Search
  • Follow NativePlanet
Share
ಮುಖಪುಟ » ಸ್ಥಳಗಳು » ಭದ್ರಾಚಲಂ » ಹವಾಮಾನ

ಭದ್ರಾಚಲಂ ಹವಾಮಾನ

ಭದ್ರಾಚಲಂ ಪಟ್ಟಣಕ್ಕೆ ತಲುಪಲು ಉತ್ತಮವಾದ ವೇಳೆ ಎಂದರೆ ಅಕ್ಟೋಬರ್ ನಿಂದ ಫೆಬ್ರವರಿ ತಿಂಗಳುಗಳ ಮಧ್ಯದ ಸಮಯ. ಈ ಸಮಯದಲ್ಲಿ ಉಷ್ಣಾಂಶವು ಕಡಿಮೆಯಿರುತ್ತದೆ. ಮಧ್ಯಾಹ್ನದ ಹೊತ್ತಿನ ಸೂರ್ಯನ ಶಾಖವನ್ನು ಸಹಿಸಬಹುದು. ಸಂಜೆಯ ಹೊತ್ತು ತಂಪಾದ ವಾತಾವರಣವಿದ್ದು, ಪ್ರಶಾಂತವಾಗಿರುತ್ತದೆ. ಆದ್ದರಿಂದ ಈ ಸಂದರ್ಭದಲ್ಲಿ ಪ್ರವಾಸಕ್ಕಾಗಿ ಹೋಗಲು ಸೂಕ್ತವಾದ ಸಮಯ. ಹೆಚ್ಚಾಗಿ ಎಲ್ಲಾ ಪ್ರವಾಸಿಗರು ಚಳಿಗಾಲದಲ್ಲಿ ಭದ್ರಾಚಲಂ ಪಟ್ಟಣಕ್ಕೆ ಬರಲು ಇಷ್ಟಪಡುತ್ತಾರೆ.

ಬೇಸಿಗೆಗಾಲ

ಭದ್ರಾಚಲಂ ಪಟ್ಟಣದಲ್ಲಿ ಬೇಸಿಗೆಯು ಫೆಬ್ರವರಿ ತಿಂಗಳಿನ ಅಂತ್ಯದಲ್ಲಿ ಆರಂಭವಾಗಿ ಮೇ ತಿಂಗಳ ಅಂತ್ಯದವರೆಗೆ ಮುಂದುವರಿಯುತ್ತದೆ. ಈ ತಿಂಗಳುಗಳಲ್ಲಿ ತಾಪಮಾನವು ಅಧಿಕವಾಗಿದ್ದು, 40 ಡಿ. ಸೆ. ನ್ನೂ ಮೀರಬಹುದು. ಬೇಸಿಗೆಯು ಅತ್ಯಧಿಕ ಶಾಖದಿಂದ ಕೂಡಿರುತ್ತದೆ. ಆದ್ದರಿಂದ ಬೇಸಿಗೆ ತಿಂಗಳುಗಳಲ್ಲಿ ಭದ್ರಾಚಲಂ ನ ಪ್ರವಾಸಿ ಸ್ಥಳಗಳನ್ನು ನೋಡುವುದಕ್ಕೆ ಬರುವುದು ಕಷ್ಟ ಸಾಧ್ಯ. ಆದ್ದರಿಂದ ಬೇಸಿಗೆಯಲ್ಲಿ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುತ್ತಾರೆ.

ಮಳೆಗಾಲ

ಭದ್ರಾಚಲಂ ಪಟ್ಟಣದಲ್ಲಿ ಜೂನ್ ನಿಂದ ಸೆಪ್ಟಂಬರ್ ತಿಂಗಳುಗಳಲ್ಲಿ ಅಧಿಕ ಮಳೆ ಸುರಿಯುತ್ತದೆ. ಅಕ್ಟೋಬರ್ ತಿಂಗಳಿನಲ್ಲಿಯೂ ಕೂಡಾ ಸ್ವಲ್ಪ ಪ್ರಮಾಣದಲ್ಲಿ ಮಳೆಯಾಗುತ್ತದೆ. ಈ ಸಮಯದಲ್ಲಿ ತಾಪಮಾನವು 32 ಡಿ. ಸೆ. ಗಿಂತಲೂ ಕಡಿಮೆಯಿರುತ್ತದೆ. ಮಳೆಗಾಲದ ಸಂದರ್ಭದಲ್ಲಿ ಭದ್ರಾಚಲಂ ಪಟ್ಟಣಕ್ಕೆ ಭೇಟಿ ನೀಡುವುದಕ್ಕೆ ಸೂಕ್ತ ಸಮಯವಲ್ಲ.

ಚಳಿಗಾಲ

ನವೆಂಬರ್ ತಿಂಗಳ ಕೊನೆಯಲ್ಲಿ ಆರಂಭವಾಗುವ ಚಳಿಗಾಲ, ಫೆಬ್ರವರಿ ತಿಂಗಳಿನ ಮಧ್ಯ ಭಾಗದವರೆಗೆ ಮುಂದುವರಿಯುತ್ತದೆ. ಉಷ್ಣಾಂಶವು ಈ ಸಮಯದಲ್ಲಿ ಸಾಕಷ್ಟು ಕಡಿಮೆಯಿದ್ದು, ಸಾಮಾನ್ಯವಾಗಿ 27 ಡಿ.ಸೆ. ದಾಖಲಾಗುತ್ತದೆ. ಆದರೆ ಜನವರಿ ತಿಂಗಳಲ್ಲಿಯೂ ಕೂಡಾ ಅತೀಯಾದ ಚಳಿ ಇರುವುದಿಲ್ಲ. ಮಧ್ಯಾಹ್ನದ ವೇಳೆ ವಾತಾವರಣವು ಬೆಚ್ಚಗಿದ್ದು ಸಂಜೆ ಪ್ರಶಾಂತವಾಗಿರುತ್ತದೆ. ರಾತ್ರಿಯ ಸಮಯದಲ್ಲಿ ಸ್ವಲ್ಪ ಚಳಿಯ ಅನುಭವವಾಗುವುದರಿಂದ ಜಾಕೇಟ್ ಗಳನ್ನು ಧರಿಸುವುದು ಉತ್ತಮ.