ಚತುರ್ಭುಜ್ ನಾರಾಯಣ್ ಮಂದಿರ್, ಭವಾನಿ ಮಂದಿರ್, ಪಾರ್ಶ್ವನಾಥ್ ಮಂದಿರ್, ಮಹಾಮಾಯ ಮಂದಿರ್, ಮಹತ್ಹಿನ್ ಮಾಯಿ ಮಂದಿರ್, ಜೈನ್ ಸಿದ್ಧಾoತ್ ಭವನ್, ಶ್ರೀ ಹನುಮಾನ್ ಮಂದಿರ್, ಕುರ್ವ ಶಿವ್, ಬಾಬಾ ಯಗ್ಯೇಶ್ವರ್ ಧಾಮ್ ಮತ್ತು ಜಗದೀಶ್ವರ್ ಶಿವ್ ಮಂದಿರ್.
ಪಾರ್ಶ್ವನಾಥ ದೇವಾಲಯವು ಒಂದು ಶತಮಾನದಷ್ಟು ಹಳೆಯದಾದ ಜೈನ ದೇವಸ್ಥಾನವಾಗಿದ್ದು, ಇದು ಮಸಾಧ್ ಜಿಲ್ಲೆಯಲ್ಲಿದೆ. ಮಹಾಮಾಯ ಮಂದಿರವು ಏಕ್ವರಿ ಗ್ರಾಮದಲ್ಲಿದ್ದು, ಇದು ಮೊಗಲರ ಕಾಲದಲ್ಲಿ ನಿರ್ಮಾಣವಾಯಿತು. ಮಹತ್ಹಿನ್ ಮಾಯಿ ದೇವಾಲಯವು ಬಿಹಿಯದಲ್ಲಿದ್ದು, ಇದು ಅನೇಕ ಮಹಿಳಾ ಭಕ್ತರನ್ನು ಸೆಳೆಯುತ್ತದೆ. ಜೈನ್ ಸಿದ್ಧಾಂತ್ ಭವನ್ ನಲ್ಲಿ ಗ್ರಂಥಾಲಯವೊಂದಿದ್ದು, ಇಲ್ಲಿ ಜೈನ ಧರ್ಮಕ್ಕೆ ಸಂಬಂಧಿಸಿದ ಸಾಮಗ್ರಿಗಳ, ವಸ್ತುವಿಷಯಗಳ ಅನುಪಮ ಸಂಗ್ರಹವಿದೆ. ಈ ಗ್ರಂಥಾಲಯವು ಏಷ್ಯಾ ಖಂಡದಲ್ಲಿಯೇ ಅದ್ವಿತೀಯವಾಗಿದೆ.


Click it and Unblock the Notifications