Search
  • Follow NativePlanet
Share
ಮುಖಪುಟ » ಸ್ಥಳಗಳು » ಬಿಕಾನೇರ್ » ಹವಾಮಾನ

ಬಿಕಾನೇರ್ ಹವಾಮಾನ

ಬಿಕಾನೇರ್ ಗೆ ಹೋಗಲು ಮತ್ತು ಅಲ್ಲಿ ಸುತ್ತಾಡಲು ಅಕ್ಟೋಬರ್‍‍ನಿಂದ ಮಾರ್ಚ್ ತಿಂಗಳವರೆಗಿನ ಸಮಯವು ಅತ್ಯುತ್ತಮವಾದ ಕಾಲವಾಗಿರುತ್ತದೆ. ಬಿಕಾನೇರ್ ಗೆ ಕಿರು ಪ್ರವಾಸ ಹೊರಡಲು ಯೋಜಿಸುವವರಿಗೆ ಜುಲೈನಿಂದ ಸೆಪ್ಟೆಂಬರ್‍‍ವರೆಗಿನ ಅವಧಿಯು ಹೇಳಿ ಮಾಡಿಸಿದ ಸಮಯವಾಗಿದೆ.

ಬೇಸಿಗೆಗಾಲ

(ಮಾರ್ಚ್ ನಿಂದ ಜೂನ್) : ಬೇಸಿಗೆಯು ಇಲ್ಲಿ  ಮಾರ್ಚ್‍ನಲ್ಲಿ ಆರಂಭವಾಗಿ ಜೂನ್ ಅಂತ್ಯಭಾಗದವರೆಗೆ ಇರುತ್ತದೆ. ಆಗ ಇಲ್ಲಿ ಗರಿಷ್ಠ 41.8° ಮತ್ತು ಕನಿಷ್ಠ 28.0° ಸೆಲ್ಶಿಯಸ್ ಉಷ್ಣಾಂಶವು ದಾಖಲಾಗಿದೆ.

ಮಳೆಗಾಲ

(ಜುಲೈನಿಂದ ನವೆಂಬರ್‍‍ವರೆಗೆ): ಮಳೆಗಾಲವು ಜುಲೈನಲ್ಲಿ ಆರಂಭವಾಗಿ ನವೆಂಬರ್‍‍ನವರೆಗೆ ಇರುತ್ತದೆ. . ಮಳೆಗಾಲದಲ್ಲಿ ಈ ಪ್ರಾಂತ್ಯದಲ್ಲಿ 26-44 ಸೆಂ. ಮೀ  ಪ್ರಮಾಣದ ಮಳೆಯನ್ನು ಕಾಣಬಹುದು. ಮಿತವಾದ ಮಳೆಯಿಂದಾಗಿ ಇಲ್ಲಿನ ಹವಾಮಾನವು ಸ್ವಲ್ಪ ಮಟ್ಟಿಗೆ ಆರ್ದ್ರತೆಯಿಂದ ಕೂಡಿರುತ್ತದೆ.

ಚಳಿಗಾಲ

(ಡಿಸೆಂಬರ್‌ನಿಂದ ಫೆಬ್ರವರಿಯವರೆಗೆ): ಡಿಸೆಂಬರ್, ಜನವರಿ ಮತ್ತು ಫೆಬ್ರವರಿಗಳು ಬಿಕಾನೇರ್ ನಲ್ಲಿ ಚಳಿಗಾಲದ ತಿಂಗಳುಗಳಾಗಿವೆ. ಆಗ ಇಲ್ಲಿ ದಾಖಲಾಗಿರುವ ಗರಿಷ್ಠ ಉಷ್ಣಾಂಶವು 23.2° ಸೆಲ್ಶಿಯಸ್ ಆಗಿರುತ್ತದೆ. ಅಲ್ಲದೆ ಚಳಿಗಾಲದ ದೆಸೆಯಿಂದ ಈ ಸಮಯದಲ್ಲಿ ಇಲ್ಲಿನ ಉಷ್ಣಾಂಶವು 5.0° ಸೆಲ್ಶಿಯಸ್‍ವರೆಗು ಕುಸಿಯುವುದುಂಟು.