ಗಣೇಶ ಚತುರ್ಥಿಯಂದು ಇಲ್ಲಿನ ವೈಭವ ನೋಡಲು ಕಣ್ಣುಗಳೆಡು ಸಾಲದು


ಗಣೇಶ ಚತುರ್ಥಿ ಹಬ್ಬ ಬಂದೇ ಬಿಟ್ಟಿತು. ಸೆ.13ರಂದು ದೇಶದಾದ್ಯಂತ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಲಾಗುತ್ತದೆ. ಬಹುತೇಕರು ಮನೆಯಲ್ಲಿ ಪುಟ್ಟ ಗಣೇಶನ ಪ್ರತಿಷ್ಠಾಪನೆ ಮಾಡ್ತಾರೆ. ಇನ್ನೂ ಕೆಲವರು ಮನೆಯಲ್ಲಿ ಪ್ರತಿಷ್ಠಾಪನೆ ಮಾಡೋದಿಲ್ಲ. ಆದ್ರೆ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡಿರುವ ಗಣೇಶನಲ್ಲಿಗೆ ಹೋಗಿ ಪೂಜೆ ಮಾಡಿಸ್ತಾರೆ.

ಗಣೇಶ ಚತುರ್ಥಿ


ಗಣೇಶ ಚತುರ್ಥಿ ಬಂತೆಂದರೆ ಎರಡು ತಿಂಗಳೂ ಮುಂಚೆನೆ ಗಣೇಶನ ಮೂರ್ತಿ ಮಾಡೋದರಲ್ಲಿ ತೊಡಗುತ್ತಾರೆ. ಭಾರತದಲ್ಲಿ ಅನೇಕ ಗಣೇಶನ ಮಂದಿರಗಳಿವೆ. ಅವುಗಳೆಲ್ಲವೂ ವಿಶೇಷವಾದ್ದೇ. ಆದರೆ ಅವುಗಳಲ್ಲಿ ಕೆಲವು ಬಹಳ ಪ್ರಮುಖವಾದುದು. ಇಲ್ಲಿ ಭಕ್ತರ ದಂಡೇ ಕಾಣಸಿಗುತ್ತದೆ.

ಗಣೇಶನ ಮಂದಿರಗಳು

ಹಾಗಾದ್ರೆ ಬನ್ನಿ ಈ ಗಣೇಶೋತ್ಸವದಂದು ಯಾವ ಗಣೇಶನ ಮಂದಿರಕ್ಕೆ ಹೋಗೋದು ಒಳ್ಳೆಯದು ಅನ್ನೋದನ್ನು ನಾವಿಂದು ನಿಮಗೆ ತಿಳಿಸಿಕೊಡಲಿದ್ದೇವೆ. ಈ ಮಂದಿರಗಳಲ್ಲಿ ಗಣೇಶ ಚತುರ್ಥಿಯ ದಿನ ವಾತಾವರಣವೇ ವಿಭಿನ್ನವಾಗಿರುತ್ತದೆ. ಬಹಳ ವಿಶೇಷವಾಗಿ ಆಚರಿಸಲಾಗುತ್ತದೆ.

9 ಬಗೆಯ ವಿಷದಿಂದ ತಯಾರಾದ ವಿಗ್ರಹ ಇದು; ಅಭಿಷೇಕದ ತೀರ್ಥ ಕುಡಿದ್ರೆ ಏನಾಗುತ್ತೆ ?

ಸಿದ್ಧಿವಿನಾಯಕ ಮಂದಿರ ಮುಂಬೈ

PC: Darwininan

ಮುಂಬೈನಲ್ಲಿರುವ ಸಿದ್ಧಿ ವಿನಾಯಕ ಮಂದಿರವು ಕೇವಲ ಮುಂಬೈನಲ್ಲಿ ಮಾತ್ರವಲ್ಲ ಇಡೀ ದೇಶದಲ್ಲೇ ಪ್ರಸಿದ್ಧವಾದುದು. ಇಲ್ಲಿ ಗಣೇಶ ಚತುರ್ಥಿ ಸಂದರ್ಭ ಉತ್ಸವದ ವಾತಾವರಣ ಕಾಣಸಿಗುತ್ತದೆ. ಹಬ್ಬದ ಎರಡು ದಿನ ಮೊದಲೇ ದೇವಸ್ಥಾನವನ್ನು ಅಲಂಕರಿಸಲಾಗುತ್ತದೆ. ಗಣೇಶ ಚತುರ್ಥಿ ದಿನ ನೀವು ಈ ದೇವಸ್ಥಾನಕ್ಕೆ ದೇವರ ದರ್ಶನಕ್ಕೆಂದು ಹೋದಾಗ ಅಲ್ಲಿ ನಿಮಗೆ ಯಾವುದಾದರೂ ಸೆಲೆಬ್ರಿಟಿ ಸಿಕ್ಕಿದರೂ ಆಶ್ಚರ್ಯಪಡಬೇಕೆಂದೇನಿಲ್ಲ.

ತಲುಪುವುದು ಹೇಗೆ?

ಮೊದಲಿಗೆ ಮುಂಬೈಗೆ ಬನ್ನಿ. ಈ ಮಂದಿರವು ಮುಂಬೈನ ದಾದರ್ ರೈಲ್ವೆ ಸ್ಟೇಶನ್‌ನಿಂದ ಕೇವಲ 15-20 ನಿಮಿಷ ವಾಕಿಂಗ್ ಡಿಸ್ಟೆನ್ಸ್‌ನಲ್ಲಿದೆ ಈ ಮಂದಿರ. ಇದನ್ನು 1801ರಲ್ಲಿ ನಿರ್ಮಿಸಲಾಗಿದೆ. ಮುಂಬೈನಿಂದ ಟ್ಯಾಕ್ಸಿ ಅಥವಾ ಬಸ್‌ ಮೂಲಕವೂ ನೀವು ಇಲ್ಲಿಗೆ ತಲುಪಬಹುದು. ಬೆಳಗ್ಗೆ 5.30ರಿಂದ ರಾತ್ರಿ 9.30ರವರೆಗೆ ನಿಮಗೆ ಗಣೇಶನ ದರ್ಶನ ಭಾಗ್ಯ ಸಿಗುತ್ತದೆ.

ಕನಿಪಾಕಂ ವಿನಾಯಕ ಮಂದಿರ, ಚಿತ್ತೂರು

PC: Adityamadhav83

ಇದೊಂದು ಪ್ರಾಚೀನ ಮಂದಿರವಾಗಿದ್ದು, ಇದರ ನಿರ್ಮಾಣವನ್ನು 11ನೇ ಶತಮಾನದಲ್ಲಿ ಮಾಡಲಾಗಿದೆ. ಈ ಮಂದಿರದಲ್ಲಿರುವ ಗಣೇಶನ ಮೂರ್ತಿಯು ಬಿಳಿ, ಹಳದಿ ಹಾಗೂ ಕೆಂಪು ಬಣ್ಣದ್ದಾಗಿದೆ. ಈ ಮಂದಿದಲ್ಲಿನ ಪವಿತ್ರ ತೀರ್ಥದಲ್ಲಿ ಸ್ನಾನ ಮಾಡೋದರಿಂದ ಎಲ್ಲಾ ಪಾಪ ಪರಿಹಾರವಾಗುತ್ತದೆ ಎನ್ನಲಾಗುತ್ತದೆ.

ಓಂ ನಮಃ ಶಿವಾಯ್ ಹೇಳಿದ್ರೆ ಇಲ್ಲಿ ಏನೆಲ್ಲಾ ಚಮತ್ಕಾರ ನಡೆಯುತ್ತೆ ಗೊತ್ತಾ?

ತಲುಪುವುದು ಹೇಗೆ?

ದೇಶದ ನಾನಾಭಾಗಗಳಿಂದ ಇಲ್ಲಿಗೆ ಬಸ್‌ ಸೌಲಭ್ಯವಿದೆ. ಇಲ್ಲಿಗೆ ಸಮೀಪದ ಏರ್‌ಪೋರ್ಟ್ ಹಾಗೂ ರೈಲು ನಿಲ್ದಾಣವೆಂದರೆ ತಿರುಪತಿ. ತಿರುಪತಿಗೆ ಬಂದು ನಂತರ ಟ್ಯಾಕ್ಸಿ ಮೂಲಕವೂ ನೀವು ಈ ದೇವಾಲಯವನ್ನು ತಲುಪಬಹುದು.

ಮೋತಿ ಡೂಂಗರಿ ಗಣೇಶ ಮಂದಿರ, ಜೈಪುರ

PC:K.vishnupranay

ಇದು ಜೈಪುರದ ವಿಶೇಷ ಗಣೇಶ ಮಂದಿರವಾಗಿದೆ. ಮೋತಿ ಡೂಂಗರಿ ಬೆಟ್ಟದ ಮೇಲಿರುವ ಈ ಮಂದಿರವು1761ರಲ್ಲಿ ನಿರ್ಮಿಸಲಾಗಿತ್ತು. ಇಲ್ಲಿರುವ ಗಣೇಶನ ಮೂರ್ತಿಯು ಸುಮಾರು 500ವರ್ಷ ಹಳೆಯದು ಎನ್ನಲಾಗುತ್ತದೆ. ಈ ದೇವಸ್ಥಾನದ ಪ್ರಾಂಗಣದಲ್ಲಿ ಶಿವಲಿಂಗವೂ ಇದೆ. ಅದಿ ಮಹಾಶಿವರಾತ್ರಿಯಂದು ಮಾತ್ರ ಭಕ್ತರಿಗಾಗಿ ತೆರೆಯಲಾಗುತ್ತದೆ.

ತಲುಪುವುದು ಹೇಗೆ?

ದೇಶದ ವಿವಿಧ ಭಾಗಗಳಿಂದ ಜೈಪುರಕ್ಕೆ ತಲುಪಲು ಸಾಕಷ್ಟು ವ್ಯವಸ್ಥೆಗಳಿವೆ. ವಿಮಾನ, ರೈಲು ಹಾಗೂ ಬಸ್ ಮೂಲಕವೂ ನೀವು ಇಲ್ಲಿಗೆ ತಲುಪಬಹುದು. ಜೈಪುರದಿಂದ ಈ ಮಂದಿರವನ್ನು ತಲುಪಲು ಟ್ಯಾಕ್ಸಿ, ಬಸ್‌ಗಳು ಲಭ್ಯವಿದೆ.

ಮದೂರು ಮಹಾಗಣಪತಿ

PC:Sureshan Karichery

ಕೇರಳದಲ್ಲಿರುವ ಗಣೇಶ ದೇವಾಲಯಗಳಲ್ಲಿ ಮದೂರು ಮಹಾಗಣಪತಿ ದೇವಸ್ಥಾನವು ಪ್ರಸಿದ್ಧವಾದುದು. ಇಲ್ಲಿನ ದೇವಸ್ಥಾನದ ಶಿಲ್ಪಕಲಾಕೃತಿ ಬಹಳ ಸುಂದರವಾಗಿದೆ. ಇಲ್ಲಿನ ಕೆರೆಯಲ್ಲಿ ಸ್ನಾನಮಾಡಿದ್ರೆ ರೋಗಗಳು ಶಮನವಾಗುತ್ತವೆ ಎನ್ನಲಾಗುತ್ತದೆ.

ಇಲ್ಲಿ ಮದುವೆಯಾದವರು ಕೆಲವೇ ಗಂಟೆಯಲ್ಲಿ ವಿಧವೆಯಾರಾಗ್ತಾರೆ !

ಇಡುಗುಂಜಿ ಗಣಪತಿ

PC:Deepak Patil

ಕರ್ನಾಟಕದ ಉತ್ತರ ಕನ್ನಡದ ಇಡುಗುಂಜಿ ಪಟ್ಟಣದಲ್ಲಿರುವ, ಶ್ರೀ ವಿನಾಯಕ ಭಾರತದ ಅತ್ಯಂತ ಜನಪ್ರಿಯ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ. ಇದನ್ನು ಇಡುಗುಂಜಿ ಗಣಪತಿ ಎಂದೇ ಕರೆಯುತ್ತಾರೆ. ವಾರ್ಷಿಕವಾಗಿ ಸುಮಾರು ಒಂದು ದಶಲಕ್ಷ ಭಕ್ತರು ಭೇಟಿ ನೀಡುತ್ತಾರೆ. ಈ ದೇವಾಲಯವು ತನ್ನ ಸಂಕೀರ್ಣವಾದ ವಾಸ್ತುಶಿಲ್ಪ ಮತ್ತು ಸುಂದರವಾದ ವಿನ್ಯಾಸಕ್ಕಾಗಿ ಹೆಸರುವಾಸಿಯಾಗಿದೆ.

Read More About: india travel temple ಭಾರತ

Have a great day!
Read more...

English Summary

Vinayaka Chaturthi, the festival is celebrated with much fervour across Maharashtra, Andhra Pradesh, Karnataka, Madhya Pradesh, Goa and Kerala among other states.