ಭುವನೇಶ್ವರದಲ್ಲಿರುವ ಮ್ಯೂಸಿಯಂ ಆಫ್ ಟ್ರೈಬಲ್ ಆಂಡ್ ಆರ್ಟಿಫಾಕ್ಟ್ಸ್ ಅನ್ನು ಬುಡಕಟ್ಟು ಸಂಗ್ರಹಾಲಯವೆಂದೂ ಕರೆಯಲಾಗುತ್ತದೆ. ಈ ಮ್ಯೂಸಿಯಂ ಭುವನೇಶ್ವರದ ರೈಲು ನಿಲ್ದಾಣದಿಂದ ಕೇವಲ 3 ಕಿ.ಮೀ ದೂರದಲ್ಲಿದೆ. ಈ ಮ್ಯೂಸಿಯಂ ಒಡಿಶಾದ ಬುಡಕಟ್ಟು ಜನಾಂಗಗಳ ಸಂಪ್ರದಾಯ ಹಾಗು ಜೀವನಶೈಲಿಯನ್ನು ಸುವಿಸ್ತಾರವಾಗಿ ಅನಾವರಣಗೊಳಿಸುತ್ತದೆ. ಇದನ್ನು ಬುಡಕಟ್ಟು ಸಂಶೋಧನಾ ಸಂಸ್ಥೆ ಎಂದು ಕೂಡ ಪರಿಗಣಿಸಲಾಗಿದೆ.
ಮ್ಯೂಸಿಯಂನ ಸಂಶೋಧನಾ ಸಂಸ್ಥೆಯು ಬುಡಕಟ್ಟು ಜನರ ಜೀವನದ ಕುರಿತು ಹಲವಾರು ಅಂಶಗಳನ್ನು ಸೂಕ್ಷ್ಮವಾಗಿ ಕಲೆಹಾಕಿ ನಂತರ ಸಂಗ್ರಹಾಲಯದಲ್ಲಿ ಅವರ ಕುರಿತು ಜಾಗೃತಿ ಮೂಡಿಸಲು ಪ್ರದರ್ಶಿಸುತ್ತದೆ. ಒಡಿಶಾದಲ್ಲಿ 60 ಕ್ಕೂ ಅಧಿಕ ಬುಡಕಟ್ಟು ಜನಾಂಗಗಳಿವೆ. ಅಲ್ಲದೆ ಈ ಸಂಗ್ರಹಾಲಯದಲ್ಲಿ ಅನೇಕ ಕಟ್ಟಿಗೆಯಿಂದ ಮಾಡಲಾದ ವಸ್ತುಗಳು, ಲೋಹದ ವಸ್ತುಗಳು, ಬಟ್ಟೆಗಳು ಮತ್ತು ಆಭರಣಗಳನ್ನು ಕಾಣಬಹುದು. ಒಂದು ಪುಟ್ಟ ಗ್ರಂಥಾಲಯ ಹಾಗು ಮೃಗಾಲಯವನ್ನು ಕೂಡ ಈ ಮ್ಯೂಸಿಯಂ ಹೊಂದಿದೆ. ಬೆಳಿಗ್ಗೆ 10 ರಿಂದ ಸಂಜೆ 5 ರ ವರೆಗೆ ಕಾರ್ಯ ನಿರ್ವಹಿಸುವ ಈ ಸಂಗ್ರಹಾಲಯದಲ್ಲಿ ಛಾಯಾಗ್ರಹಣವನ್ನು ನಿರ್ಭಂದಿಸಲಾಗಿದೆ.