Search
  • Follow NativePlanet
Share
ಮುಖಪುಟ » ಸ್ಥಳಗಳು » ದೆಹಲಿ » ಹವಾಮಾನ

ದೆಹಲಿ ಹವಾಮಾನ

ದೆಹಲಿಯು ವರ್ಷಪೂರ್ತಿ ಅತಿ ಎನಿಸುವಂತಹ ಹವಾಗುಣವನ್ನು ಹೊಂದಿರುತ್ತದೆ. ಇಲ್ಲಿ ಅತಿಯಾದ ಬಿಸಿಲಿನ ಬೇಸಿಗೆ ಮತ್ತು ಅತ್ಯಂತ ಕೊರೆಯುವ ಚಳಿಗಾಲವನ್ನು ನಾವು ಕಾಣಬಹುದು. ಹಾಗಾಗಿ ದೆಹಲಿಗೆ ಹೋಗಲು ಅಕ್ಟೋಬರ್ ನಿಂದ ಮಾರ್ಚ್ ವರೆಗಿನ ಅವಧಿ ಅತ್ಯುತ್ತಮ ಅವಧಿಯಾಗಿದೆ.

ಬೇಸಿಗೆಗಾಲ

ಇಲ್ಲಿ ಬೇಸಿಗೆಯು ಎಪ್ರಿಲ್ ನಿಂದ ಜುಲೈ ಮಧ್ಯಭಾಗದವರೆಗೆ ಇರುತ್ತದೆ. ಆಗ ಇಲ್ಲಿ ಉಷ್ಣಾಂಶವು ಅಧಿಕವಾಗಿರುತ್ತದೆ. ಇಲ್ಲಿ ಮೇ ಮತ್ತು ಜೂನ್‍ನಲ್ಲಿ ಉಷ್ಣಾಂಶವು 49°ಸೆಲ್ಶಿಯಸ್‍ನೊಂದಿಗೆ ತನ್ನ ತುತ್ತತುದಿಗೆ ತಲುಪಿರುತ್ತದೆ. ಈ ಅವಧಿಯಲ್ಲಿ ದೆಹಲಿಗೆ ಪ್ರವಾಸ ಹೋಗದಿರುವುದು ಉತ್ತಮ.

ಮಳೆಗಾಲ

ಮಳೆಗಾಲವು ದೆಹಲಿಯಲ್ಲಿ ಜುಲೈನಿಂದ ಆರಂಭವಾಗಿ ಸೆಪ್ಟೆಂಬರ್ ಮಧ್ಯಭಾಗದವರೆಗೆ ಇರುತ್ತದೆ. ದೆಹಲಿಯಲ್ಲಿ ವಾರ್ಷಿಕ ಸರಾಸರಿ 714 ಮಿ.ಮೀ ಮಳೆಯಾಗುತ್ತದೆ. ಮಳೆಗಾಲದಲ್ಲಿ ಇಲ್ಲಿ ಆರ್ದ್ರತೆಯು ಅತ್ಯಧಿಕವಾಗಿರುತ್ತದೆ. ಹಾಗಾಗಿ ಈ ಸಮಯದಲ್ಲಿ ಇಲ್ಲಿಗೆ ಪ್ರವಾಸ ಹೋಗದಿರುವುದು ಸೂಕ್ತ.

ಚಳಿಗಾಲ

ಚಳಿಗಾಲವು ಇಲ್ಲಿ ನವೆಂಬರ್ ಮಧ್ಯ ಭಾಗದಿಂದ ಆರಂಭವಾಗುತ್ತದೆ. ಡಿಸೆಂಬರ್ ಅಂತ್ಯಕ್ಕೆ ಇಲ್ಲಿ ಚಳಿಯು ತಡೆದುಕೊಳ್ಳಲಾರದಷ್ಟು ಪ್ರಮಾಣಕ್ಕೆ ಏರಿಕೆಯಾಗುತ್ತದೆ. ಆಗ ಇಲ್ಲಿ ಉಷ್ಣಾಂಶವು ಸುಮಾರು 4° ಸೆಲ್ಶಿಯಸ್‍‍ಗಿಂತ ಕೆಳಗೆ ಕುಸಿಯುವುದುಂಟು. ಚಳಿಗಾಲವು ಇಲ್ಲಿ ಮಾರ್ಚ್ ವರೆಗೂ ವಿಸ್ತರಿಸಿರುತ್ತದೆ. ಈ ಅವಧಿಯಲ್ಲಿ ಇಲ್ಲಿಗೆ ಭೇಟಿಕೊಡುವವರು ಚಳಿಗಾಲದ ಉಡುಪುಗಳನ್ನು ತಮ್ಮೊಂದಿಗೆ ಒಯ್ಯುವುದು ಉತ್ತಮ. ರಾತ್ರಿ ಸಮಯದಲ್ಲಿ ಇಲ್ಲಿನ ಉಷ್ಣಾಂಶವು ಅಸಹನೀಯ ಪ್ರಮಾಣದಲ್ಲಿ ಕುಸಿಯುವ ಸಂಭವನೀಯತೆ ಇರುತ್ತದೆ.