Search
  • Follow NativePlanet
Share
ಮುಖಪುಟ » ಸ್ಥಳಗಳು» ಔರಂಗಾಬಾದ್-ಬಿಹಾರ್

ಔರಂಗಾಬಾದ್ : ಬಿಹಾರಿನ ಅತ್ಯಂತ ಆಕರ್ಷಣೀಯ ನಗರ

12

ಔರಂಗಾಬಾದ್ ಬಿಹಾರಿನ ಅತ್ಯಂತ ಆಕರ್ಷಣೀಯ ನಗರಗಳಲ್ಲೊಂದು. ಔರಂಗಾಬಾದ್ ನಗರವು ಭವ್ಯ ಚಾರಿತ್ರಿಕ ಇತಿಹಾಸಗಳನ್ನು ಹೊಂದಿದೆ. ಔರಂಗಾಬಾದ್ ನಗರದ ಹಿಂದಿನ ಇತಿಹಾಸವನ್ನು ಅವಲೋಕಿಸಿದರೆ ಪ್ರವಾಸಿಗರಿಗೆ ನಗರದ ವೈಭವದ ಇತಿಹಾಸದ ಮೆಲುಕು ಹಾಕುವಂತಾಗುತ್ತದೆ. ಈ ನಗರವು ಭಾರತ ದೇಶ ಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರನ್ನು ನೀಡಿದೆ. ಡಾ.ರಾಜೇಂದ್ರ ಪ್ರಸಾದ್ ಇಲ್ಲಿ ಬಹು ವರ್ಷ ಕಳೆದಿದ್ದರು. ಬಿಹಾರದ ಮಾಜಿ ಮುಖ್ಯಮಂತ್ರಿ ಶ್ರೀ ಸತ್ಯೇಂದ್ರ ನಾರಾಯಣ್ ಸಿಂಗ್ ಅವರ ತವರೂರು ಕೂಡಾ ಇದು. ಇವರು ಕೂಡಾ ಸ್ವಾತಂತ್ರ್ಯ ಹೋರಾಟಕ್ಕೆ ಗಣನೀಯವಾಗಿ ದುಡಿದಿದ್ದರು. ಈ ನಗರವು ರಸ್ತೆಯ ಉತ್ತಮ ಸಂಪರ್ಕವನ್ನು ಹೊಂದಿದೆ, ಮೂಲಭೂತವಾಗಿ ಔರಂಗಾಬಾದ್ ಪ್ರವಾಸೋದ್ಯಮಕ್ಕೆ ಇದರಿಂದಾಗಿ ಉತ್ತಮ ಸಹಾಯವಾಗಿದೆ.

ಔರಂಗಾಬಾದ್ ನಗರವು ಎನ್ ಎಚ್ 2, ಎನ್ ಎಚ್ 98 ಮತ್ತು ಎನ್ ಎಚ್ 139 ಇಲ್ಲಿಂದ ಹಾದು ಹೋಗುತ್ತದೆ.  ಔರಂಗಾಬಾದ್ ನಗರದ ಪ್ರಮುಖ ವಾಸಸ್ಥಳವೆಂದರೆ ಕ್ಲಬ್ ರಸ್ತೆ, ನ್ಯೂ ಎರಿಯಾ ಮತ್ತು ಕರ್ಮಾ ರಸ್ತೆ. ಮಗಧಿ ಮತ್ತು ಹಿಂದಿ ಭಾಷೆಯನ್ನು ಇಲ್ಲಿ ಹೆಚ್ಚಾಗಿ ಬಳಸಿಕೊಳ್ಳುತ್ತಾರೆ. ಔರಂಗಾಬಾದ್ 1972ರಲ್ಲಿ ಗಯಾ ಜಿಲ್ಲೆಯಿಂದ ಬೇರ್ಪಟ್ಟ ನಂತರ ಹೊಸ ಜಿಲ್ಲೆಯಾಗಿ ಉದಯವಾಯಿತು.

ಔರಂಗಾಬಾದ್ ಪ್ರವಾಸೋದ್ಯಮ ಥಳಥಳಿಸುವ ನೈಸರ್ಗಿಕ ಸಂಪತ್ತನ್ನು ಹೊಂದಿದ್ದು ಪ್ರಮುಖವಾಗಿ ಪೂನ್ ಪೂನ್ ನದಿಯು ಇಲ್ಲಿ ಹರಿಯುತ್ತದೆ, ಅಲ್ಲದೇ ಚಲ್ಲೋ ಮತ್ತು ದ್ವಾರಪಾಲ್ ಬೆಟ್ಟಗುಡ್ಡಗಳ ಮೂಲಕ ಹರಿದು ಹೋಗುವುದರಿಂದ ಮೈಜುಮ್ಮೆನಿಸುತ್ತದೆ. ನೈಸರ್ಗಿಕವಾಗಿ ಅದ್ಭುತವಾಗಿರುವುದರಿಂದ ಸ್ಪಟಿಕ್, ಗೋಮಡ್ ಮತ್ತು ಗಾರ್ನೆಟ್ ಕಲ್ಲುಗಳು ಇಲ್ಲಿ ಲಭ್ಯವಾಗುತ್ತದೆ. ಔರಂಗಾಬಾದ್ ಇತಿಹಾಸವನ್ನು ತಿರುಚಿದರೆ ಮಗಧ ಅರಸನ ಕಾಲಕ್ಕೆ ಹೋಗುತ್ತದೆ, ಇವರು ದೇಶದ ನಾಲ್ಕನೇ ಒಂದು ಭಾಗವನ್ನು ಆಳಿದ್ದರು. ಅಶೋಕ ಮಹಾರಾಜ, ಚಂದ್ರಗುಪ್ತ ಮೌರ್ಯ ಔರಂಗಾಬಾದನ್ನು ಆಳಿದ್ದರು. ಸಾಂಸ್ಕ್ಕ್ರುತಿಕ ವೈಭವ ಔರಂಗಾಬಾದ್ ಇತಿಹಾಸಕ್ಕಿದೆ. ಇಲ್ಲಿನ ಮಣ್ಣು ವ್ಯವಸಾಯಾಕ್ಕೆ ಅತ್ಯಂತ ಯೋಗ್ಯವಾಗಿದೆ. ಇಲ್ಲಿ ಭತ್ತ, ಗೋಧಿ ಮತ್ತು ಕಬ್ಬನ್ನು ಬೆಳೆಯುತ್ತಾರೆ. ಇಲ್ಲಿನ ಗದ್ದೆಗಳು ಫಲವತ್ತಾಗಿದ್ದು ಉತ್ತಮ ನೀರಾವರಿ ಸೌಲಭ್ಯವನ್ನು ಹೊಂದಿರುವುದರಿಂದ ಕೃಷಿಗೆ ಯೋಗ್ಯವಾಗಿದೆ.

ಔರಂಗಾಬಾದ್ ಪ್ರವಾಸೋದ್ಯಮ ಪ್ರವಾಸಿಗರಿಗೆ ಸ್ಮಾರಕಗಳು, ಪುರಾತನ ದೇವಾಲಯಗಳು ಮತ್ತು ಮಸೀದಿಗಳ ಭವ್ಯ ಪರಂಪರೆಯನ್ನು ಉಣಬಡಿಸುತ್ತದೆ. ಅತ್ಯುತ್ತಮ ದರ್ಜೆಯ ಸಂಪರ್ಕ ಔರಂಗಾಬಾದ್ ನಗರಕ್ಕಿರುವುದರಿಂದ ಪ್ರವಾಸೋದ್ಯಮ ಇಲ್ಲಿನ ಪ್ರಮುಖ ಆದಾಯದ ದಾರಿಯಾಗಿದೆ. ಪ್ರವಾಸಿಗರ ಸಂಖ್ಯೆ ವರ್ಷ ವರ್ಷ ಏರಿಕೆಯಾಗುತ್ತದೆ. ಹಲವು ಸಂತರು ಪ್ರಮುಖವಾಗಿ ಚ್ಯಾವಣ್ ಮತು  ಭೃಗು ಎನ್ನುವ ಸಂತರು ಇಲ್ಲಿನ ನೈಸರ್ಗಿಕ ಸೌಂದರ್ಯಕ್ಕೆ ಮಾರು ಹೋಗಿ ಹೆಚ್ಚಿನ ಸಮಯ ಕಳೆದಿದ್ದರು. ಆ ಮೂಲಕ ಭಗವಂತನ ಧ್ಯಾನ ಮತ್ತು ಜಪತಪಗಳನ್ನು ಮಾಡುತ್ತಿದ್ದರು.

ಮುಸ್ಲಿಮರ ಪ್ರಮುಖ ಸೂಫಿಗಳೆಂದರೆ ಶಾ ಸದ್ರುದ್ದೀನ್ ಸೂಫಿ, ಸಯ್ಯದ್ ಮೊಹಮ್ಮದ್ ಅಲ್ಕಾದ್ರಿ ಬಗ್ಗುದಿ, ಶಾ ಜಲಾಲುದ್ದೀನ್ ಕಬೀರ್ ಪಾನಿಪತ್ ಮತ್ತು ಮೊಹಮ್ಮದ್ ಸಯೀದ್ ಸ್ಯಾಲಕೋಟಿ ಮುಂತಾದವರು ಈ ಪ್ರದೇಶದಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದರು. ಎಲ್ಲರೂ ಅದ್ಭುತ ಶಕ್ತಿಯನ್ನು ಹೊಂದಿದ್ದರು. ಅವರೆಲ್ಲರೂ ತಮ್ಮದೇ ಆದ ದಾರಿಯಲ್ಲಿ ಸಮಾಜ ಸೇವೆ ಸಲ್ಲಿಸಿದ್ದರು. ಸಯ್ಯದ್ ಮೊಹಮ್ಮದ್ ಅಲ್ಕಾದ್ರಿ ಬಗ್ಗುದಿಯವರನ್ನು ಅಮ್ಜರ್ ಶರೀಫ್ ಮತ್ತು ಮೊಹಮ್ಮದ್ ಸಯೀದ್ ಸ್ಯಾಲಕೋಟಿ ಅವರನ್ನು ಸಿಹುಲಿ ಎನ್ನುವ ಹಳ್ಳಿಯಲ್ಲಿ ಸಮಾಧಿ ಮಾಡಲಾಗಿತ್ತು.

ಇವರಿಬ್ಬರೂ ಹಿಂದೂ - ಮುಸ್ಲಿಂ ಧಾರ್ಮಿಕ ಸಹಿಷ್ಣುವಿತೆಗೆ ಹೆಸರುವಾಸಿಯಾಗಿದ್ದರು, ಇವರ ನಿಧನದ ನಂತರವೂ ಜನರು ಶಾಂತಿಯಿಂದ ಇದ್ದರು.  ಔರಂಗಾಬಾದ್ ಪ್ರವಾಸೋದ್ಯಮಕ್ಕಿರುವ ಇನ್ನೊಂದು ಗರಿಯೆಂದರೆ ನಗರ ಜೀವನದ ಧುಮಹನಿ ಮೇಳ. ಈ ಮೇಳವನ್ನು ಓಬ್ರಾದಲ್ಲಿ ಆಯೋಜಿಸಲಾಗುತ್ತದೆ ಮತ್ತು ಈ ಸಮಯದಲ್ಲಿ ಜಾನುವಾರುಗಳ ಮಾರಾಟ ನಡೆಯುತ್ತದೆ. ಕಾರ್ಪೆಟ್ ಕಾರ್ಖಾನೆ ಓಬ್ರಾದ ಪ್ರಮುಖ ಆಕರ್ಷಣೆ, ಇದು ಪುನ್ ಪುನ್ ನದಿಯ ತಟದಲ್ಲಿದೆ, ಇದು ಹಿಂದೂಗಳ ಪವಿತ್ರ ಸ್ಥಳವೂ ಕೂಡಾ.

ಔರಂಗಾಬಾದ್ ತಲುಪುವುದು ಹೇಗೆ

ಔರಂಗಾಬಾದ್ ನಗರ ಎಲ್ಲಾ ಕಡೆಯಿಂದಲೂ ಉತ್ತಮ ಸಂಪರ್ಕದಲ್ಲಿದೆ. ಔರಂಗಾಬಾದ್ ನಗರದಲ್ಲಿ ಅತ್ಯುತ್ತಮ ಎನ್ನಬಹುದಾದ ಮೂಲಭೂತ ಸೌಲಭ್ಯವಿದೆ, ಎಲ್ಲಾ ಮಾದರಿಯ ಸಂಪರ್ಕವನ್ನು ಹೊಂದಿದೆ.

ಔರಂಗಾಬಾದ್ ಭೇಟಿ ನೀಡಲು ಯಾವ ಸಮಯ ಸೂಕ್ತ

ಔರಂಗಾಬಾದ್ ತಲುಪಲು ಅತ್ಯಂತ ಸೂಕ್ತ ಸಮಯವೆಂದರೆ ಅಕ್ಟೋಬರ್ ನಿಂದ ಮಾರ್ಚ್ ತಿಂಗಳವರೆಗೆ. ಈ ಸಮಯದಲ್ಲಿ ವಾತಾವರಣ ಸೂಕ್ತವಾಗಿ, ಆಹ್ಲಾದಕರವಾಗಿದ್ದು ಪ್ರಯಾಣಿಸಲು ಉತ್ತಮವಾಗಿರುತ್ತದೆ.

ಔರಂಗಾಬಾದ್-ಬಿಹಾರ್ ಪ್ರಸಿದ್ಧವಾಗಿದೆ

ಔರಂಗಾಬಾದ್-ಬಿಹಾರ್ ಹವಾಮಾನ

ಉತ್ತಮ ಸಮಯ ಔರಂಗಾಬಾದ್-ಬಿಹಾರ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಔರಂಗಾಬಾದ್-ಬಿಹಾರ್

  • ರಸ್ತೆಯ ಮೂಲಕ
    ಔರಂಗಾಬಾದ್ ನಲ್ಲಿ ಉತ್ತಮ ರಸ್ತೆಗಳು ಇರುವುದರಿಂದ ಮತ್ತು ರಾಷ್ಟೀಯ ಹೆದ್ದಾರಿಗಳು ಇರುವುದರಿಂದ ರಸ್ತೆ ಮೂಲಕ ಪ್ರಯಾಣಿಸುವುದನ್ನು ಆನಂದಿಸ ಬಹುದಾಗಿದೆ. ಬಸ್ ಮತ್ತು ರಿಕ್ಷಾ ಸಂಪರ್ಕ ನಗರಕ್ಕೆ ಉತ್ತಮವಾಗಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಔರಂಗಾಬಾದ್ ರೈಲ್ವೇ ನಿಲ್ದಾಣ ಉತ್ತಮ ಸಂಪರ್ಕದಲ್ಲಿದೆ. ಔರಂಗಾಬಾದ್ ನಗರಕ್ಕೆ ದೆಹಲಿ, ಮುಂಬೈ, ಪುಣೆ, ಹೈದರಾಬಾದ್ ಮುಂತಾದ ನಗರಗಳಿಂಡ ನೇರ ರೈಲಿನ ಸಂಪರ್ಕವಿದೆ. ವೀಲ್ ಕುರ್ಚಿಯನ್ನು ಬೇಡಿಕೆಯ ಮೇಲೆ ಇಲ್ಲಿ ಪಡೆಯ ಬಹುದಾಗಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಔರಂಗಾಬಾದ್ ನಗರದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಈ ಹೊಸ ವಿಮಾನ ನಿಲ್ದಾಣದ ಕಟ್ಟಡ 2008ರಲ್ಲಿ ನಗರದ ಹೊರವಲಯದಲ್ಲಿ ಉದ್ಘಾಟನೆಯಾಯಿತು. ಈ ವಿಮಾನ ನಿಲ್ದಾಣದಲ್ಲಿ ಆಧುನಿಕ ಸೌಲಭ್ಯವಿದ್ದು ಉತ್ತಮ ಸಂಪರ್ಕವನ್ನೂ ಹೊಂದಿದೆ. ಭಾರತೀಯ ವಾಯು ಪಡೆಯ ಯುದ್ದ ವಿಮಾನಗಳು ಚಿಕಲ್ತಾನ ವಿಮಾನ ನಿಲ್ದಾಣದಲ್ಲಿ ಇಂಧನ ತುಂಬಿಸಿ ಕೊಳ್ಳುತ್ತದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri