Search
 • Follow NativePlanet
Share
ಮುಖಪುಟ » ಸ್ಥಳಗಳು» ಬೆಂಗಳೂರು

ಬೆಂಗಳೂರು- ಭಾರತದ ಒಂದು ಹೊಸ ಮುಖ

218

 

ಬೆಂಗಳೂರು, ತನ್ನ ವೈಭವಯುತ ಮಾಲ್ ಗಳು,ಸದಾ ಕಿಕ್ಕಿರಿದು ತುಂಬಿರುವ ರೋಡ್ ಗಳು ಮತ್ತು ಎತ್ತರದ ಕಟ್ಟಡಗಳಿಂದ, ಪ್ರಸ್ತುತ ಭಾರತದ ಹೊಸ ಮುಖವಾಗಿ ಹೊರಹೊಮ್ಮುತ್ತಿದೆ. ಈಗಿನ ಯುವಜನತೆಗೆ ತಕ್ಕುದಾದ ಸ್ಥಳ. ಈಗಿನ ಆಧುನಿಕ ಬೆಂಗಳೂರು ನಗರಿಯು, 1537 ರಲ್ಲಿ, ವಿಜಯನಗರ ಸಾಮ್ರಾಜ್ಯದ ಪ್ರಮುಖ ವ್ಯಕ್ತಿಯಾದ ಕೆಂಪೇಗೌಡರಿಂದ ನಿರ್ಮಿಸಲ್ಪಟ್ಟಿತು.

ನಗರದ ಕೆಲವು ತೆರೆದ ಮೂಲ ಅಂಶಗಳು

ಮೊದಲಿಗೆ ಬೆಂಗಳೂರು ಪಶ್ಚಿಮ ಗಂಗರು ತದನಂತರ ಹೊಯ್ಸಳರಿಂದ ಆಳಲ್ಪಟ್ಟಿತು. ಆಮೇಲೆ ಕ್ರಮವಾಗಿ ಹೈದರ ಅಲಿ ಮತ್ತು ಅವನ ಮಗನಾದ ಟಿಪ್ಪು ಸುಲ್ತಾನರಿಂದ ಆಳಲ್ಪಟ್ಟಿತು. ಇದು ಮೊದಲಿಗೆ ಬೆಂದಕಾಳೂರು ಎಂದು ಕರೆಯಲ್ಪಡಿತ್ತಿದ್ದು ನಂತರ ಬ್ಯಾಂಗಲೋರ್ ಎಂದು ಆಂಗ್ಲೀಕರಣಗೊಂಡು, ಸದ್ಯ ಅಧಿಕೃತವಾಗಿ ಬೆಂಗಳೂರು ಎಂದು ಕರೆಯಲ್ಪಡುತ್ತದೆ.

ಮೊದಲಿಗೆ ಭಾರತದ ಉದ್ಯಾನನಗರಿ ಎಂದು ಕರೆಯಲ್ಪಡುತ್ತಿದ್ದ, ಈ ನಗರವು ಇಂದು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ ಪ್ರಗತಿಯಿಂದಾಗಿ ಭಾರತದ ಸಿಲಿಕಾನ್ ಕಣಿವೆ ಎಂದೂ ಗುರುತಿಸಲ್ಪಟ್ಟಿದೆ.

ಡೆಕ್ಕನ್ ಪ್ರಸ್ತಭೂಮಿಯ ಒಂದು ಭಾಗವಾದ ಮೈಸೂರು ಪ್ರಸ್ತಭೂಮಿಯ ಹೃದಯ ಭಾಗದಲ್ಲಿ ನೆಲೆಸಿರುವ ಈ ಪಟ್ಟಣವು, ಕರ್ನಾಟಕದ ಆಗ್ನೇಯ ಭಾಗದಲ್ಲಿದೆ. 741 ಚ.ಕಿ.ಮೀ. ವಿಸ್ತೀರ್ಣವುಳ್ಳ ಈ ಪ್ರದೇಶವು 5.8 ಮಿಲ್ಲಿಯನ್ (ಅತಿ ಹೆಚ್ಚು ಜನಸಂಖ್ಯೆವುಳ್ಳ ಮೂರನೆ ನಗರ) ಜನಸಂಖ್ಯೆ ಹೊಂದಿದೆ. ಮುಖ್ಯವಾಗಿ ಇದು ಸಮುದ್ರ ಮಟ್ಟದಿಂದ 3113 ಅಡಿ(949 ಮಿ.) ಎತ್ತರದಲ್ಲಿ ಸ್ಥಿತವಾಗಿರುವದರಿಂದ, ಸುಂದರವಾದ ವಾತಾವರಣವನ್ನು ಹೊಂದಿದೆ.

ಉಷ್ಣವಲಯದ ವಾತಾವರಣವಿರುವದರಿಂದ, ಈ ಪಟ್ಟಣವು ಪದೆ ಪದೆ ಮಳೆಯನ್ನು ಅನುಭವಿಸುತ್ತ ಬೇಸಿಗೆಗಾಲದಲ್ಲಿ ಬೆಚ್ಚಗಿದ್ದು ಚಳಿಗಾಲದಲ್ಲಿ ತಂಪಾಗಿರುತ್ತದೆ. ಇಂತಹ ಸುಂದರ ವಾತಾವರಣವು ಒಂದೊಮ್ಮೆ ನಿವೃತ್ತಿ ಹೊಂದಿದವರನ್ನು ಆಕರ್ಷಿಸಿದ್ದು, ನಿವೃತ್ತಿ ಹೊಂದಿದವರ ಸ್ವರ್ಗ ಎಂದೂ ಕೂಡ ಇದಕ್ಕೆ ಕರೆಯಲಾಗುತ್ತಿತ್ತು. ಬೇಸಿಗೆಯಲ್ಲಿ ತಾಪಮಾನವು 20 ರಿಂದ 36 ಡಿಗ್ರಿಯಿದ್ದು, ಚಳಿಗಾಲದಲ್ಲಿ 17 ರಿಂದ 27 ಡಿಗ್ರಿಯಾಗಿರುತ್ತದೆ.

ಸಂಪರ್ಕ ಮತ್ತು ಸುಲಲಿತವಾದ ಪ್ರಯಾಣ

ನಗರದ ಒಳ ಹಾಗು ಹೊರಭಾಗಗಳು ಒಂದಕ್ಕೊಂದು ಒಳ್ಳೆಯ ಸಂಪರ್ಕ ಹೊಂದಿರುವ ಕಾರಣ ನಗರದ ಒಳಗೆ ಮತ್ತು ಹೊರಗೆ ಒಡಾಡುವುದು ತುಂಬಾ ಸರಳವಾಗಿದೆ. ನಗರದ ಒಳಗಡೆ ಸಂಚರಿಸಲು, ಜನರು ಆಟೊ ರಿಕ್ಷಾಗಳು, ಕ್ಯಾಬಗಳು, ಮೆಟ್ರೊ ಟ್ರೇನಗಳ(ಸದ್ಯದಲ್ಲೇ ಆರಂಭವಾಗಲಿವೆ) ಸೌಲಭ್ಯವನ್ನು ಪಡೆಯಬಹುದು. ವಿಮಾನ ನಿಲ್ದಾಣಕ್ಕೆ ಹೋಗಲು ವಾಯು ವಜ್ರಾ ಬಸ್ಸುಗಳ ಸೌಲಭ್ಯವಿದೆ. ಬೆಂಗಳೂರು ಆಕಾಶ ಮಾರ್ಗ, ಭೂ ಮಾರ್ಗ ಮತ್ತು ರೈಲು ಮಾರ್ಗಗಳ ಮೂಲಕ ಭಾರತದ ಇತರ ಭಾಗಗಳಿಗೂ ಸಂಪರ್ಕ ಹೊಂದಿದೆ.

ಭಾರತದ ನೈರುತ್ಯ ರೇಲ್ವೆ ವಲಯಕ್ಕೆ ಇದು ಮುಖ್ಯ ಕೇಂದ್ರವಾಗಿದ್ದು, ಯಶವಂತಪುರ, ಕ್ಯಾಂಟೊನಮೆಂಟ್ ಮತ್ತು ಕೆ.ಆರ್.ಪುರಂ ನಂತಹ ಕೆಲವು ಇತರೆ ನಿಲ್ದಾಣಗಳನ್ನೂ ಹೊಂದಿದೆ. ದೇಶೀಯ ಹಾಗು ಅಂತಾರಾಷ್ಟ್ರೀಯ ಪ್ರಯಾಣಿಕರಿಗಾಗಿ, ದೇವನಹಳ್ಳಿ ಎಂಬಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದ್ದು, ಇದು ನಗರದಿಂದ 40 ಕಿ.ಮೀ. ದೂರದಲ್ಲಿದೆ.

ಸ್ಥಳೀಯ ಸಂಸ್ಕೃತಿ ಮತ್ತು ಸಂಪ್ರದಾಯ

ಬೆಂಗಳೂರು ನಗರವು ಬಹುಮುಖ ಸಂಸ್ಕೃತಿಯನ್ನು ಹೊಂದಿದ್ದರೂ ಕೂಡ, ಬಹುಪಾಲು ಜನರು ಹಿಂದುಗಳಾಗಿದ್ದಾರೆ. ಇಲ್ಲಿನ ವೈವಿಧ್ಯಮಯ ಸಂಸ್ಕೃತಿಯು, ಇತರೆ ರಾಜ್ಯಗಳ ಜನರು ಇಲ್ಲಿ ನೆಲೆಸಲು ಪೂರಕವಾಗಿದೆ. ಕನ್ನಡವು ಇಲ್ಲಿಯ ಅಧಿಕೃತ ಭಾಷೆಯಾದರೂ ಕೂಡ, ಬಹುಜನರು ಗುಣಮಟ್ಟದ ಆಂಗ್ಲ ಭಾಷೆಯನ್ನು ತಿಳಿದು ಮಾತನಾಡಬಲ್ಲರು.

ಇಲ್ಲಿ ಬಳಕೆಯಲ್ಲಿರುವ ಇತರೆ ಭಾಷೆಗಳೆಂದರೆ ತಮಿಳು, ತೆಲುಗು ಮತ್ತು ಮಲಯಾಳಮ್. ಮುಂಬೈ ನಂತರ ಹಚ್ಚಿನ ಸಾಕ್ಷರತಾ ಪ್ರಮಾಣ(83%) ಹೊಂದಿದ ಪ್ರದೇಶ ಇದಾಗಿದೆ.ನಗರದ ಶ್ರೀಮಂತ ಸಂಸ್ಕೃತಿಯು, ರಂಗ ಶಂಕರ, ಚೌಡಯ್ಯ ಮೆಮೋರಿಯಲ್ ಹಾಲ್ ಮತ್ತು ರವೀಂದ್ರ ಕಲಾಕ್ಷೇತ್ರಗಳಂತಹ ಸಂಸ್ಥೆಗಳನ್ನು ಪ್ರೋತ್ಸಾಹಿಸುತ್ತ ಸಾಂಸ್ಕೃತಿಕ ಮತ್ತು ಆಧುನಿಕ ರಂಗಭೂಮಿಯಾಗಿ ಬೆಳೆಯಲು ಭದ್ರ ಬುನಾದಿಯಾಗಿದೆ. "ಬೆಂಗಳೂರು ಹಬ್ಬ"ವು ವರ್ಷಕ್ಕೊಮ್ಮೆ ನಡೆಯುವ ಉತ್ಸವವಾಗಿದ್ದು, ಜನರು ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಇದೊಂದು ಉತ್ತಮವಾದ ಅವಕಾಶ ಒದಗಿಸುತ್ತದೆ. ದೀಪಾವಳಿ ಮತ್ತು ಗಣೇಶ ಚತುರ್ಥಿಯು ಇನ್ನೆರಡು ಪ್ರಮುಖ ಹಬ್ಬಗಳಾಗಿದ್ದು ಇಲ್ಲಿಯ ಶ್ರೀಮಂತ ಧಾರ್ಮಿಕ ಸಂಪ್ರದಾಯಕ್ಕೆ ಸಾಕ್ಷಿಯಾಗಿವೆ.

ಪ್ರಮುಖ ಸ್ಥಾನವಾಗಿ ಏಳಿಗೆ

ಹಿಂದುಸ್ತಾನ ಏರೊನಾಟಿಕ್ಸ್ ಲಿಮಿಟೆಡ್(ಎಚ್.ಎ.ಎಲ್), ಭಾರತ ಎಲೆಕ್ಟ್ರೊನಿಕ್ಸ್ ಲಿಮಿಟೆಡ್(ಬಿ.ಇ.ಎಲ್), ಭಾರತ ಅರ್ಥ್ ಮೂವರ್ಸ್ ಲಿಮಿಟೆಡ್(ಬಿ.ಇ.ಎಮ್.ಎಲ್), ಹಿಂದುಸ್ತಾನ ಮಷೀನ್ ಟೂಲ್ಸ್(ಎಚ್.ಎಮ್.ಟಿ) ಮತ್ತು ಇಂಡಿಯನ್ ಸ್ಪೆಸ್ ರಿಸರ್ಚ್ ಒರ್ಗನೈಸೆಷನ್(ಇಸ್ರೊ) ಇವುಗಳು ತಮ್ಮ ಪ್ರಧಾನ ಕಛೇರಿಗಳನ್ನು ಇಲ್ಲಿ ತೆರೆದಿದುದರಿಂದ, ನಗರವು ಒಂದು ಉತ್ಪಾದನಾ ಕೇಂದ್ರವಾಗಿ ಬೆಳೆಯಿತು.

ಕಂಪನಿಗಳಾದ ಇನ್ಫೊಸಿಸ್, ವಿಪ್ರೊ ಮತ್ತು ಟಿಸಿಎಸ್ ಗಳು ಇಲ್ಲಿ ತಮ್ಮ ಪ್ರಧಾನ ಕಛೇರಿಗಳನ್ನು ತೆರೆದಿದುದರಿಂದ, ನಗರದ ಆರ್ಥಿಕ ಪ್ರಗತಿಯು ಮಹತ್ತರವಾಗಿ ಬೆಳೆಯಿತು. ಬೆಂಗಳೂರಿನಲ್ಲಿರುವ ಇತರೆ ಪ್ರಮುಖ ಕಂಪನಿಗಳೆಂದರೆ ಎಲ್.ಜಿ, ಸ್ಯಾಮ್ಸಂಗ್ ಮತ್ತು ಐ.ಬಿ.ಎಮ್. ಇಲ್ಲಿ ಸೃಷ್ಟಿಯಾದಂತಹ ಉದ್ಯೋಗ ಮಾರುಕಟ್ಟೆಯು ಜಗತ್ತಿನಾದ್ಯಂತ ಎಲ್ಲರನ್ನೂ ಆಕರ್ಷಿಸುತ್ತ, ಇದೊಂದು ಬಹುಸಂಸ್ಕೃತಿ ಹಾಗು ಬಹುಜನಾಂಗೀಯ ಸಮಾಜವನ್ನಾಗಿ ಪರಿವರ್ತಿಸಲು ಸಹಾಯವಾಯಿತು.

ಪ್ರತಿಷ್ಠೆಯ ವಿದ್ಯಾ ಸಂಸ್ಥೆಗಳಾದ ಇಂಡಿಯನ್ ಇನ್ಸ್ಟಿಟ್ಯುಟ್ ಆಫ್ ಸೈನ್ಸ್(ಐ.ಐ.ಎಸ್ ಸಿ) ಮತ್ತು ಇಂಡಿಯನ್ ಇನ್ಸ್ಟಿಟ್ಯುಟ್ ಆಫ್ ಮ್ಯಾನೇಜಮೆಂಟ್ (ಐ.ಐ.ಎಮ್) ಗಳನ್ನು ಇಲ್ಲಿ ಕಾಣಬಹುದು. ಇಷ್ಟೇ ಅಲ್ಲದೆ, ಬಹು ಸಂಖ್ಯೆಯಲ್ಲಿ ಇಂಜಿನೀಯರಿಂಗ್, ಮೆಡಿಕಲ್ ಮತ್ತು ಮ್ಯಾನೇಜಮೆಂಟ್  ಕಾಲೇಜುಗಳು ಕೂಡ ಇಲ್ಲಿವೆ.

ಪ್ರವಾಸಿಗರು ಬೆಂಗಳೂರಿಗೆ ಬರಲು ಮುಖ್ಯ ಕಾರಣ

ಬೆಂಗಳೂರು ಇತರೆ ಸ್ಥಳಗಳಿಗೆ ಉತ್ತಮವಾದ ಸಂಪರ್ಕ ಹೊಂದಿರುವದರಿಂದ ಪ್ರವಾಸಿಗರಿಗೆ ಸ್ವರ್ಗವಾಗಿದ್ದು, ಅನೇಕ ಆಕರ್ಷಣೀಯ ಸ್ಥಳಗಳಾದ ಜವಾಹರಲಾಲ್ ನೆಹರು ಪ್ಲಾನೇಟೊರಿಯಮ್, ಲಾಲಬಾಗ್, ಕಬ್ಬನ್ ಪಾರ್ಕ್, ಅಕ್ವೇರಿಯಮ್, ವೆಂಕಟಪ್ಪಾ ಆರ್ಟ್ ಗ್ಯಾಲರಿ, ವಿಧಾನ ಸೌಧ ಮತ್ತು ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ಗಳನ್ನು ಇಲ್ಲಿ ಕಾಣಬಹುದು.

ಮುತ್ಯಾಲಮಡುವು(ಮುತ್ತಿನಕಣಿವೆ), ಮೈಸೂರು, ಶ್ರವಣಬೆಳಗೋಳ, ನಾಗರಹೊಳೆ, ಬಂಡಿಪುರ, ರಂಗನತಿಟ್ಟು, ಬೆಲೂರು, ಹಳೆಬೀಡು ಮುಂತಾದ ಸ್ಥಳಗಳಿಗೂ ಕೂಡ ಬೆಂಗಳೂರಿನಿಂದ ಆರಾಮವಾಗಿ ಪ್ರಯಾಣಿಸಬಹುದಾಗಿದೆ.

ನಗರದಲ್ಲಿ ಇಳಿದುಕೋಳ್ಳಲು ಅನೇಕ ಆಯ್ಕೆಗಳಿದ್ದು, ಅವುಗಳಲ್ಲಿ ಲೀಲಾ ಪ್ಯಾಲೇಸ್, ಗೊಲ್ಡನ್ ಲ್ಯಾಂಡಮಾರ್ಕ್, ವಿಂಡ್ಸರ್ ಮ್ಯಾನರ್, ಲಿ ಮೇರಿಡಿಯನ್, ತಾಜ್ ಮತ್ತು ಲಲಿತ್ ಅಶೋಕ ಮುಂತಾದ ಹಲವು ಹೋಟೆಲ್ ಗಳು ಸೂಕ್ತ ಹಾಗು ದುಬಾರಿ ಬೆಲೆಗಳಲ್ಲಿ ಪ್ರವಾಸಿಗರಿಗೆ ಲಭ್ಯವಿವೆ.

ಬಹುಮುಖಿಯ ಸಂಸ್ಕೃತಿಹೊಂದಿರುವ ಕಾರಣ, ವಿವಿಧ ಬಗೆಯ ಖಾದ್ಯಗಳನ್ನು ಕೂಡ ಇಲ್ಲಿ ಕಾಣಬಹುದು. ಬೀದಿ ತಿನಿಸುಗಳಿಂದ ಹಿಡಿದು ಅಂತಾರಾಷ್ಟ್ರೀಯ ಮಟ್ಟದವರೆಗಿನ ತಿನಿಸುಗಳು ಕೂಡ ಇಲ್ಲಿ ಲಭ್ಯ. ಬೆಂಗಳೂರಿನಾದ್ಯಂತ ಬಹುಸಂಖ್ಯೆಯಲ್ಲಿ ಮ್ಯಾಕ್ ಡೊನಾಲ್ಡ್, ಕೆ.ಎಫ್.ಸಿ ಮತ್ತು ಪೀಜ್ಜಾ ಹಟ್ ಗಳ ಔಟ್ ಲೆಟ್ ಗಳನ್ನು ಕಾಣಬಹುದಾಗಿದ್ದು, ಆಸಕ್ತಿಯುಳ್ಳ ಪ್ರವಾಸಿಗರು ಸ್ಥಳೀಯ ತಿಂಡಿತಿನಿಸುಗಳ ಕೇಂದ್ರವಾದ ಎಂ.ಟಿ.ಅರ್. ಗೂ ಕೂಡ ಭೇಟಿ ನೀಡಬಹುದು. ಇತರೆ ಅನೇಕ ಸ್ಥಳಗಳಲ್ಲಿ ಭಾರತದ ಬೇರೆ ಬೇರೆ ರಾಜ್ಯಗಳ ಖಾದ್ಯಗಳು ಲಭ್ಯವಿದ್ದು, ಉತ್ತರ ಅಥವಾ ಪೂರ್ವ ಭಾರತದ ಅಡುಗೆಗಳಿಗೆ ಯಾವುದೆ ಕೊರತೆಯಿಲ್ಲ.

ದಿ ಫೋರಮ್, ಗರುಡಾ ಮಾಲ್, ಸೆಂಟ್ರಲ್ ಮತ್ತು ಮಂತ್ರಿ ಮಾಲ್ ಗಳಲ್ಲಿ, ದೇಶಿಯ ಹಾಗು ವಿದೇಶಿಯ ಉತ್ಪನ್ನಗಳು ಲಭ್ಯವಿದ್ದು ಖರೀದಿಗೆ ಯೋಗ್ಯವಾದ ಸ್ಥಳಗಳಾಗಿವೆ. ಎಂ.ಜಿ. ರೋಡ್ ನಲ್ಲಿರುವ ಕಾವೇರಿ ಎಂಪೋರಿಯಮ್ ವು ದೇಸಿಯ ಉತ್ಪನ್ನಗಳಾದ ಚಂದನದ ಸಾಮಗ್ರಿಗಳು, ಜನಪ್ರಿಯವಾದ ಚೆನ್ನಪಟ್ಟಣದ ಕಟ್ಟಿಗೆಯ ಬೊಂಬೆಗಳನ್ನು ಖರೀದಿಸಲು ಉತ್ತಮ ಸ್ಥಳವಾಗಿದೆ. ತುಡಿಯುತ್ತಿರುವ ಯುವಜನಾಂಗದ ಪರಿಣಾಮವಾಗಿ, ಬೆಂಗಳೂರಿನ ರಾತ್ರಿ ಜೀವನವು ಬಲು ಸೊಗಸಾಗಿರುತ್ತದೆ.

ಈ ರೀತಿಯಾಗಿ ಅನೇಕ ಬಗೆಯ ಚಟುವಟಿಕೆಗಳನ್ನು ಬೆಂಗಳೂರಿನಲ್ಲಿ ಮಾಡಬಹುದಾಗಿರುವದರಿಂದ, ನಿಜವಾಗಿಯೂ ಇದೊಂದು ಅಭೂತಪೂರ್ವವಾದ ಅನುಭವವನ್ನು ಒದಗಿಸುವುದು ಸತ್ಯ!

 

ಬೆಂಗಳೂರು ಪ್ರಸಿದ್ಧವಾಗಿದೆ

ಬೆಂಗಳೂರು ಹವಾಮಾನ

ಉತ್ತಮ ಸಮಯ ಬೆಂಗಳೂರು

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಬೆಂಗಳೂರು

 • ರಸ್ತೆಯ ಮೂಲಕ
  ಬೆಂಗಳೂರು ಮೆಟ್ರೊಪಾಲಿಟನ್ ಟ್ರಾನ್ಸ್ಪೊರ್ಟೆಷನ್ ಕಾರ್ಪೋರೆಷನ್ ನ ಬಸ್ಸುಗಳು ನಗರದ ಪರೀಧಿಯಲ್ಲೆ ಸಂಚರಿಸಲು ಮುಖ್ಯ ವಾಹನಗಳಾಗಿವೆ. ಬಿ.ಎಮ್.ಟಿ.ಸಿ ಯ ವೊಲ್ವೊ ವಾಹನಗಳೂ ಕೂಡ ನಗರದಲ್ಲಿ ಸಂಚರಿಸಲು ಮತ್ತು ವಿಮಾನ ನಿಲ್ದಾಣಕ್ಕೆ ಹೋಗಲು ಸಹಕಾರಿಯಾಗಿವೆ. ಕೆ.ಎಸ.ಆರ.ಟಿ.ಸಿ (ಕರ್ನಾಟಕ ಸ್ಟೇಟ್ ರೋಡ್ ಟ್ರಾನ್ಸ್ಪೊರ್ಟ್ ಕಾರ್ಪೋರೆಷನ್)ನ ಬಸ್ಸುಗಳು ರಾಜ್ಯದ ವಿವಿಧೆಡೆಗಳಿಂದ ಮಾತ್ರವೇ ಅಲ್ಲದೆ ಪಕ್ಕದ ರಾಜ್ಯಗಳಿಗೂ ಕೂಡ ಬೆಂಗಳೂರಿನಿಂದ ಸಂಪರ್ಕವನ್ನು ಹೊಂದಿವೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಬೆಂಗಳೂರು ಸಿಟಿ ಸೇಂಟ್ರಲ್ ಸ್ಟೇಶನ್ ಬೆಂಗಳೂರಿನ ಮುಖ್ಯ ರೈಲು ನಿಲ್ದಾಣವಾಗಿದ್ದು, ಯಶವಂತಪುರ,ಬೆಂಗಳೂರು ಪೂರ್ವ,ದಂಡು,ಕೆ.ಆರ್.ಪುರಂ,ಬೈಯಪ್ಪನಹಳ್ಳಿ ಮತ್ತು ವ್ಹೈಟ್ ಫಿಲ್ಡ್ ನಿಲ್ದಾಣಗಳು ಇತರೆ ನಿಲ್ದಾಣಗಳಾಗಿವೆ. ಬೆಂಗಳೂರು ದೆಹಲಿ,ಮುಂಬೈ,ಚೆನ್ನೈ,ಕೊಲ್ಕತ್ತ ನಗರಗಳಲ್ಲದೆ ಭಾರತದ ಇತರೆ ಪ್ರಮುಖ ನಗರಗಳಿಗೂ ಕೂಡ ಸಂಪರ್ಕವನ್ನು ಹೊಂದಿದೆ. ಬೆಂಗಳೂರು ರಾಜಧಾನಿ ಎಕ್ಸಪ್ರೆಸ್, ಯಶವಂತಪುರ ಹಾವರಾ ಮುಂತಾದ ಕೆಲವು ಟ್ರೇನಗಳು ಇಲ್ಲಿಂದ ಹೊರಡುತ್ತವೆ. ಇಷ್ಟೆ ಅಲ್ಲದೆ ಬೆಂಗಳೂರು ಹಲವು ಪ್ಯಾಸೆಂಜರ್ ಮತ್ತು ಎಕ್ಸಪ್ರೆಸ್ ರೈಲುಗಳ ಮೂಲಕ ದಕ್ಷಿಣ ಭಾಗದ ಪೂರ್ಣ ಸಂಪರ್ಕವನ್ನೂ ಕೂಡ ಹೊಂದಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಭಾರತದ ಹೆಚ್ಚು ಚಟುವಟಿಕೆಯುಳ್ಳ ನಿಲ್ದಾಣಗಳಲ್ಲಿ ಒಂದಾಗಿದ್ದು ಅನೇಕ ರಾಷ್ಟ್ರೀಯ ಹಾಗು ಅಂತರರಾಷ್ಟ್ರೀಯ ಸ್ಥಳಗಳಿಗೆ ಸಂಪರ್ಕವನ್ನು ಹೊಂದಿದೆ. ಕಿಂಗಫಿಶರ್, ಜೆಟ್ ಏರವೇಸ್,ಜೆಟ್ ಲೈಟ್,ಇಂಡಿಗೊ,ಸ್ಪೈಸ್ ಜೆಟ್, ಗೊ ಏರ್, ಇಂಡಿಯನ್ ಏರ್ ಲೈನ್ಸ್ ಮತ್ತು ಏರ್ ಇಂಡಿಯಾದ ಹಲವು ವಿಮಾನಗಳು ಇಲ್ಲಿಂದ ಉಡಾವಣೆಗೊಳ್ಳುತ್ತವೆ. ಈ ನಿಲ್ದಾಣವು ಬೆಂಗಳೂರಿನಿಂದ 40 ಕಿ.ಮೀ ದೂರದ ದೇವನಹಳ್ಳಿ ಎಂಬಲ್ಲಿದ್ದರೂ, ವೊಲ್ವೊ ಬಸ್ಸುಗಳು ಮತ್ತು ಕೆ.ಎಸ.ಟಿ.ಡಿ.ಸಿ ಕ್ಯಾಬಗಳ ಮುಖಾಂತರ ಇದನ್ನು ಸರಳವಾಗಿ ತಲುಪಬಹುದಾಗಿದೆ. ಇವುಗಳಲ್ಲದೆ, ಮೆರು ಕ್ಯಾಬ್ಸ ಮಾತು ಈಸಿ ಕ್ಯಾಬ್ಸ್ ಗಳ ಸೌಲಭ್ಯವೂ ಇದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
08 Dec,Thu
Return On
09 Dec,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
08 Dec,Thu
Check Out
09 Dec,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
08 Dec,Thu
Return On
09 Dec,Fri