತ ವಾತಾವರಣ. ಗರಿಷ್ಟ 10 ಡಿಗ್ರಿ ಸೆಲ್ಷಿಯಸ್ ತನಕ ಇಲ್ಲಿನ ತಾಪಮಾನವಿರುತ್ತದೆ ಮತ್ತು ಕನಿಷ್ಟ 0 ಡಿಗ್ರಿಯ ತನಕವೂ ಇಳಿಯುತ್ತದೆ. ಚಳಿಗಾಲದಲ್ಲಿ ದೇವಿಕುಲಂ ಗೆ ಹೋಗುವ ಪ್ರವಾಸಿಗರು ಸೂಕ್ತ ತಯಾರಿಯೊಂದಿಗೆ ಹೋಗುವುದು ಸೂಕ್ತ.