Search
  • Follow NativePlanet
Share
ಮುಖಪುಟ » ಸ್ಥಳಗಳು » ಭೋಪಾಲ್ » ಹವಾಮಾನ

ಭೋಪಾಲ್ ಹವಾಮಾನ

ಭೋಪಾಲ್ ನಗರಕ್ಕೆ ಪ್ರಯಾಣ ಮಾಡಲು ಉತ್ತಮ ಸಮಯವೆಂದರೆ ಸೆಪ್ಟೆಂಬರ್ ಮತ್ತು ನವೆಂಬರ್ ತಿಂಗಳುಗಳ ನಡುವಿನ ಅವಧಿ. ವರ್ಷದ ಈ ಸಮಯದಲ್ಲಿ ಸಾಕಷ್ಟು ಹಿತಕರವಾದ ವಾತಾವರಣದ ಕಾರಣ ನಗರಕ್ಕೆ ಅಕ್ಟೋಬರ್ ತಿಂಗಳಲ್ಲಿ ಪ್ರವಾಸಿಗರು ದೊಡ್ಡ ಪ್ರಮಾಣದಲ್ಲಿ ಆಗಮಿಸುತ್ತಾರೆ. ಆದಾಗ್ಯೂ,  ಸಂಜೆ ಸಮಯದಲ್ಲಿ ಮತ್ತು ರಾತ್ರಿಯ ಚಳಿಯಲ್ಲಿ, ಚಳಿಗಾಲದ ಬಟ್ಟೆಗಳನ್ನು ಧರಿಸಿ ಪ್ರಯಾಣ ಮಾಡುವುದು ಉತ್ತಮ.

ಬೇಸಿಗೆಗಾಲ

ಭೋಪಾಲ್, ಮಾರ್ಚ್ ತಿಂಗಳಿನಿಂದ ಮೇ ತಿಂಗಳಿನವರೆಗೆ ಬಿಸಿ ಮತ್ತು ಆರ್ದ್ರತೆಯ ಹವಾಮಾನವನ್ನು ಅನುಭವಿಸುತ್ತದೆ. ಇಲ್ಲಿನ ತಾಪಮಾನ 45 ಡಿಗ್ರಿ. ಸೆ ಗಿಂತ ಅಧಿಕವಾಗಿದ್ದು ಸಾಮಾನ್ಯವಾಗಿ ಸಹಿಸಲು ಅಸಾಧ್ಯವಾಗಿದೆ ಮತ್ತು ಮಧ್ಯಾಹ್ನದ ಸಮಯದಲ್ಲಿ ಹೊರಗಡೆ ಹೋಗುವುದೂ ಕಷ್ಟ ಸಾಧ್ಯ. ಈ ಸಮಯದಲ್ಲಿ ನಗರಕ್ಕೆ  ಭೇಟಿ ನೀಡಿದರೆ ಡೀಹೈಡ್ರೇಶನ್ (ನಿರ್ಜಲೀಕರಣ) ಮತ್ತು ಸನ್ ಸ್ಟ್ರೋಕ್ ನಿಂದ ಬಳಲಬೇಕಾಗಬಹುದು!

ಮಳೆಗಾಲ

ಭೋಪಾಲ್ ನಲ್ಲಿ ಮಾನ್ಸೂನ್, ಜೂನ್ ತಿಂಗಳಲ್ಲಿ ಆರಂಭವಾಗುತ್ತದೆ ಮತ್ತು ಸೆಪ್ಟೆಂಬರ್ ತಿಂಗಳಿನ ಕೊನೆಯವರೆಗೆ ಇರುತ್ತದೆ. ವಿರಳ ತುಂತುರು ಅಕ್ಟೋಬರ್ ತಿಂಗಳಿನ ಆರಂಭದಲ್ಲಿ ಕಂಡುಬರುತ್ತದೆ.  ಈ ಸಮಯದಲ್ಲಿ ನಗರದಲ್ಲಿ ಅಧಿಕ ಮಳೆಯಿಂದಾಗಿ ರಸ್ತೆಗಳಲ್ಲಿ ಅಡಚಣೆ ಉಂಟಾಗಿ ಭಾರೀ ಟ್ರಾಫಿಕ್ ಜಾಮ್ ಅನುಭವಿಸಬೇಕಾಗುತ್ತದೆ. ಆದ್ದರಿಂದಲೇ ಮಾನ್ಸೂನ್ ತಿಂಗಳಲ್ಲಿ ಭೋಪಾಲ್ ಪ್ರಯಾಣ ಸೂಕ್ತವಲ್ಲ.

ಚಳಿಗಾಲ

ಚಳಿಗಾಲವು, ಅಕ್ಟೋಬರ್ ಅಂತ್ಯದಲ್ಲಿ ಭೋಪಾಲ್ ನಲ್ಲಿ ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ  ಹವಾಮಾನ ಆಹ್ಲಾದಕರವಾಗಿರುತ್ತದೆ. ನಂತರ ನವೆಂಬರ್ ಮಧ್ಯ ಭಾಗದವರೆಗೆ ಭಾರಿ ಆವಿ ಉಂಟಾಗುವವರೆಗೆ ಮುಂದುವರಿಯುತ್ತದೆ. ಆದರೂ ಚಳಿಗಾಲದಲ್ಲಿ ಕಠಿಣ ಆವಿಯಿಂದಾಗಿ ನಗರದಲ್ಲಿ ಸಂಚಾರ ಕಷ್ಟ. ಶೀತ ಹವಾಮಾನ ಮಾರ್ಚ್ ತಿಂಗಳ ಮಧ್ಯದ ವರೆಗೆ ಇರುತ್ತದೆ.