Search
  • Follow NativePlanet
Share
ಮುಖಪುಟ » ಸ್ಥಳಗಳು » ಬನವಾಸಿ » ಹವಾಮಾನ

ಬನವಾಸಿ ಹವಾಮಾನ

ಬನವಾಸಿಗೆ ಭೇಟಿ ನೀಡಲು ಚಳಿಗಾಲವು ಸೂಕ್ತ ಸಮಯವಾಗಿದೆ.

ಬೇಸಿಗೆಗಾಲ

(ಏಪ್ರಿಲ್ - ಜುಲೈ ): ಬೇಸಿಗೆ ಕಾಲದಲ್ಲಿ ಬನವಾಸಿಯಲ್ಲಿ ಸಾಕಷ್ಟು ಉಷ್ಣ ಆರ್ದ್ರ ಹವಾಮಾನ ಇರುತ್ತದೆ ಮತ್ತು ಹಗಲಿನ ಸಮಯದಲ್ಲಿ ತಾಪಮಾನ, ಗರಿಷ್ಠ 37 ℃ ಇದ್ದು ರಾತ್ರಿ ಕನಿಷ್ಠ 25 ℃ಯಷ್ಟು ಇಳಿಮುಖವಾಗುತ್ತದೆ. ಬಿಸಿ ಹವಾಮಾನವು ಅಸಹನೀಯ ಹಾಗೂ ಸುತ್ತಲಿನ ಪ್ರಯಾಣಕ್ಕೆ ಅಹಿತಕರವಾಗಿರುವದರಿಂದ ಬೇಸಗೆ ಕಾಲವು ಬನವಾಸಿ ಭೇಟಿಗೆ ಸೂಕ್ತ ಸಮಯವಲ್ಲ.

ಮಳೆಗಾಲ

( ಆಗಸ್ಟ್ - ನವೆಂಬರ್): ಬನವಾಸಿ ಪಟ್ಟಣವು ಮುಂಗಾರಿನಲ್ಲಿ ಗಣನೀಯ ಮಳೆ ಪಡೆಯುತ್ತದೆ ಆದ ಕಾರಣ ಪ್ರವಾಸಿಗರು ತಿರುಗಾಡಲು ಕಷ್ಟ ಆಗುವ ಸಾಧ್ಯತೆ ಇದೆ.

ಚಳಿಗಾಲ

( ಡಿಸೆಂಬರ್ - ಫೆಬ್ರವರಿ): ಈ ಸ್ಥಳ ಮಧ್ಯಮ ಚಳಿಗಾಲವನ್ನು ಅನುಭವಿಸುತ್ತಿದ್ದು ಬನವಾಸಿಯಲ್ಲಿ ಚಳಿಗಾಲದಲ್ಲಿ ಹವಾಮಾನ ಸಾಕಷ್ಟು ಆಹ್ಲಾದಕರವಾಗಿರುತ್ತದೆ. ಚಳಿಗಾಲದಲ್ಲಿ ಕನಿಷ್ಠ ತಾಪಮಾನ 19 ℃ ದಿಂದ ಗರಿಷ್ಠ 25 ℃ ವರೆಗೆ ಹೋಗುತ್ತದೆ. ಆಹ್ಲಾದಕರ ಹವಾಮಾನ ಇರುವದರಿಂದ ಪ್ರವಾಸಿಗರು ಚಳಿಗಾಲದಲ್ಲಿ ಬನವಾಸಿಯತ್ತ ಪ್ರಯಾಣ ಬೆಳೆಸುವದು ಸೂಕ್ತ.