Search
  • Follow NativePlanet
Share
ಮುಖಪುಟ » ಸ್ಥಳಗಳು » ಬೆಂಗಳೂರು » ಹವಾಮಾನ

ಬೆಂಗಳೂರು ಹವಾಮಾನ

ವಾತಾವರಣವು ಮಧ್ಯಮ ಹಾಗು ಆಹ್ಲಾದಕರವಾಗಿರುವದರಿಂದ, ಚಳಿಗಾಲವು(ಅಕ್ಟೋಬರ್ ಕೊನೆಯಿಂದ ಫೇಬ್ರವರಿ ಕೊನೆಯವರೆಗೆ)ಬೆಂಗಳೂರಿಗೆ ಭೇಟಿ ನೀಡಲು ಅತಿ ಸೂಕ್ತವಾದ ಕಾಲ. ಆದರೂ ಕೂಡ ವರ್ಷಪೂರ್ತಿ ಉತ್ತಮ ವಾತಾವರಣವಿರುವದರಿಂದ ಯಾವಾಗಲೂ ಭೇಟಿ ನೀಡಬಹುದಾಗಿದೆ.

ಬೇಸಿಗೆಗಾಲ

ಬೇಸಿಗೆಯ ಸ್ವಲ್ಪ ಸಮಯವನ್ನು ಹೊರತುಪಡಿಸಿದರೆ ಬೆಂಗಳೂರಿನಲ್ಲಿ ಯಾವಾಗಲೂ ಮಿತವಾದ ವಾತಾವರಣವಿರುತ್ತದೆ. ಬೇಸಿಗೆಯು ಮಾರ್ಚನಿಂದ ಮೇ ವರೆಗಿದ್ದು ಅವಾಗಾವಾಗ ಬಿಸಿಯಾಗಿರುತ್ತದೆ. ತಾಪಮಾನವು 20 ಡಿಗ್ರಿ ಸೆಂಟಿಗ್ರೇಡ ಅಥವಾ 68 ಡಿಗ್ರಿ ಫ್ಯಾರನಹೀಟ್ ನಿಂದ ಹಿಡಿದು 35 ಡಿಗ್ರಿ ಸೆಂಟಿಗ್ರೇಡ ಅಥವಾ 95 ಡಿಗ್ರಿ ಫ್ಯಾರನಹೀಟ್ ವರೆಗಿರುತ್ತದೆ.

ಮಳೆಗಾಲ

ಬೆಂಗಳೂರು ನೈರುತ್ಯ ಮತ್ತು ಈಶಾನ್ಯ ಎರಡೂ ಮಾರುತಗಳನ್ನು ಅನುಭವಿಸುವದರಿಂದ, ವರ್ಷದ ಸದಾಕಾಲವು ತಂಪಾಗಿದ್ದು, ಮೊದಲ ಮಳೆಯನ್ನು ಮೇ ಕೊನೆಯಲ್ಲಿ ಪಡೆಯುತ್ತದೆ. ಅಗಸ್ಟನಿಂದ ಅಕ್ಟೋಬರ ನಡುವಿನ ಅವಧಿಯು ಹೆಚ್ಚಿನ ಮಳೆಯನ್ನು ಪಡೆಯುತ್ತದೆ. ಈ ಸಮಯದಲ್ಲಿ ತಾಪಮಾನವು 19 ಡಿಗ್ರಿ ಸೆಂಟಿಗ್ರೇಡ ಅಥವಾ 66.2 ಡಿಗ್ರಿ ಫ್ಯಾರನಹೀಟ್ ನಿಂದ ಹಿಡಿದು 29 ಡಿಗ್ರಿ ಸೆಂಟಿಗ್ರೇಡ ಅಥವಾ 84.2 ಡಿಗ್ರಿ ಫ್ಯಾರನಹೀಟ್ ವರೆಗೂ ಇರುತ್ತದೆ.

ಚಳಿಗಾಲ

ಚಳಿಗಾಲದ ತಾಪಮಾನವು 12 ಡಿಗ್ರಿ ಸೆಂಟಿಗ್ರೇಡ ಅಥವಾ 53.6 ಡಿಗ್ರಿ ಫ್ಯಾರನಹೀಟ್ ನಿಂದ ಹಿಡಿದು 29 ಡಿಗ್ರಿ ಸೆಂಟಿಗ್ರೇಡ ಅಥವಾ 84.2 ಡಿಗ್ರಿ ಫ್ಯಾರನಹೀಟ್ ವರೆಗಿದ್ದು ಬೆಂಗಳೂರಿಗೆ ಭೇಟಿ ನೀಡಲು ಅತ್ಯಂತ ಸೂಕ್ತವಾದ ಕಾಲ. ನವಂಬರನಿಂದ ಫೇಬ್ರವರಿಯವರೆಗೆ ಚಳಿಗಾಲವಿದ್ದು, ಜನವರಿಯು ವರ್ಷದ ಅತಿ ಚಳಿಯಿಂದ ಕೂಡಿದ ತಿಂಗಳಾಗಿರುತ್ತದೆ.