Search
  • Follow NativePlanet
Share
ಮುಖಪುಟ » ಸ್ಥಳಗಳು » ಚಾಂದೇಲ್ » ಹವಾಮಾನ

ಚಾಂದೇಲ್ ಹವಾಮಾನ

ಮಳೆಗಾಲ ಕೊನೆಗೊಂಡು ಚಳಿಗಾಲ ಆರಂಭವಾಗುವ ಸಮಯದಲ್ಲಿ ಚಾಂದೇಲ್ ಗೆ ಭೇಟಿ ನೀಡಬೇಕು. ಇದರಿಂದ ಮಳೆಯಿಂದ ಹಾಗೂ ಅತಿಯಾದ ಚಳಿಯಿಂದ ರಕ್ಷಣೆ ಪಡೆಯಬಹುದು. ಬೇಸಿಗೆ ಕಾಲದಲ್ಲಿ ಚಾಂದೇಲ್ ಗೆ ಭೇಟಿ ನೀಡುವುದು ಒಳ್ಳೆಯದಲ್ಲ.

ಬೇಸಿಗೆಗಾಲ

ಚಾಂದೇಲ್ ನಲ್ಲಿ ಮಾರ್ಚ್ ನಿಂದ ಮೇ ಅಥವಾ ಜೂನ್ ತನಕ ಬೇಸಿಗೆಗಾಲವಿರುತ್ತದೆ. ಬೇಸಿಗೆಯಲ್ಲಿ 35 ಡಿಗ್ರಿ ಸೆಲ್ಸಿಯಸ್ ಇಲ್ಲಿನ ಗರಿಷ್ಠ ಉಷ್ಣಾಂಶವಾಗಿರುತ್ತದೆ. ಉಷ್ಣಾಂಶ ಹೆಚ್ಚಾಗುತ್ತಲೇ ಇರುವ ಕಾರಣ ಬೇಸಿಗೆಯಲ್ಲಿ ಪ್ರಯಾಣಿಸಿದರೆ ಹತ್ತಿ ಬಟ್ಟೆಗಳು ಬೇಕೇಬೇಕು. ಈ ಸಮಯದಲ್ಲಿ ಗುಡುಗು ಮಿಂಚು ಇರುತ್ತದೆ.

ಮಳೆಗಾಲ

ಜೂನ್ ನಿಂದ ಸಪ್ಟೆಂಬರ್ ತನಕ ಇಲ್ಲಿ ಭಾರೀ ಮಳೆಯಾಗುತ್ತದೆ. ಮಣಿಪುರದ ಇತರ ಭಾಗಗಳಂತೆ ದೀರ್ಘಕಾಲಿಕ ಮಳೆ ಇಲ್ಲಿ ಸಾಮಾನ್ಯ. ಅತಿಯಾದ ಮಳೆಯಿಂದ ತೇವಾಂಶ ಹೆಚ್ಚಳವಾಗುವ ಕಾರಣ ಈ ಸಮಯದಲ್ಲಿ ಚಾಂದೇಲ್ ಗೆ ಭೇಟಿ ನೀಡುವುದು ಸೂಕ್ತವಲ್ಲ.

ಚಳಿಗಾಲ

ಚಾಂದೇಲ್ ನಲ್ಲಿ ಚಳಿಗಾಲದಲ್ಲಿ ತಾಪಮಾನ ತುಂಬಾ ಕಡಿಮೆಯಿರುತ್ತದೆ. ಇದು ಶೂನ್ಯ ಡಿಗ್ರಿ ಸೆಲ್ಸಿಯಸ್ ಗೂ ಇಳಿಯುತ್ತದೆ. ಡಿಸೆಂಬರ್, ಜನವರಿ ಮತ್ತು ಫೆಬ್ರವರಿಯಲ್ಲಿ ಅತಿಯಾದ ಚಳಿಯಿರುತ್ತದೆ. ಚಳಿಗಾಲ ದೀರ್ಘವಾಗಿರುವ ಕಾರಣ ಸರಿಯಾದ ವ್ಯವಸ್ಥೆಯೊಂದಿಗೆ ಪ್ರಯಾಣಿಸಬೇಕಾದಿತು. ಚಳಿಗಾಲದಲ್ಲಿ ಪ್ರಯಾಣಿಸುವಾಗ ಉಣ್ಣೆಯ ಬಟ್ಟೆ ಅತ್ಯಗತ್ಯ.