Search
  • Follow NativePlanet
Share
ಮುಖಪುಟ » ಸ್ಥಳಗಳು» ಭೀಮಾಶಂಕರ

ಭೀಮಾಶಂಕರದ ಒಂದು ಅವಲೋಕನ

13

ಮಹಾರಾಷ್ಟ್ರದ ಜನಪ್ರೀಯ ಚಾರಣ ತಾಣವಾದ ಕರ್ಜಾತ್ ನ ಸಮೀಪದಲ್ಲಿರುವ ಪ್ರಸಿದ್ದ ಧಾರ್ಮಿಕ ಕೇಂದ್ರವೇ ಈ ಭೀಮಾಶಂಕರ. ಹನ್ನೆರಡು ಜೋತಿರ್ಲಿಂಗಗಳಲ್ಲಿ ಭೀಮಾಶಂಕರವೂ ಒಂದಾಗಿರುವುದು ಇಲ್ಲಿನ ವಿಶೇಷತೆ. ಈ ಹನ್ನೆರಡು ಜೋತಿರ್ಲಿಂಗಗಳಲ್ಲಿ ಐದು ಮಹಾರಾಷ್ಟ್ರ ಒಂದರಲ್ಲೇ ಇವೆ.

ಪುಣೆಯ ಹತ್ತಿರದ ಖೇಡಾದಿಂದ ವಾಯವ್ಯಕ್ಕೆ 50 ಕಿ.ಮೀ. ದೂರದಲ್ಲಿರುವ ಶಿರಾಧೊನ್ ಎಂಬ ಗ್ರಾಮದಲ್ಲಿ,  3,250  ಅಡಿ ಎತ್ತರದ ಮೇಲೆ ಇರುವ ಶಿವಲಿಂಗದ ದರ್ಶನ ಮಾಡಬೇಕಾದರೆ ಬೃಹತ್ ಸಹ್ಯಾದ್ರಿ ಪರ್ವತ ಶ್ರೇಣಿಗಳನ್ನು ದಾಟಿ ಹೋಗಬೇಕು.

ಆಗ್ನೇಯ ದಿಕ್ಕಿನಲ್ಲಿ ಹರಿದು ನಂತರ ಕೃಷ್ಣಾ ನದಿಯೊಂದಿಗೆ ವಿಲೀನವಾಗುವ ಭೀಮಾ ನದಿಯ ಉಗಮಸ್ಥಾನವೂ ಭೀಮಾಶಂಕರದಲ್ಲೇ ಇದೆ.

ಧಾರ್ಮಿಕ ಕ್ಷೇತ್ರವಾಗಿ ಭೀಮಾಶಂಕರ

ದೇವರುಗಳ ಕೋರಿಕೆಗೆ ಓಗೊಟ್ಟು ಭಗವಾನ್ ಶಿವನು ಭೀಮನ ರೂಪದಲ್ಲಿ ಸಹ್ಯಾದ್ರಿ ಬೆಟ್ಟಗಳ ಮೇಲೆ ನೆಲೆಸಲಾರಂಭಿಸಿದ್ದನು. ಕೆಲವು ಕಾಲದ ಬಳಿಕ ದುಷ್ಟ ರಕ್ಕಸ, ತ್ರಿಪುರಾಸುರನೊಂದಿಗೆ ನಡೆದ ಭೀಕರ ಯುದ್ದದಲ್ಲಿ ರಕ್ಕಸನು ಶಿವನಿಂದ ಕೊಲ್ಲಲ್ಪಟನು. ಈ ಯುದ್ದದಲ್ಲಿ ಘರ್ಷಣೆಯಿಂದುಂಟಾದ ಶಾಖದಿಂದಾಗಿ ಭೀಮಾ ನದಿಯು ಬತ್ತಿಹೋಯಿತೆಂದೂ ಯುದ್ದದಲ್ಲಿ ಶಿವನ ದೇಹದಿಂದ ಸುರಿದ ಬೆವರಿನಿಂದ ನದಿ ಪುನರ್ ನಿರ್ಮಿತವಾಯಿತೆಂದೂ ಹೇಳಲಾಗುತ್ತದೆ.

ಭೀಮಾಶಂಕರದ ಸನಿಹದಲ್ಲೇ ಪಾರ್ವತಿ ದೇವಿಯ ಮರುಅವತಾರ ಕಮಲಜಾ ದೇವಿಯ ದೇವಾಲಯವೂ ಇದೆ.

ಭೀಮಾಶಂಕರದ ಪ್ರವಾಸಿ ಕ್ಷೇತ್ರಗಳು

ಮೋಕ್ಷಕುಂಡ ತೀರ್ಥ, ಕುಶಾರಣ್ಯ ತೀರ್ಥ ಹಾಗೂ ಸರ್ವತೀರ್ಥಗಳೆಂಬ ಇತರೆ ಧಾರ್ಮಿಕ ಕ್ಷೇತ್ರಗಳೂ ಇಲ್ಲಿದ್ದು, ನೀವು ಭೀಮಾಶಂಕರಕ್ಕೆ ಭೇಟಿ ನೀಡಿದಾಗ ಇವುಗಳಿಗೂ ಭೇಟಿ ನೀಡುವುದನ್ನು ಮರೆಯದಿರಿ.

ಭೀಮಾಶಂಕರವು ಕೇವಲ ಪುಣ್ಯಕ್ಷೇತ್ರಗಳಿಗಷ್ಟೇ ಅಲ್ಲದೆ, ಪ್ರಕೃತಿ ಪ್ರೀಯರನ್ನೂ ಆಕರ್ಷಿಸುವ ಅತ್ಯುತ್ತಮ ತಾಣವಾಗಿದೆ. ಈ ಪ್ರವಾಸವು ನಿಮಗೆ ಸಹ್ಯಾದ್ರಿ ಬೆಟ್ಟಗಳ ಪ್ರದೇಶದಲ್ಲಿ ಚಾರಣದ ಅನುಭವವನ್ನೂ ನೀಡುತ್ತದೆ. ಇಲ್ಲಿನ ರಕ್ಷಿತ ಅರಣ್ಯದಲ್ಲಿ ವಿವಿಧ ಜಾತಿಯ ಪಕ್ಷಿಗಳನ್ನು ಕಾಣಬಹುದು. ಅಲ್ಲದೆ ವನ್ಯಜೀವಿ ಅಭಯಾರಣ್ಯವೂ ಇಲ್ಲಿರುವುದು. ನೀವಿಲ್ಲಿ ಬಂದಾಗ ಪ್ರಸಿದ್ದ ಭಾರತೀಯ ಅಳಿಲುಗಳನ್ನು ನೋಡುವುದನ್ನು ಮರೆಯದಿರಿ.

ಭೀಮಾಶಂಕರವು ಕೇವಲ ಧಾರ್ಮಿಕ ಜನರಲ್ಲಿ ಮಾತ್ರವಲ್ಲದೆ, ಸಾಹಸ-ಬಯಸುವ ಪ್ರವಾಸಿಗರಲ್ಲೂ ಹೆಸರುವಾಸಿಯಾಗಿದೆ. ಇಲ್ಲಿನ ಪ್ರಾಕೃತಿಕ ಸೌಂದರ್ಯ  ಸಮೃದ್ಧ ಹಸಿರು ಪರಂಪರೆಯನ್ನು ಹೆಮ್ಮೆಯಿಂದ ಪ್ರಕಟಗೊಳಿಸುವತ್ತಿರುವಂತೆ ತೋರುತ್ತದೆ.

ಭೀಮಾಶಂಕರ ಪ್ರಸಿದ್ಧವಾಗಿದೆ

ಭೀಮಾಶಂಕರ ಹವಾಮಾನ

ಉತ್ತಮ ಸಮಯ ಭೀಮಾಶಂಕರ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಭೀಮಾಶಂಕರ

  • ರಸ್ತೆಯ ಮೂಲಕ
    ರಸ್ತೆ ಮೂಲಕ ಭೀಮಾಶಂಕರವನ್ನು ಸುಲಭವಾಗಿ ತಲುಪಬಹುದು. ರಾಜ್ಯ ಸಾರಿಗೆ ಬಸ್ ಸೇವೆಗಳು ಹಾಗೂ ಖಾಸಗೀ ಬಸ್ ಸೇವೆಗಳು ಮಹಾರಾಷ್ಟ್ರದ ಎಲ್ಲ ಪ್ರಮುಖ ನಗರಗಳಿಂದ ಭೀಮಾಶಂಕರಕ್ಕೆ ಸಂಪರ್ಕ ಕಲ್ಪಿಸಿವೆ. ರಸ್ತೆ ಮಾರ್ಗದಲ್ಲಿ , ಭೀಮಾಶಂಕರವು ಪುಣೆಯಿಂದ 200 ಕಿಮೀ ಮತ್ತು ಮುಂಬೈ ನಿಂದ 127 ಕಿಮೀ ದೂರದಲ್ಲಿದೆ. ಪುಣೆಯಿಂದ ಅಂದಾಜು 300 ರೂ ಮತ್ತು ಮುಂಬೈನಿಂದ 800 ರೂ ಗಳ ವೆಚ್ಚದಲ್ಲಿ ಭೀಮಾಶಂಕರವನ್ನು ತಲುಪಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಪುಣೆ ರೈಲ್ವೆ ನಿಲ್ದಾಣವು ಭೀಮಾಶಂಕರದಿಂದ ಸುಮಾರು 95 ಕಿಮೀ ದೂರದಲ್ಲಿರುವ ಆದರೆ , ಹತ್ತಿರದ ರೈಲುತುದಿಯಾಗಿದೆ . ಇಲ್ಲಿಂದ ದೈನಂದಿನ ಟ್ರೇನುಗಳು ಮಹಾರಾಷ್ಟ್ರ ರಾಜ್ಯದ ಒಳಗೆ ಮತ್ತು ಹೊರಗೆ ಹಲವಾರು ಇತರ ನಗರಗಳಿಗೆ ಲಿಂಕ್ ಒದಗಿಸುತ್ತವೆ. ಮುಂಬೈ ನಿಂದ ಬೆಂಗಳೂರು ಉದ್ಯಾನ ಎಕ್ಸ್ಪ್ರೆಸ್, ಚೆನೈ ನಿಂದ ಮುಂಬೈ ಎಕ್ಸ್ಪ್ರೆಸ್, ಹೈದರಾಬಾದ್ ನಿಂದ ರಾಜ್ಕೋಟ್ ಎಕ್ಸ್ಪ್ರೆಸ್ ಮತ್ತು ಮಹಾಲಕ್ಷ್ಮಿ ಎಕ್ಸ್ಪ್ರೆಸ್ ಪ್ರತಿದಿನದ ರೈಲುಗಳು ಆಯಾ ನಗರಗಳಿಂದ ಪುಣೆಗೆ ಸಂಪರ್ಕ ಕಲ್ಪಿಸುತ್ತವೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಭೀಮಾಶಂಕರದಿಂದ 95 ಕಿಮೀ ದೂರದಲ್ಲಿರುವ ಪುಣೆಯಲ್ಲಿನ ಲೋಹೆಗಾಂವ್ ವಿಮಾನ ನಿಲ್ದಾಣವು ಗ್ರಾಮದ ಹತ್ತಿರದ ದೇಶೀಯ ವಿಮಾನ ನಿಲ್ದಾಣವಾಗಿದೆ. ಈ ನಿಲ್ದಾಣವು ನಿಯಮಿತ ಸಂಪರ್ಕ ವಿಮಾನಗಳ ಮೂಲಕ ಮುಂಬೈ ಮತ್ತು ಹೈದರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಹಾಗೂ ಭಾರತದ ಇತರ ನಗರಗಳಿಗೆ ಮತ್ತು ಪಟ್ಟಣಗಳಿಗೆ ಸಂಪರ್ಕ ಹೊಂದಿದೆ. ವಿಮಾನ ನಿಲ್ದಾಣದ ಹೊರಗಡೆ ಲಭ್ಯವಿರುವ ಹಲವಾರು ಕ್ಯಾಬ್ಗಳು 800-900ರೂ ಗಳ ಸರಾಸರಿ ವೆಚ್ಚದಲ್ಲಿ ನಿಮ್ಮನ್ನು ಭೀಮಾಶಂಕರಕ್ಕೆ ತಲುಪಿಸುತ್ತವೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun