Search
  • Follow NativePlanet
Share
ಮುಖಪುಟ » ಸ್ಥಳಗಳು » ಬೋಧಗಯಾ » ಹವಾಮಾನ

ಬೋಧಗಯಾ ಹವಾಮಾನ

ಅಕ್ಟೋಬರ್ ನಿಂದ ಮಾರ್ಚ್ ತನಕದ ಅವಧಿ ಇಲ್ಲಿನ ಭೇಟಿಗೆ ಅತ್ಯುತ್ತಮವಾದ ಅವಧಿಯಾಗಿದೆ. ಸಣ್ಣ ಅವಧಿಯ ದೇವಾಲಯಗಳ ಭೇಟಿಗೆ ನಿಮ್ಮ ಪ್ರವಾಸ ಸೀಮಿತವಾಗಿದ್ದಲ್ಲಿ ಜೂನ್ ನಿಂದ ಸೆಪ್ಟೆಂಬರ್ ತನಕದ ಅವಧಿಯೂ ಉತ್ತಮವಾಗಿದೆ.

ಬೇಸಿಗೆಗಾಲ

ಮಾರ್ಚ್ ನಿಂದ ಮೇ ತನಕದ ಅವಧಿ ಇಲ್ಲಿ ಬೇಸಿಗೆಯಾಗಿದೆ. ಈ ಅವಧಿಯಲ್ಲಿ ಅತೀ ಹೆಚ್ಚಿನ ಉಷ್ಣತೆ ದಾಖಲಾಗುತ್ತದೆ 45 ರಿಂದ 47 ಡಿಗ್ರಿ ಸೆಲ್ಸಿಯಸ್ ಉಷ್ಣತೆ ತಲುಪುತ್ತದೆ. ಸಾಮಾನ್ಯವಾಗಿ ಪ್ರವಾಸಿಗಳು ಈ ಅವಧಿಯಲ್ಲಿ ಭೇಟಿ ನೀಡಲು ಇಷ್ಟಪಡುವುದಿಲ್ಲ. ಈ ಅವಧಿಯ ಬಿಸಿಯನ್ನು ತಾಳುವುದು ಕಷ್ಟಸಾಧ್ಯವಾಗಿದೆ.

ಮಳೆಗಾಲ

ಬೋಧಗಯಾ ಮಳೆಯನ್ನೂ ಹೆಚ್ಚಿನ ಪ್ರಮಾಣದಲ್ಲಿ ಸ್ವೀಕರಿಸುತ್ತದೆ. ಜೂನ್ ನಿಂದ ಆರಂಭವಾಗುವ ಮಳೆಗಾಲ ಆಗಸ್ಟ್ ತಿಂಗಳ ತನಕವೂ ಮುಂದುವರಿಯುತ್ತದೆ ಹಾಗೂ ಆದ್ರ ವಾತಾವರಣ ಇರುತ್ತದೆ. ಆದರೆ ಈ ಅವಧಿಯಲ್ಲಿ ಶಾಂತ ವಾತಾವರಣ ಇಲ್ಲಿನ ಮುಖ್ಯ ಅಂಶವಾಗಿದೆ.

ಚಳಿಗಾಲ

ಡಿಸೆಂಬರ್ ನಿಂದ ಫೆಬ್ರವರಿ ತಿಂಗಳ ತನಕ ಮುಂದುವರಿಯುವ ಚಳಿಗಾಲ ಇಲ್ಲಿನ ಅತ್ಯುತ್ತಮವಾದ ಅವಧಿಯಾಗಿದೆ. ಈ ಸಮಯದಲ್ಲಿ ತಾಪಮಾನ 28 ರಿಂದ 4 ಡಿಗ್ರಿ ಸೆಲ್ಸಿಯಸ್ ತನಕವೂ ದಾಖಲಾಗುತ್ತದೆ.