Search
  • Follow NativePlanet
Share
ಮುಖಪುಟ » ಸ್ಥಳಗಳು» ಭೋಜಪುರ್

ಭೋಜಪುರ್ : ಒಂದು  ಅಪೂರ್ಣನಗರ

16

ಈ ನಗರ ಒಂದು ಅಪೂರ್ಣವಾದ ನಗರ. ಇದನ್ನು 11ನೆ ಶತಮಾನದಲ್ಲಿ ನಿರ್ಮಿಸಿದರೆಂದು  ಹೇಳಲಾಗುತ್ತದೆ. ಇದನ್ನು ಮರಳುಗಲ್ಲಿನಿಂದ  ಕೂಡಿದ  ಪ್ರದೇಶದಲ್ಲಿ ನಿರ್ಮಿಸಿದ್ದಾರೆ.  ಇದು ಮದ್ಯಭಾರತದ ಒಂದು ಪ್ರವಾಸಿ ತಾಣವಾಗಿ ಪ್ರಸಿದ್ದವಾಗಿದೆ. ಭೇತ್ವಾ ನದಿಯ ತಟದಲ್ಲಿ ನೆಲೆಸಿರುವ ಪ್ರಶಾಂತವಾದ ಒಂದು ಹಳೇ ನಗರ. ಇದು ಮಧ್ಯಪ್ರದೇಶದ  ರಾಜಧಾನಿ ಭೋಪಾಲ್ ನಿಂದ 28 ಕಿ.ಮೀ ದೂರ ಇದೆ.

ಇಲ್ಲಿ ಅತ್ಯಧ್ಭುತವಾದ ಎರಡು ಅಣೆಕಟ್ಟಿನಿಂದ ಉಂಟಾದ ಸುಂದರ ಸರೋವರವಿದೆ.  ಪುರಾತನ ಕಾಲದಲ್ಲಿ ತಮ್ಮ ಬುದ್ಧಿವಂತಿಕೆಯಿಂದ ದೊಡ್ಡ ದೊಡ್ಡ ಬಂಡೆಗಳಿಂದ  ಇದನ್ನು ನಿರ್ಮಿಸಿರುತ್ತಾರೆ. ಪರಾಮರ ಪರಂಪರೆಯ ದೊರೆಯಾದ ಭೋಜರಾಜನಿಂದಾಗಿ ಇದನ್ನು ಭೋಜಪುರ್ ಎಂದು ಕರೆಯಲಾಗಿದೆ. ಈ ಸರೋವರವನ್ನು ಭೋಜರಾಜನ ನೇತೃತ್ವದಲ್ಲಿ ಕಟ್ಟಲ್ಪಟ್ಟಿರುತ್ತದೆ. 'ಸೈಕ್ಲೋಪಿನ್ ಮೆಸನ್ರಿ' ಎಂಬ ಕಲೆಗೆ ಇದು ಮಾದರಿಯಾಗಿದೆ. ನೀವು ಸಾಮಾನ್ಯ ಪ್ರವಾಸಿಗರಾಗಲಿ ಅಥವಾ ಪುರಾಣ ಇತಿಹಾಸದಲ್ಲಿ ಆಸಕ್ತಿವುಳ್ಳವರಾಗಲಿ, ಇಷ್ಟೇ ಏಕೆ ಯಾರೇ ಇರಲಿ ನೋಡಲೇಬೇಕಾದ ಸ್ಥಳ ಭೋಜಪುರ್.

ಭೋಜಪುರ್ ಮತ್ತು ಸುತ್ತ ಮುತ್ತಲಿನ ಜಾಗಗಳು

ಇಲ್ಲಿನ ಭೋಜೇಶ್ವರ ದೇವಾಲಯವನ್ನು ನೋಡಬೇಕಾದ ಸ್ಥಳವೆಂದು ಕರೆಯಬಹುದು. ಇದನ್ನು ಪೂರ್ವದ ಸೋಮನಾಥವೆಂದು ಕರೆಯುತ್ತಾರೆ. ಇದೊಂದು ಭವ್ಯವಾದ ದೇವಸ್ಥಾನ. ಈ ಪುರಾತನ ನಗರದ ವರ್ತುಲಾಕಾರದ ಅಣೆಕಟ್ಟಿನಿಂದ ಕೂಡಿದ ಸರೋವರದಿಂದ ಆಕರ್ಷಕವಾಗಿದೆ. ಈ ನಗರವು ಪೂರ್ತಿಗೊಳ್ಳದೆ ಅಪೂರ್ಣತೆಯಿಂದ ಅಪೂರ್ವ ಸೊಬಗು ಹೊಂದಿದೆ. ಇಲ್ಲಿರುವ ಕಲ್ಲು ಗಣಿಗಳಲ್ಲಿರುವ ಅಪೂರ್ಣ ಕೆತ್ತನೆಗಳು ಕುತೂಹಲಕರವಾಗಿದೆ. ಈ ಕೆತ್ತನೆಗಳು ಅರಮನೆ ಅಥವಾ ದೇವಸ್ಥಾನದಲ್ಲಿರಬೇಕಾದವು.

ಬೇರೆ ನಗರಗಳಲ್ಲಿ ನೀವು ಹಳೆಯ ರಾಜ್ಯದ ಅವಶೇಷಗಳನ್ನೂ ನೋಡಿರಬಹುದು. ಆದರೆ ಇಲ್ಲಿ ಒಂದು ಅರೆಬರೆ ಪೂರ್ಣವಾದ ನಗರವನ್ನು ನೋಡಬಹುದು. ಮತ್ತೊಂದು ಅಧ್ಬುತ ಏನೆಂದರೆ ಅಪೂರ್ಣವಾದ ಜೀನ ದೇವಾಲಯ.

ಭೋಜಪುರ್ ದಿಂದ 20 ಕಿ.ಮೀ. ದೂರದ ಭಿಮ್ಬೆಟ್ಕ ಎಂಬ ಊರಲ್ಲಿ ಅತ್ಯಧ್ಭುತವಾದ ಸುಂದರ ಬಂಡೆಗಳ ಅಡಿ ಬಣ್ಣದ ಕಲಾಕೃತಿಗಳನ್ನು ಕಾಣಬಹುದು. ಭಿಮ್ಬೆಟ್ಕ ಪ್ರಪಂಚದಲ್ಲಿ ತನ್ನದೇ ಆದ ಒಂದು ಸ್ಥಾನವನ್ನು ಹೊಂದಿದೆ. ಇದನ್ನು ಯುನೆಸ್ಕೋ ಸಂಸ್ಥೆಯು 'ಪ್ರಪಂಚದ ಪುರಾತತ್ವ ಕೇಂದ್ರ' ಎಂದು ಪರಿಗಣಿಸಿದೆ. ಮತ್ತೊಂದು ಪ್ರವಾಸಿ ತಾಣವೆಂದರೆ ಭಿಮ್ಬೆಟ್ಕ ದಿಂದ 40 ಕಿ.ಮೀ. ದೂರದಲ್ಲಿರುವ ಹೋಷಂಗಾಬಾದ್. ಇದು ನರ್ಮದಾ ನದಿ ತೀರದಲ್ಲಿದೆ. ಇಲ್ಲಿ ನೀವು 'ಸೇತಾನಿ ಘಾಟ್' ಮತ್ತು ಹೋಷಂಗಾಬಾದ್ ಕೋಟೆಗಳನ್ನು ನೋಡಬಹುದು.

ನೀವು ಭೋಜಪುರದಲ್ಲಿರುವಾಗ ಅಲ್ಲಿನ ಪೇಟೆ ಬೀದಿಗಳಲ್ಲಿ ತಿರುಗುವುದನ್ನು ಮರೆಯಬೇಡಿ. ಇದು ಮಧ್ಯಪ್ರದೇಶದ ತಿಂಡಿ ತಿನಿಸುಗಳಿಗೆ ಬಹು ಪ್ರಖ್ಯಾತ. ಇವುಗಳಲ್ಲಿ ಕಬಾಬ್, ಭುಟ್ಟೆ ಕಿ ಕೀಸ್, ಮಾವಾಭಾತಿ, ಕೋಪ್ರಪಾಕ್ ಹಾಗು ಮಾಲ್ಪುವಾ ಮುಖ್ಯವಾದವು. ಭೋಜಪುರ್ ನ ಕರಕುಶಲ ಕಲೆಗಳಿಂದ ಕೂಡಿದ ವಸ್ತುಗಳಿಗೆ ಹೆಸರಾಗಿದೆ. 'ಮಧ್ಯಪ್ರದೇಶ ಹಸ್ತ ಶಿಲ್ಪ ಏವಂ ಹಾತ್‍ಕರ್ಘಾ ನಿಗಮ' ಎಂಬ ಸಂಸ್ಥೆಯು ಇಲ್ಲಿನ ಕಲೆಗಾರರಿಗೆ ಉದ್ಯೋಗ ನೀಡುವುದರ ಜೊತೆಗೆ ಅವರ ಏಳಿಗೆಗಾಗಿ ಶ್ರಮಿಸುತ್ತಿದೆ.

ಭೋಜಪುರ್ ತಲುಪುವ ಬಗೆ

ಇಲ್ಲಿಗೆ ಹತ್ತಿರವಾದ ವಿಮಾನ ನಿಲ್ದಾಣ ಹಾಗು ರೈಲಿನ ನಿಲ್ದಾಣ ಎರಡೂ ಭೋಪಾಲ್ ನಗರದಲ್ಲಿದೆ. ಅಲ್ಲಿಂದ ಇಲ್ಲಿಗೆ ಬಹಳಷ್ಟು ಬಸ್ಸುಗಳು ಉಂಟು. ಅನುಕೂಲವಿರುವವರು ಟ್ಯಾಕ್ಸಿ ಮೂಲಕವೂ ತಲುಪಬಹುದು.

ಭೋಜಪುರ್ ಪ್ರಸಿದ್ಧವಾಗಿದೆ

ಭೋಜಪುರ್ ಹವಾಮಾನ

ಉತ್ತಮ ಸಮಯ ಭೋಜಪುರ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಭೋಜಪುರ್

  • ರಸ್ತೆಯ ಮೂಲಕ
    ಭೋಜಪುರ್ ಅನ್ನು ರಸ್ತೆಯ ಮೂಲಕವೂ ತಲುಪಬಹುದು. ಮಧ್ಯಪ್ರದೇಶ ಸಾರಿಗೆ ಸಂಸ್ಥೆ ಬಸ್ಸುಗಳಲ್ಲಿ ಪ್ರಯಾಣಿಸಬಹುದು. ಪ್ರವಾಸಿಗರಿಗೆ ಮೆಟ್ರೋ ಮತ್ತು ರೇಡಿಯೋ ಟ್ಯಾಕ್ಸಿ ಸರ್ವಿಸುಗಳು ಹೇರಳವಾಗಿ ದೊರೆಯುತ್ತದೆ. ಅಂತರ ರಾಜ್ಯ ಸಾರಿಗೆ ನಿಲ್ದಾಣ ಹಬೀಬ್ಗಂಜ್ ರೈಲು ನಿಲ್ದಾಣದ ಹತ್ತಿರವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಹತ್ತಿರದ ರೈಲು ನಿಲ್ದಾಣ ಭೋಪಾಲ್ ನಗರ. ಇಲ್ಲಿಂದ ಭಾರತದ ಎಲ್ಲಾ ಮುಖ್ಯ ನಗರಗಳನ್ನು ತಲುಪಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಹತ್ತಿರದ ವಿಮಾನ ನಿಲ್ದಾಣ 28 ಕಿ.ಮೀ ದೂರದಲ್ಲಿರುವ ರಾಜಧಾನಿ ಭೋಪಾಲ್ ನಗರದಲ್ಲಿದೆ. ರಾಜ ಭೋಜ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭಾರತದ ಮುಖ್ಯನಗರಗಳಾದ ಮುಂಬೈ, ದೆಹಲಿ, ಜಬಲಪೂರ್, ಇಂದೋರ್ ಹಾಗು ಗ್ವಾಲಿಯರ್ ಗೆ ನೇರ ಸಂಪರ್ಕವಿದೆ. ಭೈರಾಗರ್ ಎಂಬ ಭೋಪಾಲ್ ನ ಉಪನಗರದಲ್ಲಿದೆ. ಇಲ್ಲಿಂದ ಭೋಜಪುರ್ ಅನ್ನು ಪಂಚತಿ ಅಥವಾ ಗಾಂಧಿನಗರ ರಸ್ತೆಯಿಂದ ತಲುಪಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat