Search
  • Follow NativePlanet
Share
ಮುಖಪುಟ » ಸ್ಥಳಗಳು» ಬನ್ನೇರುಘಟ್ಟ

ಬನ್ನೇರುಘಟ್ಟ - ಆಧುನಿಕ ಪಟ್ಟಣದ ಹತ್ತಿರವಿರುವ ಒಂದು ನೈಸರ್ಗಿಕ ತಾಣ 

21

ಬನ್ನೇರುಘಟ್ಟದ ಅರಣ್ಯ ಪ್ರದೇಶದ ಮುಖ್ಯ ಆಕರ್ಷಣೆಯೇ ಅಲ್ಲಿರುವ ಹುಲಿ ಮತ್ತು ಸಿಂಹಗಳು. ಪ್ರಕೃತಿಯ ಮಡಿಲಲ್ಲಿ ಸಿಂಹಗಳನ್ನು ನೋಡಬಹುದಾದ ಭಾರತದ ಕೆಲವೇ ಪ್ರದೇಶಗಳಲ್ಲಿ ಇದೂ ಒಂದಾಗಿದೆ. ಅರಣ್ಯ ಇಲಾಖೆಯು ಸಿಂಹ ಮತ್ತು ಹುಲಿಗಳ ವೀಕ್ಷಣೆಗಾಗಿ ಸಫಾರಿ ವ್ಯವಸ್ಥೆ ಕಲ್ಪಿಸಿದೆ. ಸಿಂಹಗಳ ಘರ್ಜನೆ ಕೇಳುವುದರೊಂದಿಗೆ ಇತರ ಪ್ರಾಣಿಗಳನ್ನೂ ನೋಡುವ ಸೌಭಾಗ್ಯ ಸಫಾರಿ ಮಾಡುವ ಪ್ರವಾಸಿಗರಿಗೆ ಇಲ್ಲಿ ಸಿಗುವುದು.

 

25 ಸಾವಿರ ಎಕರೆ ಪ್ರದೇಶದಷ್ಟು ವಿಸ್ತಾರ ಹೊಂದಿರುವ ಈ ಮೀಸಲು ಪ್ರದೇಶ ಹುಲಿ, ಸಿಂಹ, ಚಿರತೆ, ಕಾಡುಕೋಣ, ಜಿಂಕೆ, ಕರಡಿಗಳು, ಪಕ್ಷಿಗಳು ಮತ್ತು ವಿವಿಧ ಜಾತಿಯ ಚಿಟ್ಟೆಗಳ ನೆಲೆಯಾಗಿದೆ. ಪ್ರವಾಸಿಗರು ಸಫಾರಿ ಮಾಡುವಾಗ ಚಿರತೆಗಳು, ಅಪರೂಪದ ಬಿಳಿ ಹುಲಿಗಳು, ಸುಂದರ ಬಂಗಾಳದ ಹುಲಿ, ಮತ್ತು ಕಾಡಿನ ರಾಜ ಸಿಂಹ ಅರಣ್ಯದಲ್ಲಿ ರಾಜಾರೋಷವಾಗಿ ಸುತ್ತಾಡುವುದನ್ನು ನೋಡಬಹುದು.

ಇಲ್ಲಿರುವ ಪ್ರಾಣಿಗಳು ಸರ್ಕಸ್ ಗಳಿಂದ ರಕ್ಷಿಸಲ್ಪಟ್ಟಿರುವ ಕೆಲವಾದರೆ ದೇಶದ ಇತರೆಡೆಗಳಿಂದಲೂ ಕೂಡ ತರಿಸಿಕೊಳ್ಳಲಾಗಿದೆ. ಸಂಪೂರ್ಣ ರಕ್ಷಣೆಯಲ್ಲಿರುವ ಈ ಪ್ರಾಣಿಗಳು ನಾಡಿಗೆ ಬರದಂತೆ ಅರಣ್ಯದ ಸೂಕ್ಷ್ಮ ಸ್ಥಳಗಳಲ್ಲಿ ಬೇಲಿಯನ್ನು ಹಾಕಲಾಗಿದೆ.

ಈ ಉದ್ಯಾನವನದ ಮುಖ್ಯ ಆಕರ್ಷಣೆ ಎಂದರೆ ದೇಶದಲ್ಲೇ ಮೊಟ್ಟ ಮೊದಲನೇಯದಾದ ಚಿಟ್ಟೆಗೆಂದೇ ಇರುವ ಉದ್ಯಾನವನ. 7.5 ಎಕರೆ ವಿಸ್ತೀರ್ಣದಲ್ಲಿ ವಿಶೇಷವೆನ್ನಿಸುವ ಈ ಚಿಟ್ಟೆ ಉದ್ಯಾನವನವನ್ನು ಕೇಂದ್ರ ಸಚಿವ ಕಪಿಲ ಸಿಬಲ್ 2006 ರಲ್ಲಿ ಉದ್ಘಾಟಿಸಿದ್ದಾರೆ. ಚಿಟ್ಟೆಗಳ ಆಕರ್ಷಣೆಗೆಂದೇ ಈ ಪ್ರದೇಶದಲ್ಲಿ ವಿಶಿಷ್ಟ ಉಷ್ಣವಲಯದ ಪರಿಸರ ರೂಪುಗೊಳ್ಳಲೆಂದು ವಿವಿಧ ಜಾತಿಯ ಸಸ್ಯಗಳನ್ನು ನೆಡಲಾಗಿದೆ. ಸುಮಾರು 20 ರೀತಿಯ ವಿವಿಧ ಜಾತಿಯ ಚಿಟ್ಟೆಗಳನ್ನು ಇಲ್ಲಿ ನಾವು ಕಾಣಬಹುದು.

ಜಂಗಲ್ ಸಫಾರಿ

ಪ್ರವಾಸಿಗರು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ಮಾಡುತ್ತ ಕಾಡಾನೆಗಳು, ಕಾಡುಹಂದಿ, ಮಚ್ಚೆಯುಳ್ಳ ಜಿಂಕೆ ಸೇರಿದಂತೆ ವಿವಿಧ ಜಾತಿ ಜಿಂಕೆ, ಸಾಂಬಾರ್, ಗುಳ್ಳೆನರಿ, ಕರಡಿ, ಕಾಡು ಹಂದಿ, ಲಂಗೂರ್  ಗಳು ಮತ್ತು ಕೋತಿಗಳನ್ನು ನೋಡಬಹುದು. ಜಂಗಲ್ ಸಫಾರಿಯೊಂದಿಗೆ ಆನೆ ಸವಾರಿ ಕೂಡ ಇಲ್ಲಿ ಪ್ರವಾಸಿಗರು ಮಾಡಿ ಆನಂದಿಸಬಹುದು.

ಬನ್ನೇರಘಟ್ಟ ಅರಣ್ಯ ಪ್ರದೇಶದಲ್ಲಿಯೇ ಹುಟ್ಟಿದ ಸ್ವರ್ಣಮುಖಿ ಹೊಳೆಯು ಅರಣ್ಯದುದ್ದಕ್ಕೂ ಪ್ರಶಾಂತವಾಗಿ ಹರಿಯುತ್ತದೆ. ಅರಣ್ಯದಲ್ಲಿನ ಹಲವಾರು ದೊಡ್ಡ ದೊಡ್ಡ ಮರಗಳಿಂದ ಉದುರುವ ಎಲೆಗಳ ಸುಂದರ ಶಬ್ದದ ನಿನಾದ ಹೊಳೆಯುದ್ದಕ್ಕೂ ಪ್ರವಾಸಿಗರು ಕೇಳಿ ಆನಂದಿಸಬಹುದು. ಇಲ್ಲಿ ಚಂಪಕ ಧಾಮ ಸ್ವಾಮಿಯ ಸುಂದರ ದೇವಸ್ಥಾನ ಇದ್ದು, ಭಗವಾನ್ ವಿಷ್ಣು ಮತ್ತು ಅವನ ಪತ್ನಿಯರಾದ, ಶ್ರೀ ದೇವಿ ಮತ್ತು ಭೂದೇವಿಯರಮೂರ್ತಿಗಳಿವೆ.

ಬೆಂಗಳೂರು ವಾಸಿಗಳಿಗಂತೂ ಪಿಕ್ನಿಕ್ ಸ್ಪಾಟ್ ಆಗಿರುವ ಬನ್ನೇರಘಟ್ಟ ಝೂ (ಪ್ರಾಣಿ ಸಂಗ್ರಹಾಲಯ) ನೋಡುವ ಮಜದೊಂದಿಗೆ ಮಕ್ಕಳೊಂದಿಗೆ ಸಫಾರಿ ಕೂಡ ಮಾಡಬಹುದು. ಬೇರೆಡೆ ಇರುವವರು ಬೆಂಗಳೂರಿಗೆ ಬಂದರೆ ನೆನಪಿಟ್ಟುಕೊಂಡು ಬನ್ನೇರಘಟ್ಟಕ್ಕೆ ಹೋಗಲೇಬೇಕು.

ಬನ್ನೇರುಘಟ್ಟ ಪ್ರಸಿದ್ಧವಾಗಿದೆ

ಬನ್ನೇರುಘಟ್ಟ ಹವಾಮಾನ

ಉತ್ತಮ ಸಮಯ ಬನ್ನೇರುಘಟ್ಟ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಬನ್ನೇರುಘಟ್ಟ

  • ರಸ್ತೆಯ ಮೂಲಕ
    ಬೆಂಗಳೂರು ಮತ್ತು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ನಡುವೆ ನಿಯಮಿತವಾಗಿ ಮತ್ತು ಸತತ ಕೆಎಸ್ಆರ್ಟಿಸಿ (ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ) ಬಸ್ ಗಳು ಸಂಚರಿಸುತ್ತವೆ. ಪ್ರವಾಸಿಗರು ಬನ್ನೇರುಘಟ್ಟ ತಲುಪಲು ಬೆಂಗಳೂರು ವಿಮಾನ ನಿಲ್ದಾಣ ಮತ್ತು ರೈಲ್ವೆ ಸ್ಟೇಷನ್ ನಿಂದ ಕ್ಯಾಬ್ ಅಥವಾ ಟ್ಯಾಕ್ಸಿಗಳನ್ನು ಬಾಡಿಗೆಗೆ ಪಡೆಯಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಬನ್ನೇರುಘಟ್ಟದಲ್ಲಿ ಯಾವುದೇ ರೈಲು ನಿಲ್ದಾಣ ಇಲ್ಲದಿರುವುದರಿಂದ ಸುಮಾರು 27 ಕಿಮೀ ದೂರದಲ್ಲಿರುವ ಬೆಂಗಳೂರು ರೈಲು ನಿಲ್ದಾಣವೇ ಹತ್ತಿರದ ರೈಲ್ವೆ ಜಂಕ್ಷನ್ ಆಗಿದೆ. ಈ ರೈಲು ನಿಲ್ದಾಣವು ಮುಂಬೈ, ದೆಹಲಿ, ಕೋಲ್ಕತ್ತಾ ಮತ್ತು ಚೆನ್ನೈ ಸೇರಿದಂತೆ ಪ್ರಮುಖ ಭಾರತೀಯ ನಗರಗಳು ಮತ್ತು ಪಟ್ಟಣಗಳ ಸಂಪರ್ಕ ಕಲ್ಪಿಸುವ ಪ್ರಮುಖ ರೈಲ್ವೆ ನಿಲ್ದಾಣವಾಗಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಸೇವೆ ನೀಡಬಲ್ಲದಾಗಿದ್ದು, ಬನ್ನೇರುಘಟ್ಟಕ್ಕೆ ಹತ್ತಿರವಾದ ವಿಮಾನ ನಿಲ್ದಾಣ. ಇದು ಬನ್ನೇರುಘಟ್ಟದಿಂದ 60 ಕಿಮೀ ದೂರದಲ್ಲಿದೆ. ದೇಶಾದ್ಯಂತ ಹಾಗೂ ಯೂರೋಪ, ಏಷ್ಯಾ, ಅಮೆರಿಕನ್ ಮತ್ತು ಮಧ್ಯ- ಪೂರ್ವ ದೇಶಗಳ ಪ್ರವಾಸಿಗರು ಸುಲಭವಾಗಿ ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ಬನ್ನೇರಘಟ್ಟವನ್ನು ತಲುಪಬಹುದು .
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat