Search
  • Follow NativePlanet
Share
ಮುಖಪುಟ » ಸ್ಥಳಗಳು » ಬಟಿಂಡಾ » ಹವಾಮಾನ

ಬಟಿಂಡಾ ಹವಾಮಾನ

ಕೆರೆಗಳ ನಗರ ಬಟಿಂಡಾಗೆ ಭೇಟಿ ನೀಡಲು ಆಕ್ಟೋಬರ್ ನಿಂದ ಮಾರ್ಚ್ ನಡುವಿನ ಅವಧಿಯು ಹೇಳಿ ಮಾಡಿಸಿದ ಸಮಯವಾಗಿರುತ್ತದೆ. ಈ ಅವಧಿಯಲ್ಲಿ ಇಲ್ಲಿನ ಹವಾಮಾನವು ಅತ್ಯಂತ ಆಹ್ಲಾದಕರವಾಗಿರುತ್ತದೆ. ಆಗ ಇಲ್ಲಿ ರಜೆಯ ಮೋಜು ಕಳೆಯಲು ಮತ್ತು ಇನ್ನಿತರ ಹೊರಾಂಗಣ ಚಟುವಟಿಕೆಗಳಲ್ಲಿ ಪಾಲ್ಗೋಳ್ಳಲು ಹೇಳಿ ಮಾಡಿಸಿದ ಸಮಯವಾಗಿರುತ್ತದೆ.

ಬೇಸಿಗೆಗಾಲ

(ಮಾರ್ಚ್ ನಿಂದ ಜೂನ್): ಬಟಿಂಡಾವು ರಾಜಸ್ತಾನದ ಥಾರ್ ಮರುಭೂಮಿಗೆ ಸಮೀಪವಿರುವುದರಿಂದ ಸೆಖೆಯಿಂದ ಕೂಡಿದ ಬೇಸಿಗೆಗಳನ್ನು ಹೊಂದಿರುತ್ತದೆ. ಈ ಸಮಯದಲ್ಲಿ ಇಲ್ಲಿನ ಗರಿಷ್ಠ ಉಷ್ಣಾಂಶವು 47° ಸೆಲ್ಶಿಯಸ್ ತಲುಪಿರುತ್ತದೆ. ಬೇಸಿಗೆಯಲ್ಲಿ ಇಲ್ಲಿ ನಿಯಮಿತವಾಗಿ ಧೂಳಿನ ಮಾರುತಗಳು ಬೀಸುತ್ತಿರುತ್ತವೆ.

ಮಳೆಗಾಲ

(ಜುಲೈನಿಂದ ಸೆಪ್ಟೆಂಬರ್); ಬಟಿಂಡಾದಲ್ಲಿ ಮಳೆಗಾಲವು ಜುಲೈನಿಂದ ಸೆಪ್ಟೆಂಬರ್ ವರೆಗೆ ಇರುತ್ತದೆ. ಇಲ್ಲಿ ಪ್ರತಿವರ್ಷವು ಸರಾಸರಿ 20 ಮಿ.ಮೀ ನಿಂದ 40 ಮಿ.ಮೀ ನಷ್ಟು ಮಳೆಯಾಗುತ್ತದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಮಳೆಯು ಕಡಿಮೆಯಾಗುತ್ತ ಬರುತ್ತದೆ. ಜೊತೆಗೆ ಇಲ್ಲಿನ ಉಷ್ಣಾಂಶವು ಸಹ ಕುಸಿಯುತ್ತ ಬರುತ್ತದೆ.

ಚಳಿಗಾಲ

(ನವೆಂಬರ್ ನಿಂದ ಫೆಬ್ರವರಿ) ; ಬಟಿಂಡಾದಲ್ಲಿ ಚಳಿಗಾಲವು ನವೆಂಬರಿನಲ್ಲಿ ಆರಂಭವಾಗಿ ಫೆಬ್ರವರಿಯಲ್ಲಿ ಕೊನೆಗೊಳ್ಳುತ್ತದೆ. ಈ ಅವಧಿಯಲ್ಲಿ ಇಲ್ಲಿನ ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶವು ಅನುಕ್ರಮವಾಗಿ 26° ಸೆಲ್ಶಿಯಸ್ ಮತ್ತು 0° ಸೆಲ್ಶಿಯಸ್ ಆಗಿರುತ್ತದೆ.