Search
  • Follow NativePlanet
Share
ಮುಖಪುಟ » ಸ್ಥಳಗಳು » ಅಯೋಧ್ಯಾ » ಹವಾಮಾನ

ಅಯೋಧ್ಯಾ ಹವಾಮಾನ

ಉತ್ತರ ಭಾರತದ ಇತರ ನಗರಗಳಂತೆ ನವಂಬರ್ ನಿಂದ ಮಾರ್ಚ್ ತನಕ ಇಲ್ಲಿಗೆ ಭೇಟಿ ನೀಡಬಹುದು. ವರ್ಷದ ಇತರ ಸಮಯದಲ್ಲಿ ವಾತಾವರಣ ಬಿಸಿ ಹಾಗೂ ಶುಷ್ಕವಾಗಿರುತ್ತದೆ. ವಾತಾವರಣ ಹೀಗಿದ್ದರೂ ಅಯೋಧ್ಯಾ ಪ್ರಸಿದ್ಧ ಯಾತ್ರಾಸ್ಥಳವಾಗಿರುವ ಕಾರಣ ವರ್ಷವಿಡೀ ಇಲ್ಲಿಗೆ ಭಕ್ತಾದಿಗಳು ಆಗಮಿಸುತ್ತಾರೆ.

ಬೇಸಿಗೆಗಾಲ

ಮಾರ್ಚ್ ನಿಂದ ಜೂನ್ ತನಕ ಇರುವ ಬೇಸಿಗೆ ಋತು ಅತ್ಯಂತ ಬಿಸಿಯಾಗಿರುತ್ತದೆ. ಈ ವೇಳೆ ಮರ್ಕ್ಯುರಿ ಮಟ್ಟವು 47 ಡಿಗ್ರಿ ಸೆಲ್ಸಿಯಸ್ ತನಕ ತಲುಪುತ್ತದೆ. ತಾಪಮಾನ 29 ಡಿಗ್ರಿ ಸೆಲ್ಸಿಯಸ್ ನಿಂದ 47 ಡಿಗ್ರಿ ಸೆಲ್ಸಿಯಸ್ ತನಕವಿರುತ್ತದೆ.

ಮಳೆಗಾಲ

ಜುಲೈನಿಂದ ಸಪ್ಟೆಂಬರ್ ತನಕ ಅಯೋಧ್ಯಾದಲ್ಲಿ ಮಳೆಯಾಗುತ್ತದೆ. ಈ ಅವಧಿಯಲ್ಲಿ ಹವಾಮಾನ ತೇವ ಮತ್ತು ಆರ್ದ್ರತೆಯಿಂದ ಕೂಡಿರುತ್ತದೆ. ಮಳೆಯಿಂದಾಗಿ ಪ್ರದೇಶವೆಲ್ಲಾ ಕೆಸರುಮಯವಾಗುವ ಕಾರಣ ಜಾರುವ ರಸ್ತೆಗಳ ಬಗ್ಗೆ ಎಚ್ಚರಿಕೆ ವಹಿಸಬೇಕಾಗುತ್ತದೆ.

ಚಳಿಗಾಲ

ಡಿಸೆಂಬರ್ ನಿಂದ ಫೆಬ್ರವರಿವರೆಗೆ ಚಳಿಗಾಲವಿರುತ್ತದೆ. ಚಳಿಗಾದಲ್ಲಿ ತುಂಬಾ ತಂಪಾದ ಹವಾಮಾನವಿರುತ್ತದೆ. ಈ ವೇಳೆ ತಾಪಮಾನ 10 ಡಿಗ್ರಿ ಸೆಲ್ಸಿಯಸ್ ನಿಂತ ಕೆಳಗಿರುತ್ತದೆ. ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆಯಿರುವುದರಿಂದ ದಿನವು ಹಿತಕರವಾಗಿರುತ್ತದೆ.