ನಮ್ಮ ಬೆಂಗಳೂರು ಬಗ್ಗೆ ನಿಮಗೆಷ್ಟು ಗೊತ್ತು?


ಬೆಂಗಳೂರು, ಸಿಲಿಕಾನ್ ಸಿಟಿ ಎಂದೆಲ್ಲಾ ಕರೆಯಲ್ಪಡುವ ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನಲ್ಲಿ ಬದುಕುಕಟ್ಟಿಕೊಳ್ಳಬೇಕೆಂಬ ಆಸೆ ಬಹಳಷ್ಟು ಜನರಿಗೆ ಇದೆ. ಅದಕ್ಕಾಗಿ ಬೆಂಗಳೂರಿನಲ್ಲೇ ಉದ್ಯೋಗವನ್ನು ಹುಡುಕಿಕೊಂಡು ಬರುತ್ತಾರೆ.

ಬೆಂಗಳೂರು

PC: Vinu Thomas

ವಿಜಯನಗರದ ಅರಸರ ಕಾಲದಲ್ಲಿ ಕೆಂಪೇಗೌಡರು ಬೆಂಗಳೂರನ್ನು ಕಟ್ಟಿದರು ಎನ್ನುವುದು ನಿಮಗೆ ಗೊತ್ತೆ ಇದೆ. ಶಹಾಜಿ ಬೋನ್ಸಲೆ, ಚತ್ರಪತಿ ಶಿವಾಜಿಯ ತಂದೆಯ ಆಡಳಿತದಲ್ಲಿತ್ತಂತೆ, ನಂತರ ಮೈಸೂರಿನ ತೆಕ್ಕೆಗೆ ಬಂತು, ಟಿಪ್ಪುನ ನಂತರ ಬ್ರಿಟಿಷರ ವಶವಾಯಿತು ಬೆಂಗಳೂರು.

30ಅಡಿ ಎತ್ತರದಿಂದ ಮಕ್ಕಳನ್ನು ಕೆಳಗೆ ಬಿಸಾಡಿದ್ರೆ ಏನಾಗುತ್ತೆ ಇಲ್ಲಿ, ವಿಚಿತ್ರ ಆದ್ರೂ ಸತ್ಯ

ಟ್ರಾಫಿಕ್ ಹೆಚ್ಚು

ಬೆಂಗಳೂರಿನ ಟ್ರಾಫಿಕ್ ಬಗ್ಗೆ ಅದನ್ನು ಅನುಭವಿಸಿದವರಿಗೆ ಗೊತ್ತು. ಬೆಂಗಳೂರಿನಲ್ಲಿ ಜನಸಂಖ್ಯೆಯೂ ಹೆಚ್ಚಾಗಿದೆ. ಪ್ರತಿಯೊಬ್ಬರಲ್ಲೂ ವಾಹನಗಳಿವೆ. ಹಾಗಾಗಿ ಇಲ್ಲಿ ಟ್ರಾಫಿಕ್ ಕೂಡಾ ತುಂಬಾನೇ ಇದೆ. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಬೇಕಾದರೆ ಗಂಟೆಗಟ್ಟಲೆ ಹಿಡಿಯುತ್ತದೆ.

ಸಿಲಿಕಾನ್ ಸಿಟಿ ಅನ್ನೋದು ಯಾಕೆ?

ನಮ್ಮ ಬೆಂಗಳೂರನ್ನು ಸಿಲಿಕಾನ್ ಸಿಟಿ ಎನ್ನಲು ಕಾರಣವೇನು ಗೊತ್ತಾ ಭಾರತದಲ್ಲಿ ಹೆಚ್ಚು ಐಟಿ ಕಂಪನಿಗಳೀರುವುದು ಬೆಂಗಳೂರಿನಲ್ಲಿ ಅದಕ್ಕಾಗಿ ಇದನ್ನು ಸಿಲಿಕಾನ್ ಸಿಟಿ ಎನ್ನುತ್ತಾರೆ. ಅತ್ಯಧಿಕ ಇಂಜಿನಿಯರಿಂಗ್ ಕಾಲೇಜ್ ಇರುವ ನಗರವೂ ಇದಾಗಿದೆ.

ಓಂಕಾರನಾದ ಕೇಳಿಸುವ ಇಲ್ಲಿ ರಾತ್ರಿ ವೇಳೆ ಏನೆಲ್ಲಾ ನಡೆಯುತ್ತೆ ಗೊತ್ತಾ

ತಂಪಾದ ವಾತಾವರಣ

PC: SMit224

ಹೆಚ್ಚು ಜನರು ಕೆಲಸ ಹರಸಿಕೊಂಡು ಬರುವುದು ಬೆಂಗಳೂರಿಗೆ. ಇಲ್ಲಿನ ವಾತಾವರಣಕ್ಕೆ ಜನರು ಮಾರುಹೋಗುತ್ತಾರೆ. ಬೆಂಗಳೂರು ಸಮುದ್ರಮಟ್ಟದಿಂದ ೩ ಸಾವಿರ ಅಡಿ ಎತ್ತರದಲ್ಲಿದೆ. ಹಾಗಾಗಿ ಇಲ್ಲಿ ಯಾವಾಗಲೂ ತಂಪಾದ ವಾತಾವರಣ ಇರುವುದು.

ಕನ್ನಡ ಮಾತಾಡೋರು ಕಡಿಮೆ

ಇಲ್ಲಿ ಹೆಚ್ಚಾಗಿ ಹೊರಗಿನ ರಾಜ್ಯದವರು ಬಂದು ನೆಲೆಸಿರುವುದರಿಂದ ಇಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಕಡಿಮೆ. ಇನ್ನು ಕನ್ನಡಿಗರು ಈಗಿನ ಜೀವನ ಶೈಲಿಯ ಜೊತೆಗೆ ತಮ್ಮನ್ನು ಬದಲಾಯಿಸಿಕೊಂಡಿದ್ದಾರೆ. ಹಾಗಾಗಿ ಕನ್ನಡ ಬಂದರೂ ಕನ್ನಡ ಭಾಷೆಯನ್ನು ಮಾತನಾಡೊಲ್ಲ.

ಹೆಚ್ಚಿನ ಪಬ್‌ಗಳಿವೆ

ಬೆಂಗಳೂರಿನಲ್ಲಿ ಜನರ ಜೀವನ ಶೈಲಿ ದಿನದಿಂದ ದಿನಕ್ಕೆ ಬದಲಾಗುತ್ತಾ ಇದೆ. ಕೆಲಸಕ್ಕೆಂದು ಹೊರಗಿನ ರಾಜ್ಯದಿಂದ ಬಂದಂತಹವರ ಸಂಸ್ಕೃತಿಯನ್ನುಇಲ್ಲಿನ ಕನ್ನಡಿಗರು ಅನುಸರಿಸುತ್ತಿದ್ದಾರೆ. ತಮ್ಮ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಬೆಂಗಳೂರಿನಲ್ಲಿ ಪಬ್‌ಗಳ ಸಂಖ್ಯೆಯೂ ಹೆಚ್ಚು ಇದೆ. ಪ್ರತಿ ವಾರಾಂತ್ಯದಲ್ಲಿ ಯುವಕ ಯುವತಿಯರು ಪಬ್‌ನಲ್ಲಿ ಕಾಲಕಳೆಯುತ್ತಾ ಇರುತ್ತಾರೆ.

Have a great day!
Read more...

English Summary

Bangalore is sometimes referred to as the "Silicon Valley of India" (or "IT capital of India") because of its role as the nation's leading information technology