Search
  • Follow NativePlanet
Share
ಮುಖಪುಟ » ಸ್ಥಳಗಳು» ಭಾವನಗರ

ಭಾವನಗರ : ಗುಜರಾತಿನ ಗೋಹಿಲ್ವಾಡ್

32

ಭಾವನಗರ ಗುಜರಾತಿನ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು ಪ್ರಮುಖವಾಗಿ ಹತ್ತಿಬಟ್ಟೆಯ ಉದ್ಯಮಕ್ಕೆ ಹೆಸರುವಾಸಿಯಾಗಿದೆ. ಭಾವನಗರ ಕಡಲಿಗೆ ಸಂಬಂಧಿಸಿದ ಉದ್ಯಮ, ರತ್ನ, ಮತ್ತು ಬೆಳ್ಳಿಯ ಜ್ಯೂವೆಲ್ಲರಿಯ ಉದ್ಯಮಕ್ಕೆ ಹೆಸರುವಾಸಿ.

ಇತಿಹಾಸ

ಭಾವನಗರವನ್ನು ಭಾವಸಿನಃಜಿ ಗೋಹಿಲ್ 1723ರಲ್ಲಿ ಕಂಡುಹಿಡಿದ. ಗೋಹಿಲ್ ಮಾರ್ವಾರಿನಿಂದ ವಾದ್ವಾ ಹಳ್ಳಿಯಲ್ಲಿ ತನ್ನ ಉದ್ಯಮವನ್ನು ಬಲಪಡಿಸಲು ಬಂದಿದ್ದ, ಅದು ಈಗ ಭಾವನಗರ ಎಂದು ಹೆಸರುವಾಸಿಯಾಗಿದೆ. ಭಾವನಗರದ ಸುತ್ತ ಕೋಟೆ ಆವರಿಸಿದ್ದು, ಈ ಕೋಟೆ ಎರಡು ಶತಮಾನದಿಂದ ಭಾರತದಿಂದ ಆಫ್ರಿಕಾ, ಮೊಜಾಂಬಿಕ್, ಜಂಜಿಬಾರ್, ಸಿಂಗಾಪುರ ಮತ್ತು ಪರ್ಸಿಯನ್ ಕೊಲ್ಲಿಗೆ ಸಂಪರ್ಕ ಕೊಂಡಿಯಾಗಿದೆ.

ಭಾವಸಿನಃಜಿ ಅವರಿಗೆ ವಿವಿಧ ರೀತಿಯ ವ್ಯಾಪಾರ ಉದ್ದಿಮೆಗಳು ಇದ್ದುದ್ದರಿಂದ, ಭಾವನಗರ ಒಂದು ಸಣ್ಣ ರಾಜ್ಯವಾಗಿದ್ದಿದ್ದು ವಾಣಿಜ್ಯವಾಗಿ ಪ್ರಮುಖ ಪ್ರಾತಿನಿಧ್ಯ ಸಿಕ್ಕಿತು. ಭಾವಸಿನಃಜಿ ಹಾಕಿಕೊಟ್ಟ ದಾರಿಯಲ್ಲಿ ಅವರ ಉತ್ತರಾಧಿಕಾರಿಗಳು ವ್ಯಾಪರ ಉದ್ಯಮಕ್ಕೆ ಬೆಂಬಲಿಸುತ್ತಾ ಬೆಳೆದರು.

ಬ್ರಿಟಿಷರ ಆಳ್ವಿಕೆ

ಹತ್ತೊಂಬತ್ತನೇ ಶತಮಾನದ ಅವಧಿಯಲ್ಲಿ ಭಾವನಗರ ರಾಜ್ಯ ರೈಲು ನಿಲ್ದಾಣವನ್ನು ನಿರ್ಮಿಸಲಾಯಿತು, ಹೀಗಾಗಿ ಭಾವನಗರ ತಾನೇ ನಿರ್ಮಿಸಿದ ಭಾರತದ ಪ್ರಥಮ ರೈಲು ನಿಲ್ದಾಣವೆನ್ನುವ ಖ್ಯಾತಿಗೆ ಒಳಪಟ್ಟಿತು. ಕಾಲಕ್ಕೆ ತಕ್ಕಂತೆ ಆಧುನಿಕತೆಯನ್ನು ಸ್ಥಳೀಯ ಆಡಳಿತ ರೂಪಿಸಿಕೊಂಡಿದ್ದರಿಂದ ಭಾವನಗರ ಕ್ರಮೇಣವಾಗಿ ಕಥಿಯಾವಾರಿನ ಪ್ರಮುಖ ಮುಂದುವರಿದ ರಾಜ್ಯವಾಗಿ ಬೆಳೆಯಿತು. ಭಾವನಗರದ ಅರಸರು ಬ್ರಿಟಿಷರಿಗೆ ಹತ್ತಿರವಾಗಿದ್ದರಿಂದ ಅರಸರಿಗೆ ಗೌರವಪೂರ್ವಕವಾಗಿ ಪ್ರಶಸ್ತಿಯನ್ನೂ ಬ್ರಿಟಿಷರು ನೀಡಿದರು. ಈ ಕುಟುಂಬ ಭಾವನಗರದ ಘನವೆತ್ತ ಕುಟುಂಬವಾಗಿ ಬೆಳೆಯಿತು.

ಸಾಂಸ್ಕೃತಿಕ ನಗರ

ಭಾವನಗರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ರಂಗದಲ್ಲಿ ಪ್ರಸಿದ್ದಿ ಪಡೆಯಿತು. ಇಲ್ಲಿನ ಸಾಂಸ್ಕ್ರುತಿಕತೆಗೆ ಗುಜರಾತಿನ ’ಸಂಸ್ಕಾರಿ ಕೇಂದ್ರ’ಎಂದೂ ಕರೆಯಲಾಗುತ್ತದೆ. ಖ್ಯಾತ ಕಲಾವಿದರು, ಲೇಖಕರು ಮತ್ತು ಸಾಹಿತಿಗಳು ಅವರಲ್ಲಿ ಪ್ರಮುಖರೆಂದರೆ ನರಸಿನ್ ಮೆಹ್ತಾ, ಗಂಗಾ ಸಾತಿ, ಝಾ ವೀರಚಂದ ಮೆಘಾನಿ, ಕವಿ ಕಾಂತ್, ಗೋವರ್ಧನ್ ತ್ರಿಪಾಠಿ ಮತ್ತು ಇನ್ನೂ ಅನೇಕರು ಇಲ್ಲಿನ  ಸಾಂಸ್ಕ್ರುತಿಕತೆಗೆ ಸೇವೆ ಸಲ್ಲಿಸಿದ್ದಾರೆ.

ಭೌಗೋಳಿಕ

ಕಥಿಯಾವಾರ್ ನಲ್ಲಿರುವ ಬಂದರು ನಗರ ಭಾವನಗರ, ಇದು ಗುಜರಾತಿನ ದಕ್ಷಿಣ ಭಾಗದಲ್ಲಿದೆ ಮತು ಖಂಬಟ್ ನಗರದ ಪಶ್ಚಿಮಕ್ಕಿದೆ. ಇಲ್ಲಿ ಗೋಘಾ ಎನ್ನುವ ಪ್ರಮುಖ ಬಂದರು ಇದೆ, ಇದು ಕೊಲ್ಲಿಯ ಬಾಗಿಲಲ್ಲಿದೆ.

ವಾತಾವರಣ

ಇಲ್ಲಿನ ಉಪ ಬತ್ತಿದ ಒಣ ವಾತಾವರಣದಿಂದ ಕೂಡಿದ್ದು, ಬಿರು ಬೇಸಿಗೆ ಮತ್ತು ಮಳೆಗಾಲದಲ್ಲಿ ತೀವ್ರ ಮಳೆಯಾಗುತ್ತದೆ. ಚಳಿಗಾಲದಲ್ಲಿ ತಾಪಾಂಸ ತುಂಬಾ ಕಮ್ಮಿ ಇರುತ್ತದೆ, ಹೆಚ್ಚಾಗಿ ಈ ನಗರ ಸಮುದ್ರಕ್ಕೆ ಹತ್ತಿರ ಇರುವುದರಿಂದ ಸೆಖೆಯಿಂದ ಕೂಡಿರುತ್ತದೆ.

ಕುತೂಹಲದ ಸ್ಥಳಗಳು

ಇಲ್ಲಿನ ಕುತೂಹಲಕಾರಿ ಸ್ಥಳಗಳಲ್ಲಿ ಐತಿಹಾಸಿಕ ಸ್ಮಾರಕಗಳಿವೆ ಅದರಲ್ಲಿ ಪ್ರಮುಖವಾಗಿ ಬ್ರಹ್ಮ ಕುಂಡ, ಇದು ಒಂದು ಬಾವಿಯಾಗಿದ್ದು ಸಿದ್ದರಾಜ್ ಜೈಸಿನ್ಹಜಿ ಅವಧಿಯಲ್ಲಿ ಆಕರ್ಷಕವಾಗಿತ್ತು. ಇಲ್ಲಿ ಕಟ್ಟಲಾಗಿರುವ ಆಶ್ರಯತಾಣಗಳು, ಕಲ್ಲಿನ ಕೆತ್ತನೆಯ ಅತ್ಯಾಕರ್ಷಕವಾಗಿದ್ದು ಗುಹೆಗಳೂ ಇವೆ. ಇನ್ನೊಂದು ನೋಡಲೇ ಬೇಕಾದ ಸ್ಥಳವೆಂದರೆ ನಿಲಂಬಾಗ್ ಅರಮನೆ, ಇದು ಈಗಿನ ರಾಜರ ವಾಸಸ್ಥಳ. ತಕ್ತ್ ಸಿನ್ಹಜಿ ಅವರಿಂದಾಗಿ ಹೆಸರು ಬಂದ ತಕ್ತೇಶ್ವರ ದೇವಾಲಯ, ಪಲಿತಾನ ಜೈನ ದೇವಾಲಯ, ಗೋಪಿನಾಥ್ ಮಹಾದೇವ್ ದೇವಾಲಯ, ಖೋಡಿಯಾರ್ ದೇವಾಲಯ ಮತ್ತು ಗಂಗಾ ದೇವಿ ಮಂದಿರ ಮುಂತಾದ ಧಾರ್ಮಿಕ ದೇವಾಲಯಗಳನ್ನು ನಗರ ಹೊಂದಿದೆ.

ಪಾರಂಪರಿಕ ಸ್ಥಳಗಳು

ವೆಲ್ವಾದರ್ ರಾಷ್ಟ್ರೀಯ ಉದ್ಯಾನವನ ಭಾರತದ ಏಕೈಕ ಉದ್ಯಾನವನವಾಗಿದ್ದು ಉತ್ತಮ ಹಸಿರಾದ ವಾತಾವರಣದಲ್ಲಿದೆ. ಹರಿಣಗಳು, ಗುಳ್ಳೆನರಿ, ತೋಳ, ಕಾಡುಬೆಕ್ಕು, ನರಿ, ಗಂಡುಹಂದಿ ಮುಂತಾದವುಗಳನ್ನು ಈ ಉದ್ಯಾನವನದಲ್ಲಿ ನೋಡಬಹುದಾಗಿದೆ. ಇದಲ್ಲದೇ ವಿವಿಧ ರೀತಿಯ ಹಕ್ಕಿಗಳು ಇಲ್ಲಿವೆ. ಅದರಲ್ಲಿ ಪ್ರಮುಖವಾಗಿ ವೈಟ್ ಪೆಲ್ಸಿಯನ್, ಮಾರ್ಷ್ ಹೌಬಾರ ಬಸ್ಟಡ್, ಪಾಲಿಡ್ ಹ್ಯಾರಿಯರ್ಸ್, ಸರುಸ್ ವೈಟ್ ಸ್ಟಾರ್ಕ್, ಮೊಂಟಗು, ಲೀಸರ್ ಫ್ಲೋರ್ಸಿಯನ್ ಮತ್ತು ಇತರ ಹಕ್ಕಿಗಳಾದ ಸಣ್ಣ ಮೂಗಿರುವ ಸ್ನೇಕ್ ಈಗಲ್, ಬೊನೆಲ್ ಈಗಲ್, ಗ್ರೇಟರ್ ಸ್ಪಾಟೆಡ್ ಈಗಲ್, ಉದ್ದಕಾಲಿನ ಜುವೆನಿಲ್ ಇಂಪೀರಿಯಲ್ ಈಗಲ್.

ಗೋಗಾದಲ್ಲಿ ಪಿರಂ ಬೆಟ್ ಎನ್ನುವ ದ್ವೀಪವಿದೆ. ಆ ದ್ವೀಪದಲ್ಲಿ ಶಿಥಿಲವಾಗಿರುವ ಕೋಟೆಯಿದ್ದು ಅಲ್ಲಿ ವಿವಿಧ ರೀತಿಯು ಸರೀಸೃಪಗಳನ್ನು ಕಾಣಬಹುದಾಗಿದೆ. ನೈಸರ್ಗಿಕ ಬದಲಾವಣೆ ವೀಕ್ಷಿಸಲು ಇದು ಅತ್ಯಂತ ಸೂಕ್ತವಾಗಿದೆ.

ಭಾವನಗರನ್ನು ಗೋಲಿವಾಡ್ ಎಂದೂ ಕರೆಯುತ್ತಾರೆ, ಇದು ಗೋಹ್ಲಿ ಇರುವ ನಾಡು. ಗೋಲಿ ಹೆಮ್ಮೆಯ ಸಂಕೇತ ಅವರ ಅಸ್ತಿತ್ವ ಇನ್ನೂ ಇದೆ. ಗೋಹ್ಲಿಗರ ಬಗ್ಗೆ ಹೆಚ್ಚು ಮಾಹಿತಿ ಪಡೆಯಲು ಭಾವನಗರಕ್ಕೆ ಭೇಟಿ ನೀಡಬೇಕು.

ಭಾವನಗರ ಪ್ರಸಿದ್ಧವಾಗಿದೆ

ಭಾವನಗರ ಹವಾಮಾನ

ಉತ್ತಮ ಸಮಯ ಭಾವನಗರ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಭಾವನಗರ

  • ರಸ್ತೆಯ ಮೂಲಕ
    ಭಾವನಗರದಿಂದ ಹತ್ತಿರದ ನಗರವಾದ ಅಹಮದಾಬಾದ್, ವಡೋದರ ಮತ್ತು ಸೂರತ್ ನಗರಕ್ಕೆ ಬಸ್ಸಿನ ಸಂಪರ್ಕವಿದೆ. ಇಲ್ಲಿ ಬಸ್ಸಿನ ದರ ತುಸು ಹೆಚ್ಚಾದರೂ ಪ್ರಯಾಣ ಸುಖಕರವಾಗಿರುತ್ತದೆ, ಹವಾನಿಯಂತ್ರಿತ ಮತ್ತು ಮಾಮೂಲಿ ಬಸ್ಸುಗಳು ಈ ಭಾಗದಲ್ಲಿ ಓಡಾಡುತ್ತದೆ. ರಾಜಕೋಟ್ ಮತ್ತು ಜಮ್ನಾನಗರದಿಂದ ಇಲ್ಲಿಗೆ ಬಸ್ ಸಂಪರ್ಕ ಉತ್ತಮವಾಗಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಕಾಕಿನಾಡ ಎಕ್ಸ್ ಪ್ರೆಸ್, ಭಾವನಗರ ಎಕ್ಸ್ ಪ್ರೆಸ್ ಭಾವನಗರದಿಂದ ಲಭ್ಯವಿರುವ ರೈಲುಗಳು. ಈ ನಿಲ್ದಾಣವು ಅಹಮದಾಬಾದ್, ಸೂರತ್ ನಂತಹ ಹಲವು ಪ್ರಮುಖ ಹಾಗು ಇತರೆ ನಗರಗಳಿಗೆ ಉತ್ತಮವಾಗಿ ಸಂಪರ್ಕವನ್ನು ಸಾಧಿಸುತ್ತದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಭಾವನಗರದಲ್ಲಿ ಸ್ಥಳೀಯ ವಿಮಾನ ನಿಲ್ದಾಣವಿದ್ದು ಇಲ್ಲಿಂದ ಮುಂಬೈ ಮುಂತಾದ ನಗರಕ್ಕೆ ತಲುಪ ಬಹುದಾಗಿದೆ. ಕಿಂಗ್ ಫಿಷರ್ ಏರ್ ಲೈನ್ಸ್ ಮತ್ತು ಜೆಟ್ ಏರ್ವೇಸ್ ಇಲ್ಲಿಂದ ಹಾರಾಟ ನಡೆಸುತ್ತದೆ. ವಿಮಾನದ ಮೂಲಕ ಶೀಘ್ರವಾಗಿ ಭಾವನಗರ ತಲುಪ ಬಹುದಾಗಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu