Search
  • Follow NativePlanet
Share

ಭಟ್ಕಳ - ಇತಿಹಾಸದ ಆಳ ಹೊಂದಿರುವ ಭೂಮಿ

17

ಕರ್ನಾಟಕ ರಾಜ್ಯದ ಪ್ರಾಚೀನ ಮತ್ತು ಅತೀ ಶ್ರೀಮಂತ ಪಟ್ಟಣವೆಂದು ಭಟ್ಕಳ ಹೆಸರಾಗಿದೆ. ಅಲ್ಲದೇ ದೇಶದ ಹಳೆಯ ಬಂದರು ಎಂದು ಕೂಡ ಗುರುತಿಸಿಕೊಂಡಿದೆ. (ಉತ್ತರ ಕನ್ನಡ) ಕಾರವಾರ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಸುಂದರ ಸಮುದ್ರ ತೀರ ಹೊಂದಿರುವ ಭಟ್ಕಳ ಪಟ್ಟಣವು ಕಾರವಾರದಿಂದ 130 ಕಿ.ಮೀ. ದೂರದಲ್ಲಿದೆ. ಭಟ್ಕಳ ಪಟ್ಟಣವು ರಾಷ್ಟ್ರೀಯ ಹೆದ್ದಾರಿ ನಂ.17 ರ ಮಾರ್ಗದಲ್ಲಿದ್ದು ಇಲ್ಲಿಗೆ ಕೊಂಕಣ ರೈಲು ಮಾರ್ಗದ ಮೂಲಕವೂ ತಲುಪಬಹುದಾಗಿದೆ.

 

ಭೂತಕಾಲದ ಒಂದು ನೋಟ

ಭಟ್ಕಳ ನಗರವು ಪೌರಾಣಿಕ ಹಿನ್ನೆಲೆ ಹೊಂದಿದೆ. ಹೊಯ್ಸಳರ ಆಳ್ವಿಕೆಗೆ ಒಳಪಟ್ಟಿದ್ದ ಈ ಪಟ್ಟಣವು ಹಲವಾರು ಬಾರಿ ದಾಳಿಗೊಳಪಟ್ಟಿರುವ ಕುರುಹು ಇನ್ನೂ ಇಲ್ಲಿ ಕಾಣಸಿಗುತ್ತವೆ. ವಿಜಯ ನಗರ ಸಾಮ್ರಾಜ್ಯದ ಮತ್ತು ಚೋಳರ ರಾಜಾಳ್ವಿಕೆಯ ಕುರುಹುಗಳು ಇಲ್ಲಿ ಇನ್ನೂ ಇವೆ. ಪೋರ್ಚುಗೀಸ್ ರ ಕಾಲದಲ್ಲಿನ ಮತ್ತು ಟಿಪ್ಪು ಸುಲ್ತಾನ್ ಕೂಡ ಬ್ರಿಟಿಷ್ ರಿಂದ ಸೋಲುವವರೆಗೆ ಭಟ್ಕಳ ಅವನ ಆಳ್ವಿಕೆಯಲ್ಲೇ ಇತ್ತೆನ್ನುವುದು ಇತಿಹಾಸದಲ್ಲಿ ದಾಖಲಾಗಿದೆ.

ಹೀಗೆ ಹಲವಾರು ರಾಜರ ಆಳ್ವಿಕೆಯಿಂದ ಭಟ್ಕಳ ಪಟ್ಟಣವು ವಿಶೇಷತೆ ಪಡೆದುಕೊಂಡಿದೆ ಎನ್ನಬಹುದು. ಇಲ್ಲಿ ಹಲವಾರು ದೇವಸ್ಥಾನಗಳು, ಮಸೀದಿಗಳು, ಜೈನ ಬಸದಿಗಳು, ಚರ್ಚ್ ಗಳು ಇತಿಹಾಸದಲ್ಲಿ ಆಳಿಹೋದ ರಾಜ ಮನೆತನದ ಆಡಳಿತಕ್ಕೆ ಸಾಕ್ಷಿಯಾಗಿವೆ.

ಇಲ್ಲಿಯ ಜಾಮೀಯಾ ಮಸೀದಿ, ಖಲೀಫಾ ಮಸೀದಿ ಮತ್ತು ನೂರ್ ಮಸೀದಿ ಬಹಳಷ್ಟು ಮಹತ್ವದ ಮಸೀದಿಗಳಾಗಿವೆ. ಇಲ್ಲಿಯ ಕೇತಪ್ಪಯ್ಯ ನಾರಾಯಣ ದೇವಸ್ಥಾನವು ಇಲ್ಲಿರುವುದು ಈ ಪಟ್ಟಣದ ವಿಶೇಷ ಎನ್ನಬಹುದು.

ಸೂರ್ಯೋದಯ ಮತ್ತು ಸೂರ್ಯಾಸ್ತ ನೋಡಲು ಭಟ್ಟಳ ಪಟ್ಟಣದಲ್ಲಿ ಹಲವಾರು ಸುಂದರ ಸಮುದ್ರತೀರಗಳಿವೆ. ಇಂಥ ಹಲವಾರು ವಿಶೇಷತಗಳನ್ನೊಳಗೊಂಡ ಭಟ್ಕಳ ಪಟ್ಟಣದ ಬೀಚ್ ಗಳ ಸೌಂದರ್ಯ ಸವಿಯಲು ಹಲವಾರು ಪ್ರವಾಸಿಗರು ಬರುತ್ತಾರೆ.

ಭಟ್ಕಳ ಪಟ್ಟಣಕ್ಕೆ ರೈಲು, ರಸ್ತೆ ಮತ್ತು ವಾಯುಮಾರ್ಗದ ಮೂಲಕ ಕೂ ತಲುಪಬಹುದು. ಮಂಗಳೂರಿನ ವಿಮಾನ ನಿಲ್ದಾಣ ಭಟ್ಕಳಕ್ಕೆ ಸಮೀಪದಲ್ಲಿದೆ. ಆಗಸ್ಟ್ ನಿಂದ ಅಕ್ಟೋಬರ್ ತಿಂಗಳಿನಲ್ಲಿ ಒಳ್ಳೆಯ ಹವಾಮಾನ ಇಲ್ಲಿರುವುದರಿಂದ ಪ್ರವಾಸಿಗರು ಸಾಕಷ್ಟು ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ.

ಭಟ್ಕಳ ಪ್ರಸಿದ್ಧವಾಗಿದೆ

ಭಟ್ಕಳ ಹವಾಮಾನ

ಉತ್ತಮ ಸಮಯ ಭಟ್ಕಳ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಭಟ್ಕಳ

  • ರಸ್ತೆಯ ಮೂಲಕ
    ಭಟ್ಕಳ ನಗರ ಮಧ್ಯದಿಂದಲೇ ರಾಷ್ಟ್ರೀಯ ಹೆದ್ದಾರಿ ನಂ.17 ರಲ್ಲಿ ಹಾಯ್ದು ಹೋಗುವುದರಿಂದ ಅನೇಕ ನಗರಗಳಿಂದ ನೇರವಾಗಿಯೇ ಇಲ್ಲಿಗೆ ಬರಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಭಟ್ಕಳದಲ್ಲಿ ರೈಲು ನಿಲ್ದಾಣವಿದೆ. ನಗರದ ಮಧ್ಯ ಭಾಗದಿಂದ 5 ಕಿ.ಮೀ. ಅಂತರದಲ್ಲಿ ಭಟ್ಕಳ ರೈಲು ನಿಲ್ದಾಣವಿದ್ದು, ಇಲ್ಲಿ ದೇಶದೆಲ್ಲೆಡೆ ಸಂಚರಿಸುವ ರೈಲುಗಳ ಓಡಾಟವಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಭಟ್ಕಳದಿಂದ 144 ಕಿ.ಮೀ.ದೂರದಲ್ಲಿ ಮಂಗಳೂರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಪ್ರವಾಸಿಗರು ಮಂಗಳೂರಿನಿಂದ ಭಟ್ಕಳಕ್ಕೆ ಬರಲು ಸಾಕಷ್ಟು ಸಂಖ್ಯೆಯಲ್ಲಿ ಖಾಸಗಿ ವಾಹನ ಮತ್ತು ಸರಕಾರಿ ಬಸ್ ಗಳ ಸೇವೆ ಇದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat