ಧಾರವಾಡದ ನುಗ್ಗೇಕೇರಿ ಆಂಜನೇಯನ ಸನ್ನಿಧಿಗೆ ಹೋದ್ರೆ ಇಷ್ಟಾರ್ಥ ಸಿದ್ಧಿ


ಧಾರವಾಡದ ಹಾಗೂ ಸುತ್ತಮುತ್ತ ನೆಲೆಸಿರುವ ಜನರಿಗೆ ಧಾರವಾಡದ ನುಗ್ಗೇಕೇರಿ ದೇವಸ್ಥಾನದ ಮಹಿಮೆ ಬಗ್ಗೆ ಗೊತ್ತೇ ಇದೆ. ಇಲ್ಲಿನ ಜನರು ಕಷ್ಟಕಾರ್ಪಣ್ಯಗಳಿಂದ ಮುಕ್ತಿ ಕಾಣಲು ಇಲ್ಲಿಗೆ ಆಗಮಿಸುತ್ತಾರೆ. ಇಂದು ನಾವು ನುಗ್ಗೇಕೇರೆಯಲ್ಲಿರುವ ನುಗ್ಗೆಕೇರಿ ಆಂಜನೇಯ ದೇವಸ್ಥಾನದ ಬಗ್ಗೆ ತಿಳಿಸಲಿದ್ದೇವೆ.

ನುಗ್ಗೆಕೆರೆ

ನಗರದಿಂದ 10 ಕಿ.ಮೀ ದೂರದಲ್ಲಿ ಈ ದೇವಾಲಯವಿದೆ. ನುಗ್ಗೆಕೆರೆಗೆ ಸಾಕಷ್ಟು ಬಸ್‌ಗಳು ಇವೆ. ಶನಿವಾರವಂತೂ ಈ ದೇವಸ್ಥಾನಕ್ಕೆ ಹೋಗುವ ಭಕ್ತರಿಗಾಗಿಯೇ ವಿಶೇಷ ಬಸ್‌ಗಳನ್ನು ಅಳವಡಿಸಲಾಗುತ್ತದೆ. ದೇವಸ್ಥಾನಕ್ಕೆ 2 ಕಿ.ಮೀ ದೂರದವರೆಗೆ ದೇವಾಲಯದ ಗೋಪುರ ಕಾಣಿಸುತ್ತದೆ.

ಜನಮೇಜಯ ಮಹಾರಾಜ ನಿರ್ಮಿಸಿದನು

PC:Narendra Sadhu 'मकरध्वज'

ನೂರಾರು ವರ್ಷಗಳ ಇತಿಹಾಸ ಹೊಂದಿರುವ ಈ ದೇವಾಲಯಕ್ಕೆ ಪೌರಾಣಿಕ ಕಥೆಯೂ ಇದೆ. ಈ ದೇವಾಲಯವನ್ನು ಜನಮೇಜಯ ಮಹಾರಾಜ ನಿರ್ಮಿಸಿದನು ಎನ್ನಲಾಗುತ್ತದೆ. ಇಲ್ಲಿನ ಆಂಜನೇಯನ ಮೂರ್ತಿಯನ್ನು ನಿರ್ಮಿಸಿದನು.

ಎಡಕಲ್ಲು ಗುಡ್ಡ ಸಿನಿಮಾದ ಶೂಟಿಂಗ್ ನಡೆದ ಎಡಕಲ್ಲು ಗುಹೆಗೆ ಹೋಗಿದ್ದೀರಾ?

ಋಷಿ ಮುನಿಯ ಕೋಪಕ್ಕೆ ತುತ್ತಾದ ಪರೀಕ್ಷಿತ ಮಹಾರಾಜ

PC:Manish Desai

ಜನಮೇಜಯನ ತಂದೆ ಪರೀಕ್ಷಿತ ಮಹಾರಾಜ ಭೇಟೆಯಾಡುವಾಗ ಹಸಿವು ಹಾಗೂ ಬಾಯಾರಿಕೆಯಿಂದ ಕಾಡಿನಲ್ಲಿ ಅಲೆದಾಡುತ್ತಾನೆ. ಆಗ ಋಷಿ ಮುನಿಯನ್ನು ನೋಡುತ್ತಾನೆ, ಮುನಿಯ ಬಳಿ ಹೋಗಿ ಮಾತನಾಡಿಸಬೇಕಾದರೆ ಋಷಿ ತಪೋನಿರತನಾಗಿರುವುದರಿಂದ ಯಾವುದೇ ರೀತಿಯಲ್ಲಿ ಸ್ಪಂದಿಸುವುದಿಲ್ಲ.

ಸಾವನ್ನಪ್ಪಿದ ಪರೀಕ್ಷಿತ ಮಹಾರಾಜ

ಇದರಿಂದ ಕೋಪಗೊಂಡ ರಾಜ ಅಲ್ಲೆ ಹರಿದಾಡುತ್ತಿದ್ದ ಹಾವನ್ನು ತೆಗೆದು ಋಷಿಯ ಮೇಲೆ ಹಾಕುತ್ತಾನೆ. ಋಷಿಯ ತಪಸ್ಸು ಭಂಗವಾಗುತ್ತದೆ. ಇದರಿಂದ ಕೋಪಗೊಂಡು ಮುನಿಯ ಕೋಪಕ್ಕೆ ಗುರಿಯಾಗುತ್ತಾನೆ. ಕೊನೆಗೆ ಅದೇ ಹಾವಿನಿಂದ ಕಚ್ಚಲ್ಪಟ್ಟು ಸಾವನ್ನಪ್ಪುತ್ತಾನೆ.

ಯಜ್ಞಕುಂಡದಲ್ಲಿ ಬಿದ್ದು ಸತ್ತ ಹಾವುಗಳು

ತಂದೆಯ ಸಾವಿಗೆ ಪ್ರತಿಕಾರಕ್ಕಾಗಿನ್ನು ಪಡೆಯಲು ಯಜ್ಞ ಮಾಡುತ್ತಾನೆ. ಸರ್ವ ಜಾತಿಯ ಹಾವುಗಳೆಲ್ಲಾ ಯಜ್ಞ ಕುಂಡದಲ್ಲಿ ಬಿದ್ದು ಸಾಯುವಂತೆ ಮಾಡುತ್ತಾನೆ. ಹಾವುಗಳೆಲ್ಲಾ ಯಜ್ಞ ಕುಂಡದಲ್ಲಿ ಬಿದ್ದು ಸಾಯುತ್ತಿರುವಾಗ ಅಲ್ಲೇ ಇದ್ದ ಸಣ್ಣ ಹಾವೊಂದು ಈ ಯಜ್ಞವನ್ನು ನಿಲ್ಲಿಸುವಂತೆ ದೇವರನ್ನು ಬೇಡುತ್ತದೆ. ಆಗ ಅಶರೀರವಾಣಿಯೊಂದು ಕೇಳಿಸುತ್ತದೆ. ಯಜ್ಞವನ್ನು ನಿಲ್ಲಿಸುವಂತೆ ಹೇಳುತ್ತದೆ. ಇಲ್ಲವಾದಲ್ಲಿ ತಂದೆಯ ರೀತಿಯಲ್ಲೇ ಸಾವನ್ನಪ್ಪುವುದಾಗಿ ಹೇಳುತ್ತದೆ. ಆಗ ಜನಮೇಜಯ ರಾಜ ಯಜ್ಞವನ್ನು ನಿಲ್ಲಿಸುತ್ತಾನೆ.

ಶಾಪಿಂಗ್ ಮಾಡೋಕೆ ಚೀಪ್ & ಬೆಸ್ಟ್ ಶಾಪಿಂಗ್‌ ಮಾರ್ಕೇಟ್ ಇಲ್ಲಿದೆ

ಆಂಜನೇಯ ದೇವಸ್ಥಾನ

ಸರ್ಪದೋಷ ಜನಮೇಜಯನಿಗೆ ಸುತ್ತಿಕೊಳ್ಳುತ್ತದೆ. ತನ್ನ ತಪ್ಪಿನ ಪ್ರಯಶ್ಚಿತಕ್ಕಾಗಿ ಹಲವಾರು ದೇಗುಲಗಳನ್ನು ನಿರ್ಮಿಸಿದನು. ಅದರಲ್ಲಿ ಆಂಜನೇಯ ದೇವಸ್ಥಾನವೂ ಒಂದು. ಇದು ಅನೇಕ ರಾಜರ ಕಾಲದಲ್ಲಿ ಅಭಿವೃದ್ಧಿಯಾಗಿದೆ.

ಇಷ್ಟಾರ್ಥ ಕಲ್ಪಿಸುವ ಕರುಣಾಮಯಿ

ನುಗ್ಗೇಕೇರಿ ಆಂಜನೇಯ ಎಂದರೆ ಧಾರವಾಡದ ಜನರಿಗೆ ಇಷ್ಟಾರ್ಥ ಕಲ್ಪಿಸುವ ಕರುಣಾಮಯಿಯಾಗಿದ್ದಾನೆ. ಜನರು ತಮ್ಮ ಬೇಡಿಕೆಯನ್ನು ಆಂಜನೇಯನ ಮುಂದೆ ಇರಿಸುತ್ತಾರೆ. ಅವರ ಬೇಡಿಕೆಗಳೆಲ್ಲಾ ಈಡೇರಿದ್ದಾವೆ. ಶನಿವಾರವಂತೂ ಈ ದೇವಸ್ಥಾನದ ಪ್ರದೇಶದಲ್ಲಿ ಜಾತ್ರೆಯಂತೆ ಕಂಗೊಳಿಸುತ್ತದೆ. ಶನಿವಾರ ಆಂಜನೇಯನ ವಾರವಾಗಿರುವುದರಿಂದ ಇಲ್ಲಿಗೆ ಸಾಕಷ್ಟು ಜನ ಬರುತ್ತಾರೆ.

ಬಿಜಾಪುರದಲ್ಲಿರುವ ಇಷ್ಟೊಂದು ದೊಡ್ಡ ನೀರಿನ ಟ್ಯಾಂಕ್ ಈಗ ಏನಾಗಿದೆ ನೋಡಿ

ಧಾರವಾಡದ ನುಗ್ಗೇಕೇರಿ

ಇಲ್ಲಿ ಭಕ್ತರಿಂದ ಅನ್ನದಾನವೂ ನಡೆಯುತ್ತದೆ. ಇಲ್ಲಿ ಕನ್ನಡ, ಹಿಂದಿ ಇಂಗ್ಲೀಷ್ ಭಾಷೆಯಲ್ಲಿ ಹನುಮಾನ್ ಚಾಲೀಸ್ ಮಂತ್ರವನ್ನು ಪಠಿಸುತ್ತಾರೆ, ಬೆಳಗ್ಗೆ ಆರು ಗಂಟೆಗೆಯೇ ಭಕ್ತರು ದೇವಸ್ಥಾನದಲ್ಲಿ ಹಾಜರಾಗುತ್ತಾರೆ. ಧಾರವಾಡದ ನುಗ್ಗೇಕೇರಿ ಆಂಜನೆಯ ಶನಿವಾರ ಬಂದ್ರೆ ಸಾಕು ಜನರು ನುಗ್ಗೇಕೆರೆಗೆ ಬರುತ್ತಾರೆ.

Read More About: india travel temple karnataka

Have a great day!
Read more...

English Summary

During Saturdays, hundreds of devotees from different parts of the state frequent this temple and offer prayers to Lord Hanuman.