9 ಬಗೆಯ ವಿಷದಿಂದ ತಯಾರಾದ ವಿಗ್ರಹ ಇದು; ಅಭಿಷೇಕದ ತೀರ್ಥ ಕುಡಿದ್ರೆ ಏನಾಗುತ್ತೆ ?


ನೀವು ಕಲ್ಲಿನ ದೇವರ ವಿಗ್ರಹ ನೋಡಿರುವಿರಿ, ಪಂಚಲೋಹದ, ಲೋಹದ ವಿಗ್ರಹವನ್ನು ನೋಡಿರುವಿರಿ. ಆದರೆ ಇಂದು ನಾವು ಹೇಳ ಹೊರಟಿರುವುದು ವಿಷದಿಂದ ತಯಾರಾದ ವಿಗ್ರಹದ ಬಗ್ಗೆ. ಇಂದಿಗೂ ಆ ವಿಗ್ರಹಕ್ಕೆ ಅಭಿಷೇಕ ಮಾಡಿದ ಪ್ರಸಾದವನ್ನು ತೆಗೆದುಕೊಂಡರೆ ಎಂಥಹಾ ರೋಗವೂ ಗುಣಮುಖವಾಗುತ್ತಂತೆ. ಮಹಾಪುರುಷರಲ್ಲೊಬ್ಬರು ಇಲ್ಲಿನ ಈ ಅದ್ಭುತ ವಿಗ್ರಹವನ್ನು ನಿರ್ಮಿಸಿದರಂತೆ. ಹಾಗಾದ್ರೆ ಆ ವಿಗ್ರಹ ಎಲ್ಲಿದೆ ಅದನ್ನು ತಯಾರಿಸಿದ್ದು ಯಾರೂ ಎನ್ನುವುದರ ಬಗ್ಗೆ ತಿಳಿಯೋಣ.

ಬೋಗರ್‌ನಾಥ್

PC: Arulraja

ಬೋಗರ್‌ನಾಥರ್ ಜಗತ್ತಿನ ಮಹಾ ಸಿದ್ಧವ್ಯಕ್ತಿಗಳಲ್ಲಿ ಒಬ್ಬರು. ಬೋಗರ್‌ ತಮಿಳುನಾಡಿನವರು ಅಲ್ಲಿನ ವಿಶ್ವಕರ್ಮ ಜನಾಂಗಕ್ಕೆ ಸೇರಿದವರಾಗಿದ್ದಾರೆ. ಕ್ರಿ.ಪೂ. 3000ದಲ್ಲಿ ಈ ಮಹಾನ್ ವೈದ್ಯರು ಇದ್ದರು ಎನ್ನಲಾಗುತ್ತದೆ. ವೇದ, ಯೋಗ ಆಯುರ್ವೇದದಲ್ಲಿ ಬೋಗರ್‌ ಪರಿಣಿತರಾಗಿದ್ದರು.

ಇಲ್ಲಿ ಮದುವೆಯಾದವರು ಕೆಲವೇ ಗಂಟೆಯಲ್ಲಿ ವಿಧವೆಯಾರಾಗ್ತಾರೆ !

ಸಪ್ತಕಾಂಡ ಕೃತಿ

PC: youtube

ಸುಮಾರು 4 ಸಾವಿರಕ್ಕೂ ಅಧಿಕ ಗಿಡಮೂಲಿಕೆಗಳನ್ನು ಕಂಡುಹಿಡಿದು ಸಪ್ತಕಾಂಡ ಕೃತಿಯಲ್ಲಿ ವಿವರಿಸಿದ್ದಾರೆ. ಚೀನಾದಲ್ಲೂ ನೆಲೆಸಿದ್ದರಂತೆ. ಬೋಗರ್ ಭಾರತದಲ್ಲಿ ಮಾತ್ರವಲ್ಲ ಚೀನಾದಲ್ಲೂ ಪ್ರಸಿದ್ಧರಾಗಿದ್ದರು.

ಎಲ್ಲಿದೆ ಈ ವಿಗ್ರಹ

PC: youtube

ನವಪಾಶಾನ ವಿಗ್ರಹ ಇರುವುದು ತಮಿಳುನಾಡಿನ ಪಳನಿ ದೇವಾಲಯದಲ್ಲಿರುವ ಪಳನಿಸ್ವಾಮಿ ವಿಗ್ರಹ. ತಮಿಳುನಾಡಿನ ದಿಂಡುಗಲ್ ಜಿಲ್ಲೆಯಲ್ಲಿರುವ ಪ್ರಸಿದ್ಧ ಪುರಾತನ ಮುರುಗನ್ ದೇವಸ್ಥಾನ. ಇಲ್ಲಿ ಮುರುಗನ್‌ನ್ನು ಪಳನಿ ಸ್ವಾಮಿ ಎಂದು ಕರೆಯುತ್ತಾರೆ.

ಧಾರವಾಡದ ನುಗ್ಗೇಕೇರಿ ಆಂಜನೇಯನ ಸನ್ನಿಧಿಗೆ ಹೋದ್ರೆ ಇಷ್ಟಾರ್ಥ ಸಿದ್ಧಿ

ತೀರ್ಥದಿಂದ ಸಕಲ ರೋಗ ಗುಣಮುಖ

PC: SivRami

ಇಲ್ಲಿ ಪಳನಿ ಸ್ವಾಮಿ ವಿಗ್ರಹಕ್ಕೆ ಹಾಲಿನ ಅಭಿಷೇಕ ಮಾಡಿ ಅದರ ತೀರ್ಥವನ್ನು ಸ್ವೀಕರಿಸಿದರೆ ಎಂಥಹಾ ರೋಗವೂ ಗುಣಮುಖವಾಗುತ್ತದಂತೆ. ಹಾಗಾಗಿ ಇಲ್ಲಿಗೆ ಸಾಕಷ್ಟು ಜನ ಬರುತ್ತಾರೆ. ಇಲ್ಲಿನ ಅಭಿಷೇಕ ತೀರ್ಥಕ್ಕೆ ಸಾಕಷ್ಟು ಬೇಡಿಕೆ ಇದೆ. ನವಪಾಶಾನವನ್ನು ಮುಟ್ಟಿದ ನೀರು ಕೂಡಾ ಚರ್ಮರೋಗ ಗುಣಪಡಿಸುತ್ತದಂತೆ.

ನವಪಾಶನ

PC:SivRami

ನವಪಾಶನ ಅಂದರೆ 9 ಬಗೆಯ ವಿಷಯುಕ್ತ ರಸ. ಇದು ವಿಷಯುಕ್ತ ಗಿಡಮೂಲಿಕೆಗಳಿಂದ ರಸವಿದ್ಯೆ ಮೂಲಕ ತಯಾರಿಸಿದ್ದು. ಬೋಗರ್ ಈ ೯ ಬಗೆಯ ವಿಷವನ್ನು ಸೇರಿಸಿ ಒಂದು ಔಷಧವನ್ನು ಸಿದ್ಧಪಡಿಸಿದ್ದರು. ಆ ವಿಷಗಳಿಂದ ತಯಾರಿಸಿ ಔಷಧಿಯನ್ನು ಸೇವಿಸಿದ್ರೆ ಯಾವುದೇ ಕಾಯಿಲೆಯೂ ಗುಣಮುಖವಾಗುತ್ತಿತ್ತು..

ನವಪಾಶನ ಸಂಸ್ಕರಿಸಿದ ಸ್ಥಳ

9 ವಿಷಗಳನ್ನು ಸೇರಿಸಿ ವಿಗ್ರಹವನ್ನು ತಯಾರಿಸಲಾಗಿದೆ. ಅದು ಇಂದು ವಿಶ್ವವಿಖ್ಯಾತವಾಗಿದೆ. ನವಪಾಶನವನ್ನು ಸಂಸ್ಕರಿಸಿದ ಸ್ಥಳ ಇಂದಿಗೂ ಪಳನಿಯಲ್ಲಿದೆ. ದಾನಸಿಪ್ಪನ್ ದೇವಾಲಯ ಇರುವ ಸ್ಥಳವೇ ಅಂದು ಬೋಗಾರ್ ಮುರುಗನ್ ವಿಗ್ರಹವನ್ನು ಸಿದ್ಧಪಡಿಸಿದ ಸ್ಥಳ ಎನ್ನಲಾಗಿದೆ. ವಿಗ್ರಹವನ್ನು ಹುಲಿ ಹಾಲಿನಿಂದ ಅಭಿಷೇಕ ಮಾಡಿದ್ದರಂತೆ.

ಎಡಕಲ್ಲು ಗುಡ್ಡ ಸಿನಿಮಾದ ಶೂಟಿಂಗ್ ನಡೆದ ಎಡಕಲ್ಲು ಗುಹೆಗೆ ಹೋಗಿದ್ದೀರಾ?

Read More About: india travel temple tamilnadu

Have a great day!
Read more...

English Summary

The idol of the deity is said to be made of an amalgam of nine poisonous substances which forms an eternal medicine when mixed in a certain ratio.