Search
 • Follow NativePlanet
Share
ಮುಖಪುಟ » ಸ್ಥಳಗಳು» ಚಿದಂಬರಂ

ಚಿದಂಬರಂ : ನಟರಾಜ ಸ್ವಾಮಿಯ ನಗರ

20

ಚಿದಂಬರಂ ತಮಿಳುನಾಡು ರಾಜ್ಯದ ಕಡಲೂರ್ ಜಿಲ್ಲೆಯಲ್ಲಿ ನೆಲೆಗೊಂಡಿರುವ ಒಂದು ದೇವಾಲಯನಗರಿಯಾಗಿದೆ. ಇದು ತನ್ನಲ್ಲಿರುವ ಸುಂದರವಾದ ದ್ರಾವಿಡ ಶೈಲಿಯವಾಸ್ತುಶಿಲ್ಪವನ್ನು ಮತ್ತು ಎದ್ದು ಕಾಣುವಂತಹ ಗೋಪುರಗಳನ್ನು ಹೊಂದಿರುವ ದೇವಾಲಯಗಳಿಂದಾಗಿ ಹೆಸರುವಾಸಿಯಾಗಿದೆ. ಮುಂಜಾನೆ ಎದ್ದೊಡನೆ ಕೇಳುವ ದೇಗುಲಗಳ ಘಂಟಾ ನಿನಾದ, ಪರಿಶುದ್ಧವಾದ ಫಿಲ್ಟರ್ ಕಾಫಿಯ ಜೊತೆಗೆ ಚಿದಂಬರಂನಲ್ಲಿರುವ ಪ್ರತಿಯೊಂದು ಅಂಶವು ಸಹ ತಮಿಳುನಾಡಿನ ತಾಜಾತನವನ್ನು ಪ್ರವಾಸಿಗರಿಗೆ ಉಣಬಡಿಸುತ್ತದೆ.

ಈ ದೇಗುಲಗಳ ನಗರಿಯನ್ನು ನೆನೆದೊಡನೆ ಹಲವಾರು ಅಂಶಗಳು ಕಣ್ಮುಂದೆ ಬರುತ್ತವೆ. ಅದರಲ್ಲಿಯೂ ಚಿದಂಬರಂನ ನಟರಾಜ ದೇವಾಲಯವು ಇಲ್ಲಿನ ಪ್ರಸಿದ್ಧ ದೇವಾಲಯವಾಗಿದೆ. ಈ ಶಿವನ ದೇವಾಲಯವು ಶೈವರ ಪಾಲಿಗೆ ಅತ್ಯಂತ ಪ್ರಮುಖ ದೇವಾಲಯವಾಗಿದೆ. ಈ ದೇವಾಲಯವು ತಮಿಳುನಾಡಿನಲ್ಲಿರುವ ಪಂಚಭೂತ ಸ್ಥಳಗಳಲ್ಲಿ ( ವಾಯು,ಪೃಥ್ವಿ,ಜಲ,ಅಗ್ನಿ ಮತ್ತು ಅಪ್ಪು) ಒಂದಾಗಿದೆ.  ಇಲ್ಲಿ ಕಾಳಹಸ್ತಿನಾಥರ್ ದೇವಾಲಯವು ಅಪ್ಪುವನ್ನು, ತಿರುವಣ್ಣಾಮಲೈ ಅರುಣಾಚಲೇಶ್ವರ ಅಗ್ನಿಯನ್ನು, ಕಂಚಿ ಏಕಾಂಬರೇಶ್ವರ ದೇವಾಲಯವು ಪೃಥ್ವಿಯನ್ನು ಮತ್ತು ತಿರುವನೈಕಾವಲ್ ಜಂಬುಕೇಶ್ವರ ದೇವಾಲಯವು ಜಲವನ್ನು ಪ್ರತಿನಿಧಿಸುತ್ತದೆ.

ಈ ದೇವಾಲಯವು ಶಿವನನ್ನು "ನಟರಾಜ"ನ ರೂಪದಲ್ಲಿ ಪೂಜಿಸಲ್ಪಡುವ ಏಕೈಕ ದೇವಾಲಯವಾಗಿ ಪ್ರಸಿದ್ಧಿಯನ್ನು ಪಡೆದಿದೆ. ಕುತೂಹಲಕಾರಿ ವಿಚಾರವೆಂದರೆ ಶಿವನನ್ನು ಇತರೆಡೆಗಳಲ್ಲಿ "ಶಿವಲಿಂಗ"ದ ರೂಪದಲ್ಲಿ ಪೂಜಿಸಿದರೆ ಇಲ್ಲಿ ನಟರಾಜನ ರೂಪದಲ್ಲಿ ಪೂಜಿಸಲಾಗುತ್ತದೆ. ಇದು ಶಿವನನ್ನು ಮತ್ತು ಮಹಾವಿಷ್ಣು ಇಬ್ಬರನ್ನು ಪೂಜಿಸುವ ಕೆಲವೇ ಕೆಲವು ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ. ಇಲ್ಲಿ ಮಹಾವಿಷ್ಣುವನ್ನು ಗೋವಿಂದರಾಜ ಪೆರುಮಾಳ್ ಎಂಬ ರೂಪದಲ್ಲಿ ಪೂಜಿಸಲಾಗುತ್ತದೆ. ಅದೇ ಸಂಕೀರ್ಣದಲ್ಲಿ ಚಿದಂಬರಂ ನಟರಾಜ ದೇವಾಲಯವು ಸಹ ನೆಲೆಗೊಂಡಿದೆ. ಇಲ್ಲಿ ಶೈವರು ಮತ್ತು ವೈಷ್ಣವರು ಇಬ್ಬರು ಪೂಜೆ ಸಲ್ಲಿಸುವುದು ವಿಶೇಷ. ವಿಶ್ವದ ಯಾವುದೇ ಭಾಗದಲ್ಲಿ ಈ ಇಬ್ಬರು ದೇವರುಗಳನ್ನು ಒಂದೇ ಸ್ಥಳದಲ್ಲಿ ಪೂಜಿಸುವ ಪರಿಪಾಠವಿಲ್ಲ.

ದೇವಾಲಯಗಳ ಮತ್ತು ಶಿಕ್ಷಣ ಸಂಸ್ಥೆಗಳ ಪಟ್ಟಣ

ಚಿದಂಬರಂ ಕೇವಲ ಚಿದಂಬರಂ ನಟರಾಜ ದೇವಾಲಯಕ್ಕೆ ಮಾತ್ರ ಹೆಸರುವಾಸಿಯಾಗಿಲ್ಲ. ಅದರ ಜೊತೆಗೆ ಇಲ್ಲಿ ಹಲವಾರು ದೇವಾಲಯಗಳು ಇಲ್ಲಿ ನೆಲೆಗೊಂಡಿವೆ. ಇವುಗಳು ತಮ್ಮ ಗಾತ್ರ , ಕಾಲಗಳಿಂದಾಗಿ ವಿಭಿನ್ನತೆಯನ್ನು ತಮ್ಮಲ್ಲಿ ಒಳಗೊಂಡಿವೆ. ಇಲ್ಲಿನ ಚಿದಂಬರಂ ನಟರಾಜ ದೇವಾಲಯದ ಜೊತೆಗೆ ಹಲವಾರು ದೇವಾಲಯಗಳು ಹಲವಾರು ಪುನರ್ ನಿರ್ಮಾಣಗಳನ್ನು ಮತ್ತು ನವೀಕರಣಗಳನ್ನು ಕಂಡಿವೆ. ಇದು ಅಣ್ಣಾಮಲೈ ವಿಶ್ವವಿದ್ಯಾನಿಲಯದ ತವರೂರು ಸಹ ಹೌದು. ಇದು ದೇಶದ ಅತ್ಯಂತ ಪ್ರತಿಷ್ಟಿತ ವಿಶ್ವವಿದ್ಯಾನಿಲಯಗಳಲ್ಲಿ ಒಂದಾಗಿದೆ. ಈ ವಿವಿಗೆ ಹಲವಾರು ಕಾಲೇಜುಗಳು ಸಂಯೋಜನೆಗೊಂಡಿವೆ. ಈ ಪಟ್ಟಣವು ಆಭರಣ ತಯಾರಿಕೆಯ ಉದ್ಯಮವನ್ನು ಸಹ ಹೊಂದಿದೆ. ಇಲ್ಲಿನ ಹಲವಾರು ತಲೆಮಾರುಗಳು ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ತಯಾರಿಸುವ ಕಲೆಯನ್ನು ಮುಂದಿನ ತಲೆಮಾರಿಗೆ ಬಳುವಳಿಯಾಗಿ ನೀಡುತ್ತ ಬಂದಿವೆ.

ಈ ಪಟ್ಟಣವು ಕೈಗಾರಿಕಾ ನಗರವಾದ ನೈವೇಲಿಗೆ ಸಮೀಪದಲ್ಲಿ ನೆಲೆಗೊಂಡಿದೆ. ಇಲ್ಲಿನ ಲಿಗ್ನೈಟ್ ಗಣಿಗಳು ಮತ್ತು ಶಾಖೋತ್ಪನ್ನ ಸ್ಥಾವರಗಳು ಹಲವರಿಗೆ ಉದ್ಯೋಗಾವಕಾಶವನ್ನು ಒದಗಿಸಿವೆ. ಇವು ಚಿದಂಬರಂನಿಂದ ಕೇವಲ 30 ಕಿ.ಮೀ ದೂರದಲ್ಲಿ ನೆಲೆಗೊಂಡಿವೆ.

ಚಿದಂಬರಂಗೆ ವರ್ಷದ ಯಾವುದೇ ಭಾಗದಲ್ಲಿ ಹವಾಮಾನದ ಕುರಿತಾಗಿ ಚಿಂತಿಸದೆ ಭೇಟಿ ನೀಡಬಹುದಾದ ನಗರವಾಗಿದೆ. ಅದೂ ಬೇಸಿಗೆ ಕಾಲವಾಗಲಿ ಅಥವಾ ಚಳಿಗಾಲವಾಗಲಿ ಚಿದಂಬರಂ ತನ್ನ ನೈಜ ಸೌಂದರ್ಯವನ್ನು ಸದಾ ಪ್ರವಾಸಿಗರಿಗೆ ತೆರೆದಿಡುತ್ತದೆ. ಆದರೂ ಸಹ ಈ ಪಟ್ಟಣಕ್ಕೆ ಉಷ್ಣಾಂಶವು ಕಡಿಮೆ ಇರುವ ಸಮಯದಲ್ಲಿ ಭೇಟಿ ನೀಡುವುದು ಉತ್ತಮ.

ಚಿದಂಬರಂಗೆ ತಮಿಳು ನಾಡಿನ ಎಲ್ಲಾಭಾಗಗಳಿಂದ ರಸ್ತೆ ಸಂಪರ್ಕವಿದೆ. ಇದು ಚೆನ್ನೈಗೆ ಸಮೀಪವಿರುವುದರಿಂದ ಚೆನ್ನೈ ಅಂತಾರಾಷ್ಟ್ರೀಯ ವಿಮಾನನಿಲ್ದಾಣವು ಇಲ್ಲಿಗೆ ಬರುವ ಪ್ರವಾಸಿಗರಿಗೆ ಅನುಕೂಲಕರವಾಗಿರುತ್ತದೆ. ಚಿದಂಬರಂ ಶಾಪ್ಪಿಂಗ್ ಮಾಡುವವರಿಗೆ ವಿಪುಲವಾದ ಅವಕಾಶಗಳನ್ನು ತೆರೆದಿಡುತ್ತದೆ. ಅದರಲ್ಲೂ ಈ ನಗರವು ದೇಶೀಯ ಕರಕುಶಲ ವಸ್ತುಗಳಿಗೆ ಪ್ರಸಿದ್ಧಿಯನ್ನು ಪಡೆದಿದೆ. ಇಲ್ಲಿ ನೀವು ಖರೀದಿಸುವ ವಸ್ತುವು ಇತಿಹಾಸದ ಮತ್ತು ಪರಂಪರೆಯ ಒಂದು ತುಣುಕಾಗಿರುತ್ತದೆ. ಇಂತಹ ವಿಶೇಷತೆಯು ನಿಮಗೆ ವಿಶ್ವದ ಯಾವುದೇ ಭಾಗದಲ್ಲಿ ದೊರೆಯುವುದಿಲ್ಲ. ಈ ಕೊಳ್ಳುವ ಪ್ರಕ್ರಿಯೆಯಲ್ಲಿ ನೀವು ಸಹ ಸಂಸ್ಕೃತಿಯ ಒಂದು ಭಾಗವಾಗಿ ಹೋಗುತ್ತೀರಿ. ನೀವು ಚಿದಂಬರಂನಲ್ಲಿ ಅಲಂಕಾರಿಕ ವಸ್ತುಗಳಿಗಾಗಿ ಹುಡುಕಾಡಬೇಡಿ. ಬದಲಿಗೆ ಯಾವುದೇ ಹೋಲಿಕೆಗೆ ನಿಲುಕದ ಕಲಾವಸ್ತುಗಳನ್ನು ಕೊಂಡು ಕೊಳ್ಳಿ.

ಚಿದಂಬರಂ ಪ್ರಸಿದ್ಧವಾಗಿದೆ

ಚಿದಂಬರಂ ಹವಾಮಾನ

ಚಿದಂಬರಂ
28oC / 83oF
 • Patchy rain possible
 • Wind: ENE 16 km/h

ಉತ್ತಮ ಸಮಯ ಚಿದಂಬರಂ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಚಿದಂಬರಂ

 • ರಸ್ತೆಯ ಮೂಲಕ
  ಚಿದಂಬರಂಗೆ ಉತ್ತಮ ರಸ್ತೆ ಸಂಪರ್ಕ ವ್ಯವಸ್ಥೆ ಇದೆ. ಪೂರ್ವ ಕರಾವಳಿಯ ಗುಂಟ ಸಾಗುವ ಪಾಂಡಿಚೆರ್ರಿ - ಚೆನ್ನೈ ರಸ್ತೆಯ ಮೂಲಕ ಇಲ್ಲಿಗೆ ಹೋಗುವುದು ಅತ್ಯಂತ ಸೂಕ್ತವಾದ ಆಯ್ಕೆಯಾಗಿರುತ್ತದೆ. ಈ ಮಾರ್ಗವು ಪಾಂಡಿಚೆರ್ರಿ ಮತ್ತು ಚಿದಂಬರಂ ಎರಡನ್ನು ಸಂಪರ್ಕಿಸುತ್ತದೆ. ತಮಿಳುನಾಡು ರಾಜ್ಯ ರಸ್ತೆ ಸಾರಿಗೆ ಬಸ್ಸುಗಳು ಮತ್ತು ಖಾಸಗಿ ಬಸ್ಸುಗಳು ತಮಿಳು ನಾಡಿನ ಎಲ್ಲಾ ಪ್ರಮುಖ ನಗರಗಳಿಂದ ಚಿದಂಬರಂಗೆ ಬಂದು ಹೋಗುತ್ತಿರುತ್ತವೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಚಿದಂಬರಂಗೆ ರೈಲಿನ ಮೂಲಕ ಹೋಗುವುದು ಅತ್ಯಂತ ಅನುಕೂಲಕರವಾದ ಮತ್ತು ಮಿತವ್ಯಯಕರವಾದ ಸಾರಿಗೆ ವಿಧಾನವಾಗಿದೆ. ಚಿದಂಬರಂ ನಗರವು ತಿರುಚ್ಚಿ - ಚೆನ್ನೈ ರೈಲು ಮಾರ್ಗದ ನಡುವೆ ನೆಲೆಗೊಂಡಿದೆ. ಹಾಗಾಗಿ ಈ ಎರಡು ನಗರಗಳಿಂದ ಚಿದಂಬರಂಗೆ ಸುಲಭವಾಗಿ ತಲುಪಬಹುದು. ಇದರ ಜೊತೆಗೆ ದೇಶದ ಪ್ರಮುಖ ನಗರಗಳಿಂದ ಚಿದಂಬರಂಗೆ ಉತ್ತಮ ರೈಲು ಸಂಪರ್ಕ ವ್ಯವಸ್ಥೆ ಇದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಚಿದಂಬರಂಗೆ ಸಮೀಪದ ವಿಮಾನ ನಿಲ್ದಾಣವು ಚೆನ್ನೈನಲ್ಲಿ ನೆಲೆಗೊಂಡಿದೆ. ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಇಲ್ಲಿಂದ 250 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಹೊರದೇಶಗಳಿಂದ ಚಿದಂಬರಂಗೆ ಬರಲು ಪ್ರವಾಸಿಗರಿಗೆ ಈ ವಿಮಾನ ನಿಲ್ದಾಣವು ಉತ್ತಮವಾದ ಆಯ್ಕೆಯಾಗಿರುತ್ತದೆ. ವಿದೇಶಿ ಪ್ರವಾಸಿಗರು ಅಥವಾ ಈ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರವಾಸಿಗರು ಚಿದಂಬರಂಗೆ ಟ್ಯಾಕ್ಸಿಯ ಮೂಲಕ ತಲುಪಬಹುದು.
  ಮಾರ್ಗಗಳ ಹುಡುಕಾಟ

ಚಿದಂಬರಂ ಲೇಖನಗಳು

One Way
Return
From (Departure City)
To (Destination City)
Depart On
20 Feb,Wed
Return On
21 Feb,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
20 Feb,Wed
Check Out
21 Feb,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
20 Feb,Wed
Return On
21 Feb,Thu
 • Today
  Chidambaram
  28 OC
  83 OF
  UV Index: 12
  Patchy rain possible
 • Tomorrow
  Chidambaram
  25 OC
  77 OF
  UV Index: 13
  Patchy rain possible
 • Day After
  Chidambaram
  20 OC
  67 OF
  UV Index: 13
  Partly cloudy