Search
  • Follow NativePlanet
Share
ಮುಖಪುಟ » ಸ್ಥಳಗಳು » ದಾಂಡೇಲಿ » ಹವಾಮಾನ

ದಾಂಡೇಲಿ ಹವಾಮಾನ

ಅಕ್ಟೋಬರ್ ಮತ್ತು ಮೇ ಮಧ್ಯದ ತಿಂಗಳುಗಳಲ್ಲಿ ದಾಂಡೇಲಿ ಪಟ್ಟಣದಲ್ಲಿ ಉತ್ತಮ ಹವಾಮಾನ ಇರುವುದರಿಂದ ಪ್ರವಾಸಿಗರು ಭೇಟಿ ನೀಡಬಹುದು. ಡಿಸೆಂಬರ್ ಮತ್ತು ಮೇ ಪ್ರಕೃತಿ ಸೌಂದರ್ಯ ವೀಕ್ಷಣೆಗೆ ಉತ್ತಮ ಸಮಯ. ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳು ಪಕ್ಷಿ ವೀಕ್ಷಣೆಗೆ ಸೂಕ್ತ ಸಮಯ. ಮಾರ್ಚ್ ನಿಂದ ಮೇ ತಿಂಗಳುಗಳಲ್ಲಿ ಸಾಹಸಜಲ ಕ್ರೀಡೆ ಮಾಡಲು ಅತ್ಯಂತ ಸೂಕ್ತ ಸಮಯವಾಗಿದೆ.

ಬೇಸಿಗೆಗಾಲ

(ಮಾರ್ಚ್ ನಿಂದ ಮೇ): ದಾಂಡೇಲಿಯಲ್ಲಿ ಬೇಸಿಗೆಕಾಲ ತುಂಬ ಉತ್ತಮ ವಾತಾವರಣ ಹೊಂದಿರುತ್ತದೆ. ಈ ಸಮಯದಲ್ಲಿ ಗರಿಷ್ಠ ಉಷ್ಣಾಂಶ 33 ಡಿ.ಸೆ.ನಷ್ಟಿರುತ್ತದೆ. ಪ್ರವಾಸಿಗರು ಈ ಸಮಯದಲ್ಲೇ ಇಲ್ಲಿಗೆ ಭೇಟಿ ನೀಡಬೇಕು.

ಮಳೆಗಾಲ

(ಜೂನ್ ನಿಂದ ಸೆಪ್ಟೆಂಬರ್) : ಮಳೆಗಾಲದಲ್ಲಿ ದಾಂಡೇಲಿ ಪ್ರದೇಶದಲ್ಲಿ ವಿಪರೀತ ಮಳೆಯಾಗುತ್ತಿರುತ್ತದೆ. ಈ ಸಮಯದಲ್ಲಿ ದಾಂಡೇಲಿಗೆ ಪ್ರವಾಸಿಗರು ಭೇಟಿ ನೀಡುವುದು ಸೂಕ್ತವಲ್ಲ.

ಚಳಿಗಾಲ

(ಡಿಸೆಂಬರ್ ನಿಂದ ಫೆಬ್ರವರಿ) : ಚಳಿಗಾಲದಲ್ಲಿ ದಾಂಡೇಲಿಯು ತಂಪಾದ ಹಿತಕರ ಹವಾಮಾನ ಹೊಂದಿರುತ್ತದೆ. ಇಲ್ಲಿ ಗರಿಷ್ಠ ಉಷ್ಣಾಂಶ 26 ಡಿ.ಸೆ.ನಷ್ಟಿರುತ್ತದೆ. ಈ ಸಮಯವು ಪ್ರವಾಸಿಗರಿಗೆ ಅತ್ಯುತ್ತಮವಾಗಿದೆ. ಪ್ರವಾಸಿಗರು ಚಳಿಗಾಲದಲ್ಲಿ ಇಲ್ಲಿಗೆ ಭಾರಿ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ.