ಈ ನಗರದಲ್ಲಿ ಏಳು ಮುಖ್ಯ ರಸ್ತೆಗಳು ಇವೆ ಹಾಗು ಮೂರು ರಾಷ್ಟ್ರೀಯ ಹೆದ್ದಾರಿಗಳು ಈ ನಗರದ ಮೂಲಕ ಹಾದು ಹೋಗುತ್ತವೆ. ರಸ್ತೆಗಳ ಸಂಪರ್ಕ ಜಾಲದ ಸಹಾಯದಿಂದ ಕೊಯಮತ್ತೂರಿನಿಂದ ಹತ್ತಿರದ ಗ್ರಾಮ, ಪಟ್ಟಣ ಮತ್ತು ನಗರಗಳಿಗೆ ಉತ್ತಮ ಬಸ್ ಸೌಕರ್ಯವಿದೆ. ಹೊರ ರಾಜ್ಯಗಳಿಗೆ ಹೋಗುವವರಿಗಾಗಿ ಇಲ್ಲಿ ಹಲವು ಅಂತರ್ ರಾಜ್ಯ ಬಸ್ ನಿಲ್ದಾಣಗಳು ಸಹ ಇವೆ. ಖಾಸಗಿ ಟ್ಯಾಕ್ಸಿಗಳು ಕೊಯಮತ್ತೂರಿನಿಂದ ಇತರ ಭಾಗಗಳಿಗೆ ಹೋಗಬಹುದಾದರು, ಅವುಗಳ ದರವು ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸುಗಳಿಗಿಂತ ಹೆಚ್ಚಾಗಿರುತ್ತವೆ.