Search
  • Follow NativePlanet
Share
ಮುಖಪುಟ » ಸ್ಥಳಗಳು » ಔರಂಗಾಬಾದ್ » ಹವಾಮಾನ

ಔರಂಗಾಬಾದ್ ಹವಾಮಾನ

ಔರಂಗಬಾದ್ ಸಮಶೀತೋಷ್ಣದ, ಹಿತವಾದ ಮತ್ತು ಮಿತವಾದ ಆರ್ದ್ರತೆಯನ್ನು ವರ್ಷಪೂರ್ತಿ ಹೊಂದಿರುತ್ತದೆ. ಚಳಿಗಾಲವು ಔರಂಗಬಾದಿಗೆ ಭೇಟಿ ಕೊಡಲು ಅತ್ಯುತ್ತಮ ಸಮಯವಾಗಿದೆ.

ಬೇಸಿಗೆಗಾಲ

ಮಾರ್ಚ್ ನಿಂದ ಮೇ ವರೆಗಿನ ಅವಧಿಯು ಬೇಸಿಗೆಯನ್ನು ಒಳಗೊಂಡಿರುತ್ತದೆ. ಔರಂಗಬಾದಿನಲ್ಲಿ ಬೇಸಿಗೆಯು ಸಾಮಾನ್ಯವಾಗಿ 37° ಯಿಂದ  21° ಸೆಲ್ಶಿಯಸ್ ನಡುವಿನ ಉಷ್ಣಾಂಶವನ್ನು ಹೊಂದಿದ್ದು, ಬಿಸಿಲಿನಿಂದ ಕೂಡಿರುತ್ತದೆ. ಒಮ್ಮೊಮ್ಮೆ ಉಷ್ಣಾಂಶವು ಗರಿಷ್ಠ 42° ಸೆಲ್ಶಿಯಸ್ ವರೆಗೆ ಏರಿಕೆ ಕಾಣುವುದುಂಟು. ಈ ಸಂದರ್ಭದಲ್ಲಿ ಪ್ರವಾಸಿಗರು ಔರಂಗಬಾದಿಗೆ ಹೋಗುವುದನ್ನು ಮುಂದೂಡುವುದು ಉತ್ತಮ.

ಮಳೆಗಾಲ

ಮಳೆಗಾಲವು ಬೇಸಿಗೆಯ ನಂತರ ಬರುವ ಕಾಲವಾಗಿದ್ದು, ಜೂನ್ ನಿಂದ ಸೆಪ್ಟಂಬರ್ ವರೆಗೆ ನಾಲ್ಕು ತಿಂಗಳುಗಳ ಕಾಲ ಮತ್ತು ಅದಕ್ಕು ಮಿಗಿಲಾಗಿ ಇರುತ್ತದೆ. ಈ ಕಾಲದಲ್ಲಿ ಗಣನೀಯವಾದ ಮಳೆ ಬೀಳುವುದರಿಂದ ತಾಪಮಾನವು ಕಡಿಮೆಯಾಗುತ್ತದೆ. ಮಳೆಯು ಇಲ್ಲಿನ ಪ್ರದೇಶವನ್ನು ನಯನ ಮನೋಹರವನ್ನಾಗಿ ಮಾಡುತ್ತದೆ. ಈ ಕಾಲದಲ್ಲಿ ಸುರಿಯುವ ಜಡಿಮಳೆಯನ್ನು ನೀವು ಸಹಿಸಿಕೊಳ್ಳುವುದಾದಲ್ಲಿ, ನಿಮ್ಮ ಪ್ರವಾಸಕ್ಕೆ ಇದು ಹೇಳಿ ಮಾಡಿಸಿದ ಸಮಯವಾಗಿದೆ.

ಚಳಿಗಾಲ

ಔರಂಗಬಾದಿನಲ್ಲಿ ಚಳಿಗಾಲವು ಪ್ರವಾಸಕ್ಕೆ ಮತ್ತು ಸುತ್ತಾಡುವವರಿಗೆ ಒಳ್ಳೆಯ ಕಾಲವಾಗಿದೆ. ನವೆಂಬರ್ ನಿಂದ ಫೆಬ್ರವರಿವರೆಗಿನ ಕಾಲವು ಇಲ್ಲಿ ಚಳಿಗಾಲವಾಗಿದೆ. ಈ ಕಾಲದಲ್ಲಿ ಇಲ್ಲಿನ ಉಷ್ಣಾಂಶವು ಕನಿಷ್ಠ 10° ಸೆಲ್ಶಿಯಸ್ ಇದ್ದು ಅತ್ಯಂತ ಹಿತವಾಗಿರುತ್ತದೆ. ಅಕ್ಟೋಬರ್ ನಿಂದ ಮಾರ್ಚ್ ವರೆಗಿನ ಕಾಲವು ಔರಂಗಬಾದಿಗೆ ಭೇಟಿ ಕೊಡಲು ಅತ್ಯುತ್ತಮ ಕಾಲವಾಗಿದೆ. ಚಳಿಗಾಲದ ಉಷ್ಣಾಂಶವು ಈ ಊರಿನಲ್ಲಿ ಸುತ್ತಾಡಲು ಅತ್ಯಂತ ಪ್ರಶಸ್ತವಾಗಿರುತ್ತದೆ.