Search
  • Follow NativePlanet
Share
ಮುಖಪುಟ » ಸ್ಥಳಗಳು » ಡಾಲ್ ಹೌಸಿ » ಹವಾಮಾನ

ಡಾಲ್ ಹೌಸಿ ಹವಾಮಾನ

ಮಾರ್ಚ್ ನಿಂದ ನವೆಂಬರ್‌ ನಡುವಿನ ಕಾಲ ಡಾಲ್‌ಹೌಸಿಗೆ ಭೇಟಿ ನೀಡಲು ಸರಿಯಾದ ಕಾಲ. ಮಾರ್ಚ್ ನಿಂದ ಜೂನ್‌ ನಡುವೆ ಪ್ರವಾಸಿಗರು ತಾಣದ ವೀಕ್ಷಣೆಯ ಮುದ ಅನುಭವಿಸಬಹುದು. ವಾತಾವರಣವೂ ಅತ್ಯುತ್ತಮವಾಗಿದ್ದು, ಹೊರಗೆ ಅಡ್ಡಾಡಲು ಹೇಳಿ ಮಾಡಿಸಿದಂತಿರುತ್ತದೆ. ಕಿರು ಪ್ರವಾಸಕ್ಕೆ ಇದು ವ್ಯವಸ್ಥಿತ ಸಮಯ. ಜುಲೈನಿಂದ ನವೆಂಬರ್‌ ನಡುವಿನ ಅವಧಿ ಕೂಡ ಪ್ರವಾಸಕ್ಕೆ ಯೋಗ್ಯ. ಇನ್ನು ಡಿಸೆಂಬರ್‌ನಿಂದ ಫೆಬ್ರವರಿ ನಡುವಿನ ಕಾಲ ತಂಪಾಗಿರುತ್ತದೆ. ಡಾಲಹೌಸಿ ಹಿಮ ಬೀಳುವ ಪ್ರದೇಶಗಳಲ್ಲಿ ಒಂದು. ಇದರಿಂದ ಚಳಿಗಾಲದಲ್ಲಿ ಬರುವವರು ಸೂಕ್ತ ಮುಂಜಾಗ್ರತೆ ವಹಿಸುವುದು ಉತ್ತಮ.

ಬೇಸಿಗೆಗಾಲ

(ಮಾರ್ಚ್ ನಿಂದ ಮೇ) ಬೇಸಿಗೆಯಲ್ಲಿ ಡಾಲಹೌಸಿ ಸುಮಧುರ ವಾತಾವರಣವನ್ನು ಹೊಂದಿರುತ್ತದೆ. ತಾಪಮಾನ ಈ ಸಂದರ್ಭದಲ್ಲಿ 15.5 ಡಿಗ್ರಿ ಸೆಂಟಿಗ್ರೇಡ್‌ನಿಂದ 25.5 ಡಿಗ್ರಿ ಸೆಂಟಿಗ್ರೇಡ್‌ವರೆಗೆ ಇರುತ್ತದೆ. ಪ್ರವಾಸಿಗರಿಗೆ ನೀಡುವ ಸೂಚನೆಯೆಂದರೆ ಇತ್ತ ಬರಲು ಇದು ಸಕಾಲ. ನಿಸರ್ಗ ಸೌಂದರ್ಯವನ್ನು ಇಚ್ಛಾನುಸಾರ ಅನುಭವಿಸಬಹುದು.

ಮಳೆಗಾಲ

(ಜೂನ್‌ ನಿಂದ ಸೆಪ್ಟೆಂಬರ್‌): ಮಳೆಗಾಲ ಇಲ್ಲಿ ಹೆಚ್ಚಾಗಿಯೇ ಪ್ರಭಾವ ಬೀರುತ್ತದೆ. ಜೂನ್‌ನಿಂದ ಸೆಪ್ಟೆಂಬರ್‌ ನಡುವೆ ಮಳೆ ಸುರಿಯುತ್ತದೆ. ವಾರ್ಷಿಕವಾಗಿ ಇಲ್ಲಿ ಸರಾಸರಿ 214 ಸೆಂ.ಮೀ. ಮಳೆ ಸುರಿಯುತ್ತದೆ. ಮಳೆಗಾಲದಲ್ಲಿ ಇಲ್ಲಿನ ಬೆಟ್ಟ ಗುಡ್ಡಗಳನ್ನು ವೀಕ್ಷಿಸುವುದು ಅತಿ ರಮಣೀಯ. ಆದ್ದರಿಂದ ಇದೇ ಸಂದರ್ಭದಲ್ಲಿ ಪ್ರವಾಸ ಹೊರಟು ಬರುವವರು ಹೆಚ್ಚಿರುತ್ತಾರೆ. ಆದರೆ ಜಾಗರೂಕತೆಯಿಂದಿರುವುದು ಉತ್ತಮ.

ಚಳಿಗಾಲ

(ಡಿಸೆಂಬರ್‌ನಿಂದ ಫೆಬ್ರವರಿ): ಚಳಿಗಾಲದಲ್ಲಿ ಇಲ್ಲಿ ತಾಪಮಾನ ಕುಸಿಯುತ್ತದೆ. ಗರಿಷ್ಠ 10 ಡಿಗ್ರಿ ಸೆಲ್ಶಿಯಸ್‌ನಿಂದ ಕೆಲವೊಮ್ಮೆ 1 ಡಿಗ್ರಿ ಸೆಲ್ಶಿಯಸ್‌ವರೆಗೂ ತಲುಪುತ್ತದೆ. ಪ್ರವಾಸಕ್ಕೆ ಈ ಸಮಯವನ್ನು ಆಯ್ಕೆ ಮಾಡಿಕೊಳ್ಳುವವರು ದಪ್ಪವಾದ ಉಲ್ಲನ್‌ ಬಟ್ಟೆ, ಶಾಲು ಇತ್ಯಾದಿ ತಂದುಕೊಳ್ಳುವುದು ಉತ್ತಮ. ಶರತ್ಕಾಲ (ಅಕ್ಟೋಬರ್‌ನಿಂದ ನವೆಂಬರ್‌) ಪ್ರವಾಸಿಗರಿಗೆ ಇದೊಂದು ಅದ್ಭುತ ಅನುಭವ ನೀಡುವ ಸಮಯ. ಡಾಲ್‌ಹೌಸಿಯ ನಿಜವಾದ ಪ್ರವಾಸದ ಅನುಭವ ಪಡೆಯಲು ಅಕ್ಟೋಬರ್‌ನಿಂದ ನವೆಂಬರ್‌ ನಡುವಿನ ಅವಧಿ ಉತ್ತಮವಾದುದು. ಪ್ರತಿಯೊಬ್ಬರೂ ಇಷ್ಟಪಡುವ ವಾತಾವರಣ ಈ ಸಂದರ್ಭದಲ್ಲಿರುತ್ತದೆ. ಮನಸ್ಸಿಗೂ ಉಲ್ಲಾಸ ಸಿಗುತ್ತದೆ.