Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಣ್ಣೂರು » ಹವಾಮಾನ

ಕುಣ್ಣೂರು ಹವಾಮಾನ

ಕುಣ್ಣೂರ್ ಒಂದು ಗಿರಿಧಾಮವಾದ್ದರಿಂದ ವರ್ಷವಿಡೀ ಹಿತಕರವಾದ ಹವಾಮಾನವನ್ನು ಹೊಂದಿರುತ್ತದೆ. ಬೇಸಿಗೆ ಕಾಲ (ಮಾರ್ಚ್ ನಿಂದ ಮೇ ವರೆಗೆ)ಚಾರಣಿಕರಿಗೆ, ಪ್ರವಾಸಿ ತಾಣಗಳಿಗೆ ಭೇಟಿ ಕೊಡಲು ಇಚ್ಛಿಸುವವರಿಗೆ ಸೂಕ್ತ ಸಮಯ. ಹಸಿರುಬನಸಿರಿಯ ಸೌಂದರ್ಯವನ್ನು ಕಾಣಬಯಸುವವರು ಮುಂಗಾರಿನಲ್ಲಿ ಪ್ರಯಾಣ ಬೆಳೆಸಬಹದು. ಆದರೆ, ಭಾರಿ ಮಳೆಯಾಗುವ ಸಮಯದಲ್ಲಿ ಪ್ರಯಾಣ ಬೆಳಸದಿರುವುದೇ ಉತ್ತಮ. ಅಕ್ಟೋಬರ್ ನಿಂದ ಫೆಬ್ರವರಿ ಕಡೆಯ ಭಾಗದವರೆಗು ಪ್ರವಾಸ ಕೈಗೊಳ್ಳಲು, ಮಧುಚಂದ್ರಕ್ಕೆ ಹೋಗಲು ಸೂಕ್ತ ಸಮಯ.

ಬೇಸಿಗೆಗಾಲ

ಕುಣ್ಣೂರ್ ನಲ್ಲಿ, ಬೇಸಿಗೆ ಕಾಲವು ಮಾರ್ಚ್ ನಿಂದ ಶುರುವಾಗಿ ಮೇ ತಿಂಗಳವರೆಗು ಮುಂದುವರೆಯುತ್ತದೆ. ಈ ಅವಧಿಯಲ್ಲಿ ಹವಾಮಾನವು ಹಿತಕರವಾಗಿದ್ದು, ಉಷ್ಣಾಂಶದಲ್ಲಿ ಅತಿಯಾದ ಏರಿಕೆ ಇರದೆ ಸಂದರ್ಶನಕಾರನಿಗೆ ಅನುಕೂಲಕರವಾಗಿರುತ್ತದೆ. ಬೇಸಿಗೆ ಕಾಲದ ಮುಂಜಾನೆ ಸುಂದರವಾಗಿರುತ್ತದೆ. ಕಣವೆಯ ಸಮೀಪದ ಲಾಡ್ಜ್ ನಲ್ಲಿ ಇಳಿದುಕೊಂಡಿದ್ದರಂತೂ ಮುಂಜಾವಿನ ನೋಟ ದಿವ್ಯಾನುಭವ ನೀಡುತ್ತದೆ. ಈ ಸಮಯದಲ್ಲಿ ತಾಪಮಾನ 15ರಿಂದ 25 ಡಿಗ್ರಿವರೆಗೆ ಇರುತ್ತದೆ.

ಮಳೆಗಾಲ

ಕುಣ್ಣೂರಿನಲ್ಲಿ ಮುಂಗಾರು ಜೂನ್ ತಿಂಗಳಲ್ಲಿ ಆರಂಭವಾಗುತ್ತದೆ. ಸೆಪ್ಟೆಂಬರ್ ವರೆಗೆ ಇರುವ ಮುಂಗಾರಿನಲ್ಲಿ ಇಲ್ಲಿ ಸಾಕಷ್ಟು ಮಳೆಯಾಗುತ್ತದೆ. ವಾತಾವರಣದಲ್ಲಿ ಆರ್ದ್ರತೆ ಜಾಸ್ತಿ ಇರುವುದರಿಂದ ಈ ಸಮಯದಲ್ಲಿ ಇಲ್ಲಿ ಭೇಟಿ ನೀಡುವುದು ಅಷ್ಟು ಶ್ರೇಯಸ್ಕರವಲ್ಲ. ಆದರೆ, ಮಳೆಗಾಲದಿಂದಾಗಿ ಕುನೂರಿನ ಕಣಿವೆಗಳು ಪಚ್ಚೆ ಹಸುರಿನಿಂದ ಕಂಗೊಳಿಸುವುದನ್ನು ನೋಡುವುದೇ ಒಂದು ಆನಂದ.

ಚಳಿಗಾಲ

ನವೆಂಬರ್ ನಿಂದ ಫೆಬ್ರವರಿವರೆಗೆ ಇರುವ ಚಳಿಗಾಲದಲ್ಲಿ ವಾತಾವರಣ ವಿಪರೀತ ತಂಪಾಗಿರುತ್ತದೆ. ಈ ಋತುವಿನಲ್ಲಿ ತಾಪಮಾನ 10 ಡಿಗ್ರಿ ಸೆಲ್ಶಿಯಸ್ ವರೆಗೆ ಇಳಿದಿರುತ್ತದೆ. ತಂಪು ವಾತಾವರಣ ಇಷ್ಟಪಡುವವರಿಗೆ ಪ್ರವಾಸ ಕೈಗೊಳ್ಳಲು ಇದು ಸಕಾಲ. ಆದರೆ, ಈ ಸಮಯದಲ್ಲಿ ಪ್ರವಾಸ ಕೈಗೊಳ್ಳುವವರು ಮಾತ್ರ ಬೆಚ್ಚಗಿನ ಬಟ್ಟೆ ತೆಗೆದುಕೊಂಡು ಹೋಗುವುದನ್ನು ಮರೆಯಬಾರದು.