Search
  • Follow NativePlanet
Share
ಮುಖಪುಟ » ಸ್ಥಳಗಳು » ದೆಹಲಿ » ಆಕರ್ಷಣೆಗಳು » ಕೊರೋನೇಷನ್‌ ಪಾರ್ಕ್

ಕೊರೋನೇಷನ್‌ ಪಾರ್ಕ್, ದೆಹಲಿ

4

ಹೊಸದಿಲ್ಲಿಯಲ್ಲಿರುವ ಕೊರೋನೇಷನ್‌ ಪಾರ್ಕ್ ಅತ್ಯಂತ ಪ್ರಸಿದ್ಧ ತಾಣ. ಬುರಾರಿ ರಸ್ತೆಯ ನಿರಂಕಾರಿ ಸರೋವರಕ್ಕೆ ಸಮೀಪದಲ್ಲಿದೆ. ಇದನ್ನು ಕೊರೋನೇಷನ್‌ ಸ್ಮಾರಕ ಅಂತಲೂ ಕರೆಯಲಾಗುತ್ತದೆ. ಇದು ಮರಳು ಕಲ್ಲಿನ ಖಂಬಗಳಿಂದ ಸಿದ್ಧಗೊಂಡಿರುವ ಬೃಹತ್‌ ಪಾರ್ಕ್ ಆಗಿದೆ. ಕೊರೋನೇಷನ್ ಪಾರ್ಕ್ ಕೂಡ ಇಂದು ದಿಲ್ಲಿಯನ್ನು ದೇಶದ ರಾಜಧಾನಿಯನ್ನಾಗಿ ಮಾಡುವಲ್ಲಿ ಸಹಕರಿಸಿದೆ.

1877ರಲ್ಲಿ ಬ್ರಿಟೀಷರು ಈ ಪಾರ್ಕ್ ಅನ್ನು ನಿರ್ಮಿಸಿದರು. ಅಂದು ವಿಕ್ಟೋರಿಯಾ ರಾಣಿ ಇದನ್ನು ದೇಶದ ಪ್ರಭಾವಿ ತಾಣ ಎಂದು ಗುರುತಿಸಿದ್ದರು. 1903 ರಲ್ಲಿ ಅಧಿಕಾರ ನಡೆಸಿದ್ದ ಎಡ್ವರ್ಡ್ VII ರ ಅವಧಿಯಲ್ಲಿ ಇದು ದರ್ಬಾರ್‌ ಸಭಾಂಗಣವಾಗಿ ಬಳಕೆ ಆಗುತ್ತಿತ್ತು. ಕಿಂಗ್‌ ಜಾರ್ಜ್ ಅವರ ಅಧಿಕಾರ ಸೇರ್ಪಡೆಯ ಕುರಿತು ಒಂದು ವೈಭವಯುತ ದರ್ಬಾರ್ ಸಭೆಯನ್ನು ಇಲ್ಲಿ ಸುಮಾರು 1911ರಲ್ಲಿ ಮಾಡಲಾಗಿತ್ತು ಮತ್ತು ಅದೇ ಸಮಯದಲ್ಲಿ ದೇಶದ ರಾಜಧಾನಿ ಕೋಲ್ಕತ್ತಾವನ್ನು ದಿಲ್ಲಿಗೆ ಬದಲಿಸಿ ಅಧಿಕಾರ ಹಸ್ತಾಂತರಿಸುವ ಘೋಷಣೆ ಮಾಡಲಾಯಿತು. ಅಂದೇ ದಿಲ್ಲಿಯನ್ನು ರಾಜಧಾನಿಯಾಗಿಸಿ ಅಡಿಗಲ್ಲು ಹಾಕಲಾಯಿತು. ಆಗ ಈ ಪಾರ್ಕ್ ಇನ್ನಷ್ಟು ಪ್ರವರ್ಧಮಾನಕ್ಕೆ ಬಂತು. ಇದಲ್ಲದೆ, ಈ ಮರಳು ಕಲ್ಲಿನ ಮಂಟಪದಲ್ಲಿ ಇಂದು ಕಿಂಗ್‌ ಜಾರ್ಜ್ V ನ ಪ್ರತಿಮೆ ಕೂಡ ಇದೆ. ಇದರ ಸುತ್ತಲೂ ಭಾರತವನ್ನಾಳಿದ ಅನೇಕ ಬ್ರಿಟೀಷ್‌ ಆಡಳಿತಗಾರರ ಪ್ರತಿಮೆಗಳಿವೆ. ಇದರೊಂದಿಗೆ ಗವರ್ನರ್‌ಗಳು ಹಾಗೂ ರಾಜಾಧಿಕಾರಿಗಳ ಪ್ರತಿಮೆಯೂ ಸ್ಥಾಪಿತವಾಗಿದೆ. ದಿಲ್ಲಿ ಅಭಿವೃದ್ಧಿ ಪ್ರಾಧಿಕಾರವು ಈ ತಾಣವನ್ನು ಸಂರಕ್ಷಿಸುವ ಯೋಜನೆ ಹಾಗೂ ಸದ್ಬಳಕೆ ಮಾಡುವ ಕಾರ್ಯಕ್ಕೆ ಮುಂದಾಗಿದೆ. ಇದನ್ನೊಂದು ಉದ್ಯಾನ ಹಾಗೂ ಸ್ಮಾರಕವನ್ನಾಗಿಸಲು ಮುಂದಾಗಿದೆ. ಇದು ದಿಲ್ಲಿಯ ಜನಪ್ರಿಯ ಮಾರ್ಗವಾದ ಬಾಯಿ ಪರಮಾನಂದ ಮಾರ್ಗ ಅಥವಾ ಬುರಾರಿ ರಸ್ತೆಯಲ್ಲಿದೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed