ಕೊಡಗಿನ ವೀರಭೂಮಿಯು ಕೂಡ ಭೇಟಿ ನೀಡಬಹುದಾದಂತಹ ಸ್ಥಳವಾಗಿದೆ. ಇಲ್ಲಿ ಇದೊಂದೆ ಕರ್ನಾಟಕದ ಸಾಂಪ್ರದಾಯಿಕ ವೈಭವತೆಯನ್ನು ಪ್ರದರ್ಶಿಸುತ್ತಿರುವ ತಂಗುದಾಣವಾಗಿದೆ. ತಂಗುದಾಣವು ಯುದ್ಧಭೂಮಿಯ ಕಳೆಯನ್ನು ಹೊಂದಿದ್ದು,ಸೇವಾ ಪರಿಚಾರಕರು ಸೈನಿಕರ ವಸ್ತ್ರಗಳನ್ನು ಧರಿಸಿರುವುದು ಕಾಣಬಹುದು ಮತ್ತು ಮನರಂಜನೆಗಾಗಿ ಸಂಗೀತವನ್ನೂ ಕೇಳಬಹುದಾಗಿದೆ.ಪ್ರವಾಸಿಗರು ಈ ತಂಗುದಾಣದಲ್ಲಿ, ಪ್ರಕೃತಿಯ ಸೊಬಗಿನ ನಡುವೆ ಮೈಮರೆತು ಈಜಲು ಈಜು ಕೊಳಾಯಿಯನ್ನು ಆಸ್ವಾದಿಸಬಹುದಾಗಿದೆ. ಇಲ್ಲಿಗೆ ಬರುವಂತಹ ಪ್ರವಾಸಿಗರ ದೃಷ್ಟಿಕೋನಕ್ಕನುಸಾರವಾಗಿ ವಿವಿಧ ಬಗೆಯ ಕಾಟೇಜ್ ಗಳನ್ನು ಸಹ ಇಲ್ಲಿ ನೋಡಬಹುದಾಗಿದೆ.


Click it and Unblock the Notifications